Subscribe to Gizbot

ಕಾರ್ಬನ್ ಮಲ್ಟಿಪ್ಲೆಕ್ಸ್ ಹೊಸ ಮೊಬೈಲ್ ಚೆನ್ನಾಗಿದೆ

Posted By: Super

ಕಾರ್ಬನ್ ಮಲ್ಟಿಪ್ಲೆಕ್ಸ್ ಹೊಸ ಮೊಬೈಲ್ ಚೆನ್ನಾಗಿದೆ
ಮೊಬೈಲ್ ಮಾರುಕಟ್ಟೆ ಇದೀಗ ಸಾಕಷ್ಟು ವಿಸ್ತರಿಸಲ್ಪಟ್ಟಿದೆ. ಬಗೆಬಗೆಯ ವಿನ್ಯಾಸ, ಬೆಲೆ, ಸಾಮರ್ಥ್ಯದ ಮೊಬೈಲುಗಳು ಮಾರುಕಟ್ಟೆಯಲ್ಲಿ ಹೇರಳವಾಗಿವೆ. ಇದೀಗ ಕಾರ್ಬನ್ ಕಂಪೆನಿಯಿಂದ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಈ ಹೊಸ ಮೊಬೈಲ್ ಹೆಸರು ಕಾರ್ಬನ್ ಮಲ್ಟಿಪ್ಲೆಕ್ಸ್. ಇದರ ವಿಶೇಷತೆ ಸಾಕಷ್ಟಿದೆಯಾದರೂ ಡ್ಯುಯಲ್ ಸಿಮ್ ಹೊಂದಿರುವುದು ವಿಶೇಷತೆಗಳಲ್ಲಿ ವಿಶೇಷ. ಇದರಲ್ಲಿ 8.9 cm ಅಗಲದ ಸ್ಕ್ರೀನ್, 3 ಮೆಗಾ ಪಿಕ್ಸೆಲ್ ಕ್ಯಾಮೆರಾ, HVGA ಕಲರ್ ಡಿಸ್ ಪ್ಲೇ, ಆಡಿಯೋ ಪ್ಲೇಯರ್ ಸಾಕಷ್ಟು ಆಧುನಿಕವಾಗಿದೆ.

ಈ ಹೊಸ ಮೊಬೈಲಿನಲ್ಲಿ 3D ಗ್ರಾಫಿಕ್ಸ್, ವಿಸ್ತರಿಸಬಲ್ಲ 16 GB ಮೆಮಪರಿ, ಉತ್ತಮ 1100 mAH Li-ion ಬ್ಯಾಟರಿ ಬ್ಯಾಕಪ್, 6 ತಾಸುಗಳ ಟಾಕ್ ಟೈಮ್ & 240 ತಾಸುಗಳ ಸ್ಟ್ಯಾಂಡ್ ಬೈ, ಬ್ಲೂ ಟೂಥ್, USB ಡಾಟಾ ಮ್ಯಾನೇಜ್ ಮೆಂಟ್ ಸೌಲಭ್ಯವಿದೆ.

ಇಂಟರ್ನೆಟ್, ಅದಕ್ಕೆ ಸಹಕಾರ ಕೊಡುವ GPRS/WAP, EDGE ಎಲ್ಲವೂ ಉತ್ತಮವಾಗಿದೆ. ಬ್ರೌಸಿಂಗ್, ಫಾರ್ಮೆಟ್ ಗಳಾದ MP3, MIDI, AMR, WAV, AAC, ವಿಡಿಯೋ ಪ್ಲೇಯರ್, FM ರೇಡಿಯೋ, ಗೇಮ್ಸ, ಲೇಟೆಸ್ಟ್ ರಿಂಗ್ ಟೋನ್ಸ್, ಎಲ್ಲವೂ ಇದೆ.

ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿರುವ ಇದು, ಆಕರ್ಷಕ ಬೆಲೆ ಮತ್ತು ಫೀಚರ್ಸ್ ಗಳ ಸಂಗಮ. ಇದರ ಬೆಲೆ ನಿಗದಿಯಾಗಿಲ್ಲವಾದರೂ ರು. 7,500 ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot