ಹೊಸ ಝೆನ್ 3G ಫೋನ್ ಮಾರುಕಟ್ಟೆಗೆ ಶೀಘ್ರದಲ್ಲಿ

By Super
|
ಹೊಸ ಝೆನ್ 3G ಫೋನ್ ಮಾರುಕಟ್ಟೆಗೆ ಶೀಘ್ರದಲ್ಲಿ
ಝೆನ್ ಮೊಬೈಲ್ ಕಂಪೆನಿ ಗ್ರಾಹಕರಿಗೆ ಹೊಸದೇನಲ್ಲ. ಸಾಕಷ್ಟು ಮೊಬೈಲುಗಳನ್ನು ಮಾರುಕಟ್ಟೆಗೆ ತಂದಿರುವ ಈ ಕಂಪೆನಿ ಇದೀಗ ಹೊಸದೊಂದು ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ.

ಇದು 3G ತಂತ್ರಜ್ಞಾನದ ಝೆನ್ A60. ಆಧುನಿಕ 3D ತಂತ್ರಜ್ಞಾನ ಹೊಂದಿರುವುದರಿಂದ ಇದು ಸಾಕಷ್ಟು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ.

ಈ ಹೊಸ ಝೆನ್ A60, ಬಿಳಿ ಹಾಗೂ ಕಪ್ಪು ಈ ಎರಡು ಬಣ್ಣಗಳಲ್ಲಿ ಲಭ್ಯ. 2.4 ಇಂಚ್ ಅಳತೆಯ ಈ ಫೋನ್ ಸ್ಟೈಲಿಷ್ ವಿನ್ಯಾಸ ಹಾಗೂ 78 MB ವರೆಗಿನ ಸ್ಟೋರೇಜ್ ಹೊಂದಿದೆ. ವಿಸ್ತರಿಸಬಹುದಾದ 16 GB ಮೆಮೊರಇ ಹೊಂದಿದೆ.

ಮ್ಯೂಸಿಕ್, ವಿಡಿಯೋ ಹಾಗೂ ಲೈವ್ ಟಿವಿ ಆಯ್ಕೆ ಸೌಲಭ್ಯವಿರುವ ಈ ಫೋನ್ ನಲ್ಲಿ ಸಾಕಷ್ಟು ಮನರಂಜನೆಗೆ ಅವಕಾಶವಿದೆ.

ಡ್ಯುಯಲ್ ಸಿಮ್, 2G & 3G ಸೌಲಭ್ಯವಿರುವ ಈ ಫೋನ್ 3G ಫೋನ್ ಎಂದೇ ಮನೆಮಾತಾಗಿದೆ. 3.2 MP + VGA ಕ್ಯಾಮೆರಾ, 240 X 320 ರೆಸೊಲ್ಯೂಷನ್, 25 fps ಸ್ಪೀಡ್ ಹೊಂದಿದೆ.

ಸೋಷಿಯಲ್ ನೆಟ್ ವರ್ಕ್ ಗಳಾದ ಫೇಸ್ ಬುಕ್, ಟ್ವಿಟ್ಟರ್, Skype ಕರೆಗಳು, ಗೂಗಲ್ ಸೌಲಭ್ಯ ಎಲ್ಲವೂ ಇದರಲ್ಲಿದೆ

ಇಷ್ಟೆಲ್ಲ ವಿಶೇಷತೆಗಳು ಇರುವ ಈ ಹೊಸ ಝೆನ್ A60 ಫೊನ್ ಬೆಲೆ ರು. 3,249. ಬೆಲೆಗೆ ಹೋಲಿಸಿ ನೋಡಿದಾಗ ಈ ಫೋನ್ ಖರೀದಿ ಸಾಕಷ್ಟು ಒಳ್ಳೆಯ ಆಯ್ಕೆ ಎಂದೇ ಹೇಳಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X