ಸೋನಿ ಎರಿಕ್ಸನ್ ಹೊಸ ಮೊಬೈಲ್ ಮೋಡಿ

Posted By: Staff

ಸೋನಿ ಎರಿಕ್ಸನ್ ಹೊಸ ಮೊಬೈಲ್ ಮೋಡಿ
ಖ್ಯಾತ ಎಲೆಕ್ಟ್ರಾನಿಕ್ಸ್ ಕಂಪೆನಿ ಸೋನಿ ಎರಿಕ್ಸನ್ ಮೊಬೈಲ್ ಹಾಗೂ ಟ್ಯಾಬ್ಲೆಟ್ ಮಾರಾಟದಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಇದೀಗ ಅದು ಹೊಸ ಮೊಬೈಲ್ ಸೋನಿ ಎರಿಕ್ಸನ್ ಎಕ್ಸ್ ಪೆರಿಯಾ ನಿಯೋ ವಿ ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ.

ಸ್ಮಾರ್ಟ್ ಫೋನ್ ಆಗಿರುವ ಇದು 116 X 57 X 13 mm ಡೈಮೆನ್ಷನ್ ಹಾಗೂ ತೂಕ 126 ಗ್ರಾಮ್ಸ್ ಹೊಂದಿದೆ. 1GHz ಸ್ಕೋರ್ಪಿಯನ್ ಪ್ರೊಸೆಸರ್, ಎಡ್ರಿನೋ 205 GPU, ಕ್ಯುಲ್ ಕಾಮ್ MSM8255 ಸ್ನಾಪ್ಡ್ರಗಾನ್ ಹೊಂದಿದೆ.

ಇದರಲ್ಲಿ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಹೊಂದಿರುವ ಇದು, 2G ಮತ್ತು 3G ನೆಟ್ ವರ್ಕ್ ಹೊಂದಿದೆ. 3.7 ಇಂಚ್ ಲೆಡ್ ಬ್ಯಾಕ್ ಲಿಟ್, ಲೆಡ್ ಟಚ್ ಸ್ಕ್ರೀನ್, 480X854 ಪಿಕ್ಸೆಲ್ಸ್ ರೆಸೊಲ್ಯೂಷನ್, ಬ್ರೇವಿಯಾ ಎಂಜಿನ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2592 X 1944 ರೆಸೊಲ್ಯೂಷನ್, ಲೆಡ್ ಫ್ಲಾಶ್, ಜಿಯೋ ಟಾಗಿಂಗ್, ಫೇಸ್ & ಟೈಮ್ ಡಿಟೆಕ್ಷನ್, A 3D ಸ್ವೀಪ್ ಪೆನಾಮೆನಾ, 720p@30 fps, GPRS, EDGE, ಬ್ಲೂಟೂಥ್, ಮೈಕ್ರೋ ಯುಎಸ್ ಬಿ 2.0, 7.2 Mbps, HSDPA, 5.76 Mbps, HSUPA ಇವೆಲ್ಲ ಇದೆ.

ಮೆಮೊರಿಯ ಜೊತೆ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಹಾಗೂ RAM 512 MB ಇದೆ. ಇದರ ಜೊತೆ 2GB ಫ್ರೀ ಕೊಡುಗೆ ಕಂಪೆನಿಯ ಕಡೆಯಿಂದ ಸಿಗಲಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಬಿಡುಯಾಗಲಿರುವ ಈ ಮೊಬೈಲ್ ಬೆಲೆ ಇನ್ನೂ ನಿಗದಿಯಾಗಿಲ್ಲ.

ಮಾರುಕಟ್ಟೆಗೆ ಬಂದಮೇಲೆ ಇದು ಖಂಡಿತವಾಗಿಯೂ ಹೊಸ ಸಂಚಲನವನ್ನು ಉಂಟುಮಾಡಲಿದೆ ಎಂದು ಕಂಪೆನಿ ನಂಬಿದೆ. ಸೋನಿ ಎರಿಕ್ಸನ್ ನಂಬಿಕೆ ಎಂದೂ ಸುಳ್ಳಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot