ಈ ಹೊಸ ಮೊಬೈಲ್ ನಿಮ್ಮ ಗಮನ ಸೆಳೆಯಲಿದೆ ನೋಡಿ!

Posted By: Staff

ಈ ಹೊಸ ಮೊಬೈಲ್ ನಿಮ್ಮ ಗಮನ ಸೆಳೆಯಲಿದೆ ನೋಡಿ!
ಇತ್ತೀಚಿನ ವರ್ಷಗಳಲ್ಲಿ ಆಂಡ್ರಾಯ್ಡ್ OS ನ ಮೇನಿಯಾ ಎಲ್ಲಾ ಕಡೆ ಇದೆ. ಎಲ್ಲಾ ಮೊಬೈಲ್ ಮಾರುಕಟ್ಟೆಯಲ್ಲೂ ಆಂಡ್ರಾಯ್ಡ್ ಫೋನುಗಳದ್ದೇ ಕಾರು-ಬಾರು. ಇದೀಗ MTS ಕಂಪೆನಿ 2 ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಅವು MTS MTAG 3.1 ಮತ್ತು MTS ಲೈವ್ ವೈರ್.

ಮೀಡಿಯಮ್ ರೇಂಜ್ ಹ್ಯಾಂಡ್ ಸೆಟ್ ಆಗಿರುವ ಇವುಗಳಲ್ಲಿ ಸಾಕಷ್ಟು ಸಾಮ್ಯತೆ ಹಾಗೂ ಭಿನ್ನತೆಗಳಿವೆ. ಅವುಗಳನ್ನು ಒಂದೊಂದಾಗಿ ಹೀಗೆ ವಿಶ್ಲೇಷಿಸಲಾಗಿದೆ.
ಮೊದಲನೆಯದಾಗಿ ಎರಡರಲ್ಲೂ ಆಂಡ್ರಾಯ್ಡ್ OS ಇದೆ.

MTS MTAG 3.1 ರಲ್ಲಿ 2.8 ಇಂಚುಗಳ ಅಗಲವಾದ 240 x 300 ರೆಸೊಲ್ಯೂಷನ್ ಹೊಂದಿರುವ ಸ್ಕ್ರೀನ್ ಇದೆ. 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, TV ಆಯ್ಕೆ ಎರಡರಲ್ಲೂ ಇದೆ. ಲೈವ್ TV ಆಪ್ಷನ್ ಅತ್ಯಂತ ಗ್ರಾಹಕಸ್ನೇಹಿ ಎನಿಸಿದ್ದು ಎಲ್ಲರ ಗಮನ ಸೆಳೆದಿದೆ.

ಪ್ರೀಲೊಡೆಡ್ ಅಪ್ಲಿಕೇಶನ್ ಇರುವ ನೆಟ್ ವರ್ಕ್, ಫೇಸ್ ಬುಕ್, ಗೂಗಲ್ ಟಾಕ್, ನಿಂಬೂಜ್ ಎಲ್ಲವೂ ಇದೆ. ಇದರಲ್ಲಿರುವ ಗೂಗಲ್ ನಕ್ಷೆ ಟ್ರಾವೆಲ್ ಗೈಡ್ ನಂತೆ ಸಹಾಯಕ್ಕೆ ನಿಲ್ಲಲಿದೆ. ಸೂಪರ್ಬ್ ಪವರ್ ಬ್ಯಾಟರಿ ಇದರಲ್ಲಿದೆ. CDMA ನೆಟ್ ವರ್ಕ್ ಎರಡರಲ್ಲೂ ಇದೆ.

ಈಗಿನ ಆಧುನಿಕ ಫೊನುಗಳ ಭರಾಟೆಯಲ್ಲಿ ಈ ಫೋನು ಯಾರ ಗಮನವನ್ನೂ ಸೆಳೆಯಲಿಕ್ಕಿಲ್ಲ. ಇದರ ಬೆಲೆ ರು. 5,000. ಆದರೂ ಇದರಲ್ಲಿರುವ ಫಿಚರ್ಸ್ ಗಳಿಗೆ ಬೆಲೆ ಹೆಚ್ಚೇನೂ ಅಲ್ಲ. ಮಧ್ಯಮ ವರ್ಗದ ಜನರಿಗೆ ಈ ಫೊನ್ ಅನುಕೂಲಕರವಾಗಿದೆ. ಮಾರುಕಟ್ಟೆಗೆ ಸದ್ಯದಲ್ಲಿಯೇ ಬರಲಿದೆ, ನೋಡಿ ನಿಮಗಿಷ್ಟವಾಗಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot