ಈ ಮೊಬೈಲುಗಳಲ್ಲಿ ಯಾರು ರಾಜ, ಯಾರು ಮಹಾರಾಜ?

By Super
|
ಈ ಮೊಬೈಲುಗಳಲ್ಲಿ ಯಾರು ರಾಜ, ಯಾರು ಮಹಾರಾಜ?
ಸ್ಯಾಮ್ ಸಂಗ್ ಮೊಬೈಲ್ ಕಂಪೆನಿ ಪ್ರಪಂಚಕ್ಕೆಲ್ಲಾ ಚಿರಪರಿಚಿತ. ಈ ಕಂಪೆನಿಯ ಉತ್ಪನ್ನಗಳು ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಪೈಪೋಟಿ ನೀಡುತ್ತಿವೆ. ಈಗಾಗಲೇ ಸಾಕಷ್ಟು ಹೊಸ ಮೊಬೈಲುಗಳು ಮಾರುಕಟ್ಟೆಯಲ್ಲಿ ಇವೆಯಾದರೂ ಮತ್ತೆ 2 ಆಧುನಿಕ ಫೋನ್ ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್ ಸಂಗ್.

ಅವು ಸ್ಯಾಮ್ ಸಂಗ್ ವೇವ್ 2 s8350 ಮತ್ತು ವೇವ್ 3.

ವಿಶೇಷತೆಗಳು:

* ವೇವ್ 2 s8350 ವೇವ್ ಮಾದರಿಯ ಯಶಸ್ವೀ ಮೊಬೈಲ್. ಸ್ಲೈಡರ್ ವಿನ್ಯಾಸದ ಕ್ಯಾಂಡಿ ಬಾರ್ ಆಕಾರದ ಇದರಲ್ಲಿ 3.7 ಇಂಚ್ ವಿವಿಡ್ LCD ಡಿಸ್ ಪ್ಲೇ ಇದೆ. ಇದು ಬಾಡಾ 2 ಆವೃತ್ತಿಯ ಮೂಲಕ ಕಾರ್ಯ ನಿರ್ವಹಿಸುತ್ತದೆ. ಆದರೆ ಈಗ ಅದಕ್ಕಿಂತ ಹೊಸದಾಗಿರುವ ವೇವ್ 3 2.1 OS ಮೂಲಕ ಕೆಲಸ ಮಾಡುತ್ತದೆ.

* ವೇವ್ 2, 3.7 ಇಂಚ್ ಡಿಸ್ ಪ್ಲೇ, 2.3 ಮೆಗಾ ಪಿಕ್ಸೆಲ್ ಕ್ಯಾಮೆರಾ, 2048x 1536 ಪಿಕ್ಸೆಲ್ಸ್ ರೆಸೊಲ್ಯೂಷನ್ ಹೊಂದಿದ್ದರೆ ವೇವ್ 3 s9500 or s8600, 4 ಇಂಚ್ ಕೆಪಾಕ್ಟಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, HD ವಿಡಿಯೋ 720p ಹೊಂದಿದೆ. ಎರಡರಲ್ಲೂ ಡಾಲ್ಫಿನ್ 2.0 ಬ್ರೌಸರ್ ಇದೆ.

* ಎರಡರಲ್ಲೂ ಇರುವ ಮ್ಯೂಸಿಕ್ ಪ್ಲೇಯರ್ ಒಂದೇ ರೀತಿಯದಾಗಿದ್ದರೂ ವಿಡಿಯೋ ಪ್ಲೇಯರ್ ನಲ್ಲಿ ವ್ಯತ್ಯಾಸ ಇದೆ. HD ಫಾರ್ಮೆಟ್ಸ್ ಗಳಾದ mp4 and Xvid, DivX, wmv, h.263, h.264 ಗಳು ವೇವ್ 3 ನಲ್ಲಿವೆ. ಆದರೆ ವೇವ್ 2 ನಲ್ಲಿ HD ಫಾರ್ಮೆಟ್ ವಿಡಿಯೋ ರೆಕಾರ್ಡಿಂಗ್ ಇಲ್ಲ.

* ಎರಡರಲ್ಲೂ ವೈ-ಫೈ ಇದೆ. ವೇವ್ 3 ನಲ್ಲಿ 3G ಕನೆಕ್ಷನ್ ಇದೆ. ಬ್ಯಾಡರಿ ಬ್ಯಾಕಪ್ ಚೆನ್ನಾಗಿದೆ.

* ವೇವ್ 2 ದಲ್ಲಿ 2.1 A2DP ಆವೃತ್ತಿಯ ಬ್ಲೂ ಟೂಥ್ ಇದ್ದರೆ ವೇವ್ 3 ದಲ್ಲಿ ಹೊಸ ಆವೃತ್ತಿ ಇದೆ. ಜೊತೆಗೆ TV ಜ್ಯಾಕ್, ಮೈಕ್ರೋ SD ಕಾರ್ಡ್ ಕೂಡ ಲಭ್ಯ.

* ವೇವ್ 3 ದಲ್ಲಿ ವಿಸ್ತರಿಸಬಹುದಾದ 32 GB ಮೆಮೋರಿ ಇದ್ದರೆ ವೇವ್ 2 ದಲ್ಲಿ ಕೇವಲ ಆಂತರಿಕ 16 GB ಇದೆ. ಎರಡರಲ್ಲೂ ಸೋಷಿಯಲ್ ನೆಟ್ ವರ್ಕಿಂಗ್ ಸಮಾನವಾಗಿದೆ. ಆದರೆ ವೇವ್ 3 ಕಾರ್ಯಕ್ಷಮತೆ ಅಧಿಕವಾಗಿದೆ.

* ಅತೀ ಮುಖ್ಯವಾದ ವಷಯ ಬೆಲೆ ಹೀಗಿದೆ. ವೇವ್ 2 ರು. 16000. ಇದೀಗ ರು. 15,000 ಕ್ಕೆ ಇಳಿಯಬಹುದೆಂಬ ವದಂತಿಯಿದೆ. ಆದರೆ ವೇವ್ 3 ಬೆಲೆ ರು. 18,000 ದಿಂದ ರು. 20,000 ಆಗಬಹುದು. ವೇವ್ 3 ಬೆಲೆ ಮತ್ತು ಬಿಡುಗಡೆಯ ದಿನಾಂಕ ನಿರ್ಧಾರವಾಗಬೇಕಿದೆ.

ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದೀರಲ್ಲವೇ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X