ನೋಕಿಯಾ ಎನ್8: ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡಿಕೊಳ್ಳಿ

By Super
|
ನೋಕಿಯಾ ಎನ್8: ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡಿಕೊಳ್ಳಿ
ನೋಕಿಯಾ ಎನ್8 ಮೊಬೈಲ್ ಹೊಂದಿರುವ ಅಣ್ಣಂದಿರು, ಅಕ್ಕಂದಿರು, ತಮ್ಮತಂಗಿಯರಿಗೆ ಒಂದು ಸಿಹಿಸುದ್ದಿ. ನೋಕಿಯಾ ಕಂಪನಿಯು ಎನ್8 ಮೊಬೈಲಿನ ಸಾಫ್ಟ್ ವೇರನ್ನು ಅಪ್ ಗ್ರೇಡ್ ಮಾಡಲು ಉದ್ದೇಶಿಸಿದೆಯಂತೆ. ಇನ್ನು ಮುಂದೆ ಎನ್8 ಗ್ರಾಹಕರು ಸಿಂಬಿಯನ್ ಅಣ್ಣಾ ಸಾಫ್ಟ್ ವೇರಿಗೆ ಭಡ್ತಿ ಪಡೆಯಲಿದ್ದಾರೆ.

ಹೌದು. ಮೂಲಗಳ ಪ್ರಕಾರ ನೋಕಿಯಾ ಶೀಘ್ರದಲ್ಲಿ ಎನ್8 ಮೊಬೈಲಿನ ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡಲಿದೆ. ಇದರಿಂದ ಎನ್8 ಮೊಬೈಲಿನ ಕೆಲವು ಫೀಚರ್ ಮತ್ತು ಸೌಲಭ್ಯಗಳೂ ಹೆಚ್ಚಾಗಲಿದೆಯಂತೆ.

ಸಾಫ್ಟ್ ವೇರ್ ಪರಿಷ್ಕೃತವಾಗುವುದರಿಂದ ಗ್ರಾಹಕರ ಮೊಬೈಲ್ ಜಗತ್ತಿನ ವೇಗ ಹೆಚ್ಚಾಗಲಿದೆ. ಅಂದ್ರೆ ವೇಗವಾಗಿ ಆಕ್ಸೆಸ್ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ ಒವಿಐ ಮ್ಯಾಪ್. ಹೊಸ ಅಪ್ ಗ್ರೇಡಿನಿಂದಾಗಿ ಗೂಗಲ್ ಮ್ಯಾಪನ್ನು ಸ್ಪೀಡಾಗಿ ಆಕ್ಸೆಸ್ ಮಾಡಿ ನಿಮಗೆ ಬೇಕಾದ ಸ್ಥಳವನ್ನು ಹುಡುಕಬಹುದು. ಕಂಪನಿಯು ಇ7, ಸಿ7 ಮತ್ತು ಸಿ6 ಮೊಬೈಲನ್ನು ಕೂಡ ಪರಿಷ್ಕರಿಸಲಿದೆ ಎಂದು ಮೂಲಗಳು ಹೇಳಿವೆ.

ಎನ್8 ಮೊಬೈಲ್ ಬಳಕೆದಾರರು ಮೂರು ಸರಳ ವಿಧಾನದ ಮೂಲಕ ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡಿಕೊಳ್ಳಬಹುದಂತೆ. ಕಂಪನಿಯು ಅಧಿಕೃತವಾಗಿ ಶೀಘ್ರದಲ್ಲಿ ಈ ಮೂರು ವಿಧಾನಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಹೊಸ ಅಪ್ ಗ್ರೇಡಿನಿಂದಾಗಿ ಸ್ಮಾರ್ಟ್ ಫೋನ್ ವಲಯದಲ್ಲಿ ನೋಕಿಯಾ ಇನ್ನಷ್ಟು ವಿಜ್ರಂಭಿಸುವ ನಿರೀಕ್ಷೆಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X