ಎಲ್ ಜಿ ಆಪ್ಟಿಮಸ್ ಮೊಬೈಲುಗಳಿವೆ, ಆಯ್ಕೆ ಮಾಡಿ

Posted By: Staff

ಎಲ್ ಜಿ ಆಪ್ಟಿಮಸ್ ಮೊಬೈಲುಗಳಿವೆ, ಆಯ್ಕೆ ಮಾಡಿ
ಎಲ್ ಜಿ ಮೊಬೈಲ್ ಕಂಪೆನಿ ಜಗತ್ತಿನ ಪ್ರಸಿದ್ಧ ಕಂಪೆನಿಗಳಲ್ಲೊಂದು. ಈಗಾಗಲೇ ಸಾಕಷ್ಟು ಮೊಬೈಲುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ ಜಿ, ಮೊಬೈಲ್ ಮಾರಾಟದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದೆ. ಇದೀಗ ನಾವು 2 ಎಲ್ ಜಿ ಫೊನ್ ಗಳನ್ನು ಹೋಲಿಕೆ ಮಾಡಲಿದ್ದೇವೆ. ಅವು ಎಲ್ ಜಿ ಆಪ್ಟಿಮಸ್ ಸೋಲ್ E730 ಮತ್ತು ಎಲ್ ಜಿ ಆಪ್ಟಿಮಸ್ 2X. ಈ ಆಪ್ಟಿಮಸ್ ಫೋನ್ ತನ್ನಲ್ಲಿರುವ ವಿಶೇಷತೆಗಳಿಂದ ಸಾಕಷ್ಟು ಖ್ಯಾತಿ ಪಡೆದಿದೆ.

ಇಲ್ಲಿ ಹೋಲಿಸಲಾಗಿರುವ 2 ಫೊನುಗಳಲ್ಲಿ, ಆಪ್ಟಿಮಸ್ ಸೋಲ್ ಕ್ಯಾಂಡಿ ಬಾರ್ ಡಿಸೈನ್ ಹೊಂದಿದ್ದು 2G ಮತ್ತು 3G ನೆಟ್ ವರ್ಕ್ ಹೊಂದಿದೆ. ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಈ ಫೋನ್, 122.5 X 62.5 X 9.8 mm ಡೈಮೆನ್ಷನ್ ಹೊಂದಿದೆ. ಅಲ್ಟ್ರಾ ಅಮೋಲೆಡ್ ಕೆಪಾಕ್ವಿವ್ ಟಚ್ ಸ್ಕ್ರೀನ್ ಹೊಂದಿರುವ ಇದು 16 M ಬಣ್ಣಗಳಲ್ಲಿ ಲಭ್ಯ. 3.8 ಇಂಚುಗಳು ಹಾಗೂ 480 X 800 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ ಇದು ಸಾಕಷ್ಟು ಆಕರ್ಷಕವಾಗಿ ಮನಕ್ಕೊಪ್ಪುವಂತಿದೆ.

2X ದಲ್ಲಿ ಮೊದಲಿನ ಫೊನಿನಲ್ಲಿರುವ ಸಾಕಷ್ಟು ಫೀಚರ್ಸ್ ಗಳು ಇಲ್ಲವಾದರೂ ಇರುವ ಫಿಚರ್ಸ್ ಗಳೂ ಸಾಕಷ್ಟಿವೆ. ಇದರಲ್ಲಿ IPS LCD ಕೆಪಾಕ್ಟಿವ್ ಟಚ್ ಸ್ಕ್ರೀನ್, 16 M ಕಲರ್ಸ್ ಇದೆ. ಎರಡೂ ಫೋನುಗಳಲ್ಲಿ ಬಹಳಷ್ಟು ಆನ್ ಲೈನ್ ಅಪ್ಲಿಕೇಶನಗ ಗಳು ಹಾಗೂ ಬ್ರೌಸರ್ ಲಭ್ಯವಿದೆ.

"ಗೋರಿಲ್ಲಾ ಗ್ಲಾಸ್ ಡಿಸ್ ಪ್ಲೇ" ಹೊಂದಿರುವ ಇದು ಅದರಿಂದಲೇ ಮಿಕ್ಕ ಫೋನುಗಳಿಗಿಂತ ಆಕರ್ಷಣೀಯವಾಗಿ ಕಾಣುತ್ತದೆ. ಈ ಫೊನಿನಲ್ಲಿ Gyro ಸೆನ್ಸರ್ ಫೀಚರ್ಸ್ ಇರುವುದೊ ನಿಜವಾದ ವಿಶೇಷ. ಈ ವರ್ಷದ ಫೆಬ್ರುವರಿಯಲ್ಲಿ ಬಿಡುಗಡೆಯಾಗಿರುವ ಇದು ಈಗಾಗಲೇ ಸಾಕಷ್ಟು ಮಾರಾಟ ಕಂಡಿದೆ.
ಸೋಲ್ ನಲ್ಲಿ ಸಮರ್ಥ 1 GHz Qualcomm MSM 8255 ಪ್ರೊಸೆಸರ್ ಇದೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆವೃತ್ತಿ ಹೊಂದಿರುವ ಇದು ಸ್ಮಾರ್ಟ್ ಫೊನಿನಲ್ಲಿರುವ ಎಲ್ಲಾ ವೈಶಿಷ್ಠ್ಯಗಳನ್ನು ಹೊಂದಿದೆ. 5MP ಆಟೋಫೋಕಸ್ ಕ್ಯಾಮೆರಾ, ಜಿಯೋ ಟ್ಯಾಗಿಂಗ್ & ಇಮೇಜ್ ಎಡಿಟಿಂಗ್ ಫೀಚರ್ಸ್ ಇವೆ.


2X ನಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಸಂಪೂರ್ಣ ಇಮೇಜ್ ಎಡಿಟಿಂಗ್ ಫೀಚರ್ಸ್ ಇದೆ. ಇದರ ಬೆಲೆ ರು. 24,490.
ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ 2X ಹಾಗೂ ಮುಂದೆ ಬರಲಿರುವ ಸೋಲ್ ಆಪ್ಟಿಮಸ್ ಎಲ್ ಜಿ ಫೋನುಗಳ ನಡುವೆ ಸಾಕಷ್ಟು ಸಾಮ್ಯತೆ-ಭಿನ್ನತೆಗಳಿದ್ದರೂ ಎರಡೂ ಕೂಡ ವಿಶೇಷವಾದ ಸ್ಮಾರ್ಟ್ ಫೋನುಗಳಾಗಿರುವುದರಿಂದ ಯಶಸ್ಸು ಗಳಿಸುವುದು ಖಂಡಿತ ಎಂದೇ ಹೇಳಬಹುದು.

ಯಾವುದಕ್ಕೂ, ಕಾಲದ ಉತ್ತರಕ್ಕಾಗಿ ಕಾಯುವುದು ಒಳ್ಳಯದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot