Subscribe to Gizbot

ಅಣ್ಣಾ ಹಜಾರೆಗೆ ಸಾಥ್ ನೀಡಿದ ಮೊಬೈಲ್ ಆಪ್ಸ್

Posted By: Staff

ಅಣ್ಣಾ ಹಜಾರೆಗೆ ಸಾಥ್ ನೀಡಿದ ಮೊಬೈಲ್ ಆಪ್ಸ್
ಸ್ವಲ್ಪ ದಿನಗಳ ಹಿಂದೆ ಇಡೀ ದೇಶವೇ ಖ್ಯಾತ ಗಾಂಧಿವಾದಿ ಅಣ್ಣಾ ಹಜಾರೆ ಗುಣಗಾನದಲ್ಲಿ ತೊಡಗಿತ್ತು. ಕಾರಣ ಎಲ್ಲರಿಗೂ ಗೊತ್ತಿರುವ ಭ್ರಷ್ಟಾಚಾರದ ವಿರುದ್ಧ ಸಮರ, ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅವರು ಕೈಗೊಂಡಿದ್ದ ಉಪವಾಸ ನಿರಶನ. ಕೊನೆಗೂ 12ನೇ ದಿನ ಮಣಿದ ಕೇಂದ್ರ ಸರ್ಕಾರದಿಂದ ದೊರೆತ ಗ್ರೀನ್ ಸಿಗ್ನಲ್ ಮೂಲಕ ಕೊನೆಗೊಂಡ ಉಪವಾಸ ಹಾಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ.

ಈ ಹೊರಾಟಕ್ಕೆ ಪ್ರತ್ಯಕ್ಷವಾಗಿ ಜನರು ಬೆಂಬಲ ನೀಡಿರುವುದು ಗೊತ್ತಿರುವ ಸಂಗತಿ. ಆದರೆ ಸಾಕಷ್ಟು ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಪರೋಕ್ಷವಾಗಿ ಬಂದಿರುವ ಬೆಂಬಲ. ಅದು ಬಂದಿರುವುದು ಯಾವುದರಿಂದ ಗೊತ್ತೇ? ಫೇಸ್ ಬುಕ್ ನಿಂದ ಅಂತ ಉತ್ತರಿಸುತ್ತೀರ ನಂಗೊತ್ತು! ಆದರೆ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು ಫೇಸ್ ಬುಕ್ ಹೌದಾದರೂ ಪ್ರಮುಖವಾಗಿ ಹೆಸರಿಸಬೇಕಾದದ್ದು ಆಪ್ಸ್ ಮೊಬೈಲ್ ಅಪ್ಲಿಕೇಶನ್.

ಈ ಮೊಬೈಲ್ ಆಪ್ಸ್ ಮಾಡಿದ ಸಾಧನೆ ಅಂತಿಂಥದಲ್ಲ. ಈ ಹೋರಾಟಕ್ಕೆ ಕಾರಣ, ಹೋರಾಟದ ರೂಪುರೇಷೆ. ಲೇಟೆಸ್ಟ್ ಸುದ್ದಿಗಳು, ಚಳುವಳಿಗೆ ಪ್ರೇರಣೆಯಾಗಬಲ್ಲ ವಿಡಿಯೋಸ್, ಪೋಲಿಂಗ್, Q&A, ಈವೆಂಟ್ಸ್, ಹೀಗೆ ವಿವಿಧ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಾರಂಭದಿಂದ ಕೊನೆಯವರೆಗೆ ಹೋರಾಡಿದೆ ಈ ಆಪ್. ಎಲ್ಲಾ ಸೇರಿ ಸಾಮಾಜಿಕ ಜಾಗೃತಿ, ಹೋರಾಟದ ವೇಗ ಹೆಚ್ಚಲು ಹಾಗೂ ಕೊನೆಗೆ ಯಶಸ್ಸು ಸಾಧಿಸಲು ಆ ಮೂಲಕ ದೇಶಕ್ಕೇ ನೆರವಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ 10,000 ಕ್ಕಿಂತ ಹೆಚ್ಚು ಇನ್ ಸ್ಟಾಲ್ ಹೊಂದಿದೆ. ಇದು ನಿಜವಾಗಿಯೂ ದೊಡ್ಡ ಸಾಧನೆಯೇ. ಹ್ಯಾಟ್ಸ್ ಅಪ್ ಟು ಮೊಬೈಲ್ ಆಪ್ಸ್...!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot