ಮ್ಯಾಗ್ನಮ್ ಮೊಬೈಲ್ ಸದ್ಯದಲ್ಲಿ ಮಾರುಕಟ್ಟೆಗೆ

By Super
|
ಮ್ಯಾಗ್ನಮ್  ಮೊಬೈಲ್ ಸದ್ಯದಲ್ಲಿ ಮಾರುಕಟ್ಟೆಗೆ
ಬೆಂಗಳೂರು ಮೂಲದ ಕಂಪೆನಿ LACS ಇದೀಗ ಸುದ್ದಿಯಾಗಲಿದೆ. ಕಾರಣ ಇದು ಸದ್ಯ ಬಿಡುಗಡೆಮಾಡಲಿರುವ ಹೈ ಎಂಡ್ ಸ್ಮಾರ್ಟ್ ಫೋನ್. ಇದು ಹೆಚ್ಚು ಆಕರ್ಷಣೀಯವಾಗಿರುವುದರ ಜೊತೆಗೆ ಕಡಿಮೆ ಬೆಲೆ ಹೊಂದಿ ಗ್ರಾಹಕಸ್ನೇಹಿ ಎನಿಸಲಿದೆ. ಇದರ ಹೆಸರು ಎಲ್ ಎ ಸಿ ಎಸ್ ಮ್ಯಾಗ್ನಮ್ ಮಿರ್ಚಿ 5.

ಬರಲಿರುವ ಈ ಹೊಸ ಫೋನ್ 5 ಇಂಚುಗಳ ಡಿಸ್ ಪ್ಲೇ ಸ್ಕ್ರೀನ್ ಹೊಂದಿದ್ದು 1GHz ಪ್ರೊಸೆಸರ್, ಕ್ಲಾಲ್ ಸ್ಪೀಡ್ CPU ಹೊಂದಿದೆ. 2.3 ಆವೃತ್ತಿಯ ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS, ಆಂತರಿಕ 512 MB ಮೆಮೊರಿ, RAM ಸಾಮರ್ಥ್ಯ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, VGA ಫ್ರಂಟ್ ಕ್ಯಾಮೆರಾ ಹೊಂದಿರುವ ಇದು ಸಾಕಷ್ಟು ಉತ್ತಮ ಪಿಕ್ಚರ್ ಕ್ಲಾರಿಟಿ 800 X 480 ಪಿಕ್ಸೆಲ್ಸ್ ಹೊಂದಿದೆ.

ಮಲ್ಟಿಮೀಡಿಯಾ ಕೂಡ ಸಾಕಷ್ಟು ವಿಶೇಷವಾಗಿದ್ದು ಎಲ್ಲಾ ಸಾಮಾನ್ಯ ವಿಶೇಷತೆಗಳಾದ FM ರೇಡಿಯೋ, ಲೈಟ್ ಸೆನ್ಸರ್, ಇ ಕಂಪಾಸ್, ಬ್ಲೂ ಟೂಥ್, ವೈ-ಫೈ, HSPA ಕನೆಕ್ಟಿವಿಟಿ ಹೀಗೆ ಎಲ್ಲ ಅತ್ಯಾಧುನಿಕ ಸೌಲಭ್ಯ ಹೊಂದಿದೆ.

ಹೀಗೆ ಸಾಕಷ್ಟು ಸೌಲಭ್ಯ ಹೊಂದಿರುವ ಈ ಹೊಸ ಮೊಬೈಲ್ ಭಾರತೀಯ ಮಾರುಕಟ್ಟೆ ಬೆಲೆ ರು. 20,000. ಸದ್ಯದಲ್ಲೇ ಬಿಡುಗಡೆಕಾಣಲಿರುವ ಈ ಹೊಸ ಎಲ್ ಎ ಸಿ ಎಸ್ ಮ್ಯಾಗ್ನಮ್ ಮಿರ್ಚಿ 5, ಬಿಡುಗಡೆಯ ನಂತರ ಬಿಸಿಬಿಸಿ ಕೇಕ್ ನಂತೆ ಮಾರಾಟವಾಗುವುದರಲ್ಲಿ ಸಂಶಯವೇ ಇಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X