ವೆಸ್ಟನ್ ತಂದ 3 ಸುಂದರ ಮೊಬೈಲ್ ಫೋನ್

Posted By: Staff

ವೆಸ್ಟನ್ ತಂದ 3 ಸುಂದರ ಮೊಬೈಲ್ ಫೋನ್
ಹೆಚ್ಚು ಪರಿಚಿತವಲ್ಲದ ಮೊಬೈಲ್ ಕಂಪನಿ ಮಾಲಿಕೆಗೆ ಹೊಸ ಸೇರ್ಪಡೆ ವೆಸ್ಟನ್. ಇದು ಹೆಚ್ಚು ಜನಪ್ರಿಯವಲ್ಲ ನಿಜ. ಆದರೆ ಸದ್ಯ ಮೂರು ಚಂದದ ಮೊಬೈಲ್ ಫೋನ್ ಹೊರತರುವ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಪರಿಚಿತವಾಗಲು ಹೊರಟಿದೆ.

ವೆಸ್ಟನ್ ಕಂಪನಿಯು WB 808, WB 606 ಮತ್ತು WB 404 ಎಂಬ ಮೂರು ಹ್ಯಾಂಡ್ ಸೆಟ್ ಹೊರತಂದಿದೆ. ಇದು ನೋಡಲು ಆಕರ್ಷಕವಾಗಿದೆ. ಫೀಚರ್ ವಿಷಯದಲ್ಲೂ ವೆಸ್ಟನ್ ಹ್ಯಾಂಡ್ ಸೆಟ್ ಗಳು ಮೋಸಮಾಡುವುದಿಲ್ಲ. ಕಂಪನಿ ಈ ಮೂರು ಮೊಬೈಲನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಈ ಮೂರು ಮೊಬೈಲ್ ಗಳ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇವುಗಳಲ್ಲಿರುವ ಫೀಚರ್ ಗಳನ್ನು ನೋಡಿದರೆ ದರ ಹೆಚ್ಚಿರಬಹುದು ಅನಿಸುತ್ತದೆ. ಆದರೆ ಈಗ ಕಡಿಮೆ ದರಕ್ಕೂ ಹೆಚ್ಚು ಮೊಬೈಲ್ ಫೀಚರ್ ಇರೋ ಮೊಬೈಲ್ ಫೋನ್ ಗಳು ದೊರಕುವುದರಿಂದ ಇದಮಿಥಂ ದರ ಹೇಳಲು ಸಾಧ್ಯವಿಲ್ಲ.

WB 404 ಫೀಚರ್ ಗಳು
* 1.3 ಮೆಗಾ ಫಿಕ್ಸೆಲ್ ಕ್ಯಾಮೆರಾ
* ಎಂಪಿ3 ಪ್ಲೇಯರ್
* ವಿಡಿಯೋ ಪ್ಲೇಯರ್
* ಎಫ್ಎಂ ಸೌಲಭ್ಯ
* ಕತ್ತಲಲ್ಲಿ ದಾರಿತೋರಿಸಲು ಟಾರ್ಚ್
* ಬ್ಲೂಟೂಥ್, ಜಿಪಿಆರ್ಎಸ್, ವ್ಯಾಪ್ ಸೌಲಭ್ಯ
* ಸ್ಕ್ರೀನ್ 2 ಇಂಚು

ವೆಸ್ಟರ್ನ್ WB 808 ಪ್ರಮುಖ ಫೀಚರ್
* ಸಾಮಾನ್ಯ ಮೊಬೈಲಿನಲ್ಲಿರುವ ಎಲ್ಲಾ ಫೀಚರುಗಳಿವೆ
* ಎಂಪಿ3 ಪ್ಲೇಯರ್
* ಮೋಷನ್ ಸೆನ್ಸಾರ್
* ಮೊಬೈಲ್ ಟ್ರಾಕರ್
* 2.4 ಇಂಚಿನ ಸ್ಕ್ರೀನ್ ಫೋನ್
* ಒಪೆರಾ ಮಿನಿ ಬ್ರೌಸರ್
* ವರ್ಲ್ಡ್ ಕ್ಲಾಕ್, ಕ್ಯಾಲೆಂಡರ್, ಎಫ್ ಎಂ ಇತ್ಯಾದಿ
* ಟಾಕ್ ಟೈಂ ಬ್ಯಾಟರಿ ಬ್ಯಾಕಪ್: 3ರಿಂದ 3.5 ಗಂಟೆ

ವೆಸ್ಟನ್ WB 606 ಪ್ರಮುಖ ಫೀಚರ್ಸ್
* ಪ್ರಮುಖ ಎಲ್ಲಾ ಫೀಚರಗಳು ಇವೆ. ಉಳಿದಂತೆ
* ಮೆಮೊರಿ ಸಂಗ್ರಹ ಸಾಮರ್ಥ್ಯ 64 ಎಂಬಿ.
* ಇದಕ್ಕೆ 8 ಜಿಬಿ ಮೆಮೊರಿ ಕಾರ್ಡ್ ಹಾಕಿ ಸಂಗ್ರಹ ಸಾಮರ್ಥ್ಯ ವಿಸ್ತರಿಸಬಹುದು.
* 1.3 ಮೆಗಾಪಿಕ್ಸೆಲ್ ಕ್ಯಾಮೆರಾ, ವೆಬ್ ಕ್ಯಾಮ್ ಸೌಲಭ್ಯವೂ ಇದೆ.
* ಜಿಪಿಎಸ್ ಮತ್ತು ಬ್ಲೂಟೂಥ್ ಸಾಧನ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot