ಸೋನಿ ಎರಿಕ್ಸನ್ ಮೊಬೈಲಿನಲ್ಲಿ ಈಗ ವಾಕ್ ಮನ್ ಇದೆ

Posted By: Staff

ಸೋನಿ ಎರಿಕ್ಸನ್ ಮೊಬೈಲಿನಲ್ಲಿ ಈಗ ವಾಕ್ ಮನ್ ಇದೆ
ಮೊಬೈಲ್ ಇಂದು ಎಲ್ಲವೂ ಆಗಿದೆ. ಮೊಬೈಲಿನಲ್ಲಿರುವ ಸಾಕಷ್ಟು ವಿಶೇಷತೆಗಳು ಇದಕ್ಕೆ ಕಾರಣವಾಗಿದೆ. ಮೊಬೈಲ್ ನಲ್ಲಿ ಈಗ ಕ್ಯಾಮೆರಾ, ಕ್ಯಾಲ್ಕ್ಯುಲೇಟರ್, ಅಲಾರ್ಮ್, MP3. MP4, ಹೀಗೆ ಸಕಲ ಸಾಧನಗಳೂ ಲಭ್ಯ.

ಇಷ್ಟು ದಿನ ಮೊಬೈಲಿನಿಂದ ಆಚೆ ಉಳಿದಿದ್ದ ವಾಕ್ ಮನ್ ಇದೀಗ ಮೊಬೈಲ್ ಒಳಗಡೆ ಕುಳಿತುಕೊಂಡಿದೆ. ಇದು ಸೋನಿ ಎರಿಕ್ಸನ್ ಸಾಧನೆ.

ಹೌದು, ಹೊಸ "ಸೋನಿ ಎರಿಕ್ಸನ್ ಲೈವ್" ವಾಕ್ ಮನ್ ಮೊಬೈಲ್ ಸಂಪೂರ್ಣ ಸಂಗೀತಕ್ಕೆ ಮೀಸಲು ಎನ್ನಬಹುದಾದರೂ ಉಳಿದ ಸಾಮಾನ್ಯ ಫೀಚರ್ಸ್ ಗಳೂ ಇದರಲ್ಲಿ ಲಭ್ಯ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಆಗಿರುವ ಇದರಲ್ಲಿ ಲಭ್ಯವಿರುವ ವಿಶೇಷತೆಗಳು ಹೀಗಿವೆ:

ಮೊದಲನೆಯದಾಗಿ ಸಂಗೀತಕ್ಕೇ ಮೀಸಲಾಗಿರುವ ಎಕ್ಸಕ್ಲುಸಿವ್ ಬಟನ್. ಇದು ನೇರವಾಗಿ ನಿಮ್ಮನ್ನು ಸಂಗೀತಲೋಕಕ್ಕೆ ಕರದೊಯ್ಯುತ್ತದೆ. ಫೇಸ್ ಬುಕ್ ಇಂಟಿಗ್ರೇಶನ್ ಇದರಲ್ಲಿರುವುದು ಇನ್ನೊಂದು ವಿಶೇಷತೆ.

ಇದರಲ್ಲಿ 3.2 ಇಂಚುಗಳ ಕೆಪಾಕ್ವಿವ್ ಸ್ಕ್ರೀನ್, 320 X 480 ರೆಸೊಲ್ಯೂಷನ್, ಮಲ್ಟಿ ಟಚ್ ಸೌಲಭ್ಯ ಲಭ್ಯವಿದೆ. ಅಕರ್ಷಕ 16 ಬಣ್ಣಗಳು, 1GHz ಪ್ರೊಸೆಸರ್, ಫ್ರಂಟ್ ಕ್ಯಾಮೆರಾ, ಸ್ಕೈಪ್ ವಿಡಿಯೋ ಕಾಲಿಂಗ್, 2G and 3G ನೆಟ್ ವರ್ಕ್, 106 X 56.5 X 14.2 mm ಡೈಮೆನ್ಷನ್, 115,MP g ಇದೆ.

320 MB ಆಂತರಿಕ ಹಾಗೂ 512 MB RAM ಮತ್ತು SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 2GB ಹೊರ ಮೆಮೊರಿ, ಕನೆಕ್ಟಿವಿಟಿಯಲ್ಲಿ GPRS, EDGE, WLAN ಯುಟಿಲಿಟಿ, ವೈ-ಫೈ, 802.11 b/g/n ಸೌಲಭ್ಯ, ಬ್ಲೂಟೂಥ್, ಡಾಟಾ ಟ್ರಾನ್ಸ್ ಫರ್ 2.0 ಮೈಕ್ರೋ USB ಆವೃತ್ತಿ, ಮಲ್ಟಿಮೀಡಿಯಾದಲ್ಲಿ 5MP ಕ್ಯಾಮೆರಾ, ಲೆಡ್ ಫ್ಲಾಶ್, ಮತ್ತು 2D ಅನುಭವ ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯದಿದ್ದರೆ ಹೇಳಿ!

ಇಷ್ಟೆಲ್ಲ ವಿಶೇಷತೆಗಳಿರುವ, ಎಲ್ಲರಿಗೂ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಈ ಹೊಸ ಲೈವ್ ಮೊಬೈಲ್ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಈ ವರ್ಷದ ಕೊನೆಯಲ್ಲಿ ಬರಲಿದೆ. ಇದು ನಮಗಿಷ್ಟವಾಗಬಹುದು ನೋಡಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot