ಐಫೋನ್ ಜೊತೆ ಮೈಕ್ರೋಮ್ಯಾಕ್ಸ್ ಸ್ಪರ್ಧೆ; ಜಯ ಯಾರಿಗೆ!

Posted By: Staff

ಐಫೋನ್ ಜೊತೆ ಮೈಕ್ರೋಮ್ಯಾಕ್ಸ್ ಸ್ಪರ್ಧೆ; ಜಯ ಯಾರಿಗೆ!
ಮೈಕ್ರೋಮ್ಯಾಕ್ಸ್ ಕಂಪೆನಿ ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಅದೀಗ ಜನಪ್ರಿಯ ಕಂಪೆನಿ ಆಪಲ್ ಐಫೋನ್ ನೊಂದಿಗೆ ಸ್ಪರ್ಧಗೆ ರೆಡಿಯಾಗಿದೆ.

ಮೈಕ್ರೋಮ್ಯಾಕ್ಸ್ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೊನ್ "ಮೈಕ್ರೋಮ್ಯಾಕ್ಸ್ A70" ಮೂಲಕ ಇದರ ಪ್ರತಿಸ್ಪರ್ಧಿ ಆಪಲ್ ಗೆ "ನಾನು ಈ ಫೋನ್ ಕೊಡಬಲ್ಲೆ" ಎಂಬ ಘೋಷಣೆಯೊಂದಿಗೆ ಮಾರುಕಟ್ಟೆಗೆ ಬಿಡಲಿದೆ.

ನೋಕಿಯಾ ಮೊಬೈಲ್ ಕಂಪೆನಿಗೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿರುವ ಈ ಸ್ವದೇಶಿ ಮೈಕ್ರೋಮ್ಯಾಕ್ಸ್ ಕಂಪೆನಿ ಇದೀಗ ಐಫೋನ್ ನೊಂದಿಗೆ ಸ್ಪರ್ಧೆಗೆ ಬಿದ್ದಿರುವುದು ಅದರ ಆತ್ಮವಿಶ್ವಾಸವನ್ನು ಜಾಹೀರುಪಡಿಸುತ್ತಿದೆ.

ಈ ಹೊಸ ಸ್ಮಾರ್ಟ್ ಫೊನ್ "ಮೈಕ್ರೋಮ್ಯಾಕ್ಸ್ A70", ಆಂಡ್ರಾಯ್ಡ್ 2.2 ಆವೃತ್ತಿ ಹೊಂದಿದೆ, ಜೊತೆಗೆ 600 MHz ಪ್ರೊಸೆಸರ್, TFT ಕೆಪಾಕ್ಟಿವ್ ಟಚ್ ಸ್ಕ್ರೀನ್, 256K ಬಣ್ಣಗಳಲ್ಲಿ ಇದಿ ಲಭ್ಯ.

ಇದರಲ್ಲಿ ವೈ-ಫೈ, GPS, ಬ್ಲೂಟೂಥ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಎಲ್ಲವೂ ಇದೆ.

ಈಗಾಗಲೇ ಶೇ. 10 ರಷ್ಟು ಷೇರು ವ್ಯವಹಾರ ಹೊಂದಿ ಸೇಫರ್ ಸೈಡ್ ನಲ್ಲಿರುವ ಈ ಕಂಪೆನಿ, ಇನ್ನು ಮುಂದೆ ಸಾಕಷ್ಟು ಲಾಭ ಹೊಂದುವ ನಿರೀಕ್ಷೆಯಲ್ಲಿದೆ. ಸುಮಾರು 40 ನಮೂನೆಯ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುವ ಯೋಜನೆ ಈ ಕಂಪೆನಿಯದ್ದಾಗಿದೆ. ಸದ್ಯಕ್ಕೆ ಈ ಹೊಸ ಸ್ಮಾರ್ಟ್ ಫೊನ್ "ಮೈಕ್ರೋಮ್ಯಾಕ್ಸ್ A70" ಬೆಲೆ ರು. 7.999.

ಇನ್ನು ಕಂಪೆನಿಯು ಈ ಸ್ಪರ್ಧೇಯಲ್ಲಿ ವಿಜಯ ಹೊಂದುವುದೋ ಅಥವಾ ಅಪಜಯ ಹೊಂದುವುದೋ ಎಂಬುದನ್ನು ಕಾಲ ನಿರ್ಧರಿಸಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot