Subscribe to Gizbot

ನೋಕಿಯಾ ಸಿ3-01 ಚಿನ್ನದ ಮೊಬೈಲ್ ಮಾರುಕಟ್ಟೆಗೆ

Posted By: Staff

ನೋಕಿಯಾ ಸಿ3-01 ಚಿನ್ನದ ಮೊಬೈಲ್ ಮಾರುಕಟ್ಟೆಗೆ
ಚಿನಿವಾರ ಪೇಟೆಯ ಚಿನ್ನದ ದರವನ್ನು ನೆನಪಿಸಿಕೊಳ್ಳದಿರಿ. ನೋಕಿಯಾ ಐಷಾರಾಮಿ ಮೊಬೈಲ್ ಫೋನೊಂದನ್ನು ಹೊರತಂದಿದೆ. ಇದರ ಹೆಸರು ನೋಕಿಯಾ ಸಿ3-01 ಗೋಲ್ಡ್ ಎಡಿಷನ್. ಚಿನ್ನದ ಮೋಹ ಇರುವರು ಕೂಡ ಈ ವಿನೂತನ ಮೊಬೈಲ್ ಖರೀದಿಸಬಹುದು.

ಈ ಮೊಬೈಲಿಗೆ ಎಷ್ಟು ಗ್ರಾಂ ಚಿನ್ನದ ಲೇಪನ ಮಾಡಲಾಗಿದೆ ಎಂದು ಗೊತ್ತಿಲ್ಲ. ಆದರೆ ಕಂಪನಿಯ ಪ್ರಕಾರ ಈ ಮೊಬೈಲಿಗೆ 18 ಕ್ಯಾರೆಟ್ ಶುದ್ಧ ಚಿನ್ನದ ಲೇಪನ ಮಾಡಲಾಗಿದೆ. ಕಂಪನಿಯು ಕಳೆದ ವರ್ಷ ಸಿ3-01 ಮೊಬೈಲನ್ನು ಹೊರತಂದಿತ್ತು. ಇದು ನೋಡಲು ಕ್ಲಾಸಿಕ್ ಫೀಚರ್ಸ್ ಹೊಂದಿದ್ದರೂ ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿತ್ತು.

ನೂತನ ನೋಕಿಯಾ ಸಿ3-01 ಮೊಬೈಲನ್ನು ಕೇವಲ ಚಿನ್ನದಲ್ಲಿ ಅದ್ದಿ ಮಾತ್ರ ಹೊರತರಲಾಗಿಲ್ಲ. ಇದರ ಫೀಚರ್ ಗಳಲ್ಲೂ ಒಂದಿಷ್ಟು ಬದಲಾವಣೆಯಾಗಿದೆ. ಒಂದು ಗೀಗಾಹರ್ಟ್ಸ್ ಪ್ರೊಸೆಸರ್ ಇರುವುದರಿಂದ ಪ್ರಸಕ್ತ ಚಿನ್ನದ ಬೆಲೆಯಂತೆ ಈ ಮೊಬೈಲ್ ಸ್ಪೀಡ್ ಕೂಡ ವೇಗವಾಗಿದೆ. ಆದರೆ ಈ ಮೊಬೈಲಲ್ಲಿ ಅಪರೇಟಿಂಗ್ ಸಿಸ್ಟಮ್ ಇಲ್ಲ ಅನ್ನೋದು ಒಂದು ಪ್ರಮುಖ ಕೊರತೆ.

ಹೊಸ ಚಿನ್ನದ ಮೊಬೈಲ್ 2.4 ಇಂಚಿನ ಟಚ್ ಸ್ಕ್ರೀನ್ ಪರದೆ ಹೊಂದಿದೆ. ಇದು 256 ಸಾವಿರ ಬಣ್ಣಗಳಿಗೆ ಸಪೋರ್ಟ್ ನೀಡುತ್ತದೆ. ಸ್ಕ್ರೀನ್ ರೆಸಲ್ಯೂಷನ್ 240 X 320 ಪಿಕ್ಸೆಲ್ ಆಗಿದೆ. ಈ ಫೋನಿನ ಆಂತರಿಕ ಸಂಗ್ರಹ ಸಾಮರ್ಥ್ಯ 140 ಎಂಬಿ ಮತ್ತು ಕೇವಲ 64 ಎಂಬಿ RAM ಹೊಂದಿದೆ. ಆದರೆ ಮೈಕ್ರೊಎಸ್ ಡಿ ಮೆಮೊರಿ ಕಾರ್ಡ್ ಹಾಕಿ ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ಈ ಮೊಬೈಲಿನಲ್ಲಿ ಕ್ಲಾಸಿಕ್ 32 ಜಿಪಿಆರ್ಎಸ್ ಸೌಲಭ್ಯವಿದೆ. ಪುಣ್ಯಕ್ಕೆ 3ಜಿ ನೆಟ್ ವರ್ಕ್ ಗೆ ಸಪೋರ್ಟ್ ಮಾಡುತ್ತಿದೆ. ವೈಫೈ, 2.1 ವರ್ಸನ್ ಬ್ಲೂಟೂಥ್, ಮೈಕ್ರೊ ಯುಎಸ್ ಬಿ, ವಿಡಿಯೋ ರೆಕಾರ್ಡಿಂಗ್ ಇತ್ಯಾದಿಗಳಿವೆ. ನೋಕಿಯಾ ಚಿನ್ನದ ಮೊಬೈಲಿನಲ್ಲಿ ಎಲ್ ಇಡಿ ಫ್ಲಾಷ್ ಇರುವ 5ಎಂಪಿ ಕ್ಯಾಮರಾವಿದೆ.

ಪುಣ್ಯಕ್ಕೆ Nokia C3-01 Gold Edition ಇನ್ನೂ ಭಾರತಕ್ಕೆ ಬಂದಿಲ್ಲ. ಈ ಐಷಾರಾಮಿ ಮೊಬೈಲಿಗೆ ಭಾರತದಲ್ಲಿ ಸುಮಾರು 16,620 ರುಪಾಯಿ ಇರಲಿದೆ. ಚಿನ್ನದ ಬೆಲೆಯೊಂದಿಗೆ ಇದರ ದರವೂ ಇನ್ನಷ್ಟು ಹೆಚ್ಚಾಗುತ್ತಾ ಗೊತ್ತಿಲ್ಲ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot