ಸೋನಿ ಎರಿಕ್ಸನ್ ಮೊಬೈಲಿನಲ್ಲಿ ಮಾತಿನ ಜೊತೆ ಆಟವೂ ಇದೆ

Posted By: Staff

ಸೋನಿ ಎರಿಕ್ಸನ್ ಮೊಬೈಲಿನಲ್ಲಿ ಮಾತಿನ ಜೊತೆ ಆಟವೂ ಇದೆ
ಸೋನಿ ಕಂಪೆನಿಯಿಂದ ಈಗ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಹೊರ ಬರುತ್ತಿದೆ. ಅದು ಗೇಮಿಂಗ್ ಸ್ಪೆಷಲಿಷ್ಟ್ ಕೂಡ ಆಗಿರುವುದು ವಿಶೇಷ. ಇದಕ್ಕೆ ಸೋನಿ ಎರಿಕ್ಸನ್ ಎಕ್ಸ್ ಪೆರಿಯಾ ಪ್ಲೇ ಎಂದು ಹಸರಿಟ್ಟಿದ್ದಾರೆ. ಇದನ್ನು ಶಾರ್ಟ್ & ಸ್ವೀಟ್ ಆಗಿ PSP ಎಂದು ಕರೆಯಲಾಗುತ್ತಿದೆ.

ಮೊಬೈಲ್ ಮಾರುಕಟ್ಟೆಯನ್ನು ಸಾಕಷ್ಟು ಸ್ಟಡಿ ಮಾಡಿರುವ ಸೋನಿ ಕಂಪೆನಿ ಇದೀಗ ಗೇಮಿಂಗ್ ಸ್ಪೆಷಲ್ ಬಿಡುಗಡೆ ಮಾಡಿದರೆ ಯಶಸ್ಸು ಗಳಿಸಬಹುದೆಂದು ಲೆಕ್ಕ ಹಾಕಿದೆ.

ಈಗಾಗಲೇ ಇರುವ ಸಾಕಷ್ಟು ವಿಡಿಯೋ ಗೇಮ್ ಗಳೊಂದಿಗೆ ಇನ್ನೂ ಹೆಚ್ಚಿನ ಸುಮಾರು 20 ಗೇಮ್ ಗಳನ್ನು ನೀಡುವ ಉತ್ಸಾಹದಲ್ಲಿದೆ, ಸೋನಿ ಎರಿಕ್ ಸನ್ ಕಂಪೆನಿ. ವಿಡಿಯೋ ಗೇಮ್ಸ್ ಗಳು ಇದರಲ್ಲಿ ಹೇರಳವಾಗಿರುವುದರ ಜೊತೆಗೆ ಸಾಕಷ್ಟು ಆಯ್ಕೆಗೂ ಅವಕಾಶವಿದೆ.

ಈ ಹೊಸ ಎಕ್ಸ್ ಪೆರಿಯಾ ಪ್ಲೇ ದ ಪ್ರಮುಖ ಆಕರ್ಷಣೆ ಎಂದರೆ ಅತಿ ಪ್ರಸಿದ್ಧವಾದ ಗೇಮಿಂಗ್ 'ಕ್ಲಾನ್ಸಿಸ್ ರೇನ್ ಬೋವ್ ಸಿಕ್ಸ್ (Clancy"s Rainbow Six)'.
E3 ಅಂತರಾಷ್ಟ್ರೀಯ ಗಿಜ್ಮೋ ಈವೆಂಟಿನಲ್ಲಿ ಈಗಾಗಲೇ ಹತ್ತು ಗೇಮಿಂಗ್ ಗ್ರಾಫಿಕ್ಸ್ ಹಾಗೂ ಕಾರ್ಯ ನಿರ್ವಹಣೆಯನ್ನು ಪ್ರದರ್ಶಿಸುವ ಮೂಲಕ ಸೋನಿ ಎರಿಕ್ಸನ್ ಯಶಸ್ಸಿಗೆ ಅತಿ ಸನಿಹದಲ್ಲಿದೆ.

ಇನ್ನೂ ಮುಂದೆ ಆಂಡ್ರಾಯ್ಡ್ ಪ್ಲಾಟ್ ಫಾರ್ಮ್ ಮೂಲಕ ಸುಮಾರು 150 ಗೇಮ್ ಗಳನ್ನು ಪ್ಲೇ ದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಒರಿಜಿನಲ್ ಸೋನಿಗಿಂತ ಇದರಲ್ಲಿ ಗ್ರಾಫಿಕ್ಸ್ ಅಂಶಗಳು ಹೇರಳವಾಗಿರುವುದರಿಂದ ಸಹಜವಾಗಿಯೇ ಇದು ಜನರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.

ಎಕ್ಸಪೀರಿಯನ್ಸ್ ಪ್ಯಾಕ್ ಮೂಲಕ ಹಿಟ್ ನೀಡಲು ಕಾತರವಾಗಿರುವ ಸೋನಿ ಎರಿಕ್ ಸನ್ ಇದರಲ್ಲಿ D300 ಮಲ್ಟಿಮೀಡಿಯಾ ಡಾಕ್, ಪಾಕೆಟ್ USB ಕೇಬಲ್ಸ್, ಸ್ಟ್ಯಾಂಡರ್ಡ್ ಆಡಿಯೋ ಕೇಬಲ್ ಮುಂತಾದವುಗಳಿಂದ ಕೂಡುರುವ ಇದು ಗೇಮ್ ಟೋಟಲ್ ಪ್ಯಾಕೇಜ್... ದರ ಹಾಗೂ ಬೆಲೆ ಇನ್ನೂ ನಿಗದಿಯಾಗಿಲ್ಲ. ಕಾರಣ ಇದು ಬರುಲಿರುವುದು ಇನ್ನೂ ಸಾಕಷ್ಟು ಕಾಲದ ನಂತರ!


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot