ಆಹಾ..! ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ಮೊಬೈಲ್

Posted By: Staff

ಆಹಾ..! ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ಮೊಬೈಲ್
ಸ್ಯಾಮ್ ಸಂಗ್ ಕಂಪೆನಿ ಈಗ ಗ್ಯಾಜೆಟ್ಸ್ ಮಾರಾಟದಲ್ಲಿ ಅಗ್ರಗಣ್ಯ ಎನಿಸಿದೆ. ಈ ಸ್ಯಾಮ್ ಸಂಗ್ ಫೊನುಗಳು ಸಾಕಷ್ಟು ವಿಧ ಹಾಗೂ ದರಗಳಲ್ಲಿ ಲಭ್ಯ. ಇದೀಗ ಭಾರತದಲ್ಲಿ ಲಭ್ಯವಿರುವ ಸ್ಯಾಮ್ ಸಂಗ್ ಹೊಸ ಫೊನ್ ಗೆಲಾಕ್ಸಿ 5, ಬಜೆಟ್ ಫೋನಾಗಿದ್ದು ಮಧ್ಯಮ ವರ್ಗದ ಜನರಿಗೆ ವರವಾಗಿ ಪರಿಣಮಿಸಲಿದೆ.

ಟಚ್ ಸ್ಕ್ರೀನ್ ಮೂಲಕ ಕಾರ್ಯ ನಿರ್ವಹಿಸಬಹುದಾಗಿದೆ. 240 X 320 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ ಇದು ತೀರಾ ಸಣ್ಣ ಸ್ಕ್ರೀನ್ ಹೊಂದಿರುವುದು ಕೆಲಸ ನಿರ್ವಹಣೆಗೆ ಅಡಚಣೆ ಎನಿಸುವಂತಿದೆ.

ಈ ಹೊಸ ಫೊನ್, 2.8 ಇಂಚುಗಳ TFT ಸ್ಕ್ರೀನ್ ಹೊಂದಿದ್ದು 3G ನೆಟ್ ವರ್ಕ್, 3.6 Mbps HSDPA ನೆಟ್ ವರ್ಕ್ ಸಹಕಾರ ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಆವೃತ್ತಿ 2.1 ಈಕ್ಲೇರ್, wiz 3.0 UI ಕಸ್ಟಮೈಜೇಶನ್, 600 MHz ಕ್ಲಾಕ್ ಸ್ಪೀಡ್, 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಸಾಕಷ್ಟು ಆಧುನಿಕವಾಗಿದೆ.

ವೈ-ಫೈ, ಬ್ಲೂಟೂಥ್ 3.0 ಆವೃತ್ತಿ, 1 GB ಆಂತರಿಕ ಹಾಗೂ ವಿಸ್ತರಿಸಬಲ್ಲ 16 GB ಮೆಮೊರಿ ಇದೆ. ಈ ಹೊಸ ಮೊಬೈಲ್ ಬೆಲೆ ರು. 8,900. ಸಾಕಷ್ಟು ಚೆನ್ನಾಗಿದೆ, ಸಾಕಷ್ಟು ವಿಶೇಷವಾಗಿದೆ. ಮಾರುಕಟ್ಟೆಗೆ ಬಂದಾಗ ಮರೆಯದೇ ಖರೀದಿಸಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot