ಐಫೋನಿನಲ್ಲಿ ಚಂದಮಾಮನ ಕಥೆಗಳ ಅಪ್ಲಿಕೇಶನ್

Posted By: Staff

ಐಫೋನಿನಲ್ಲಿ ಚಂದಮಾಮನ ಕಥೆಗಳ ಅಪ್ಲಿಕೇಶನ್
ಐಫೋನ್ ಆಪಲ್ ಪ್ರಪಂಚದೆಲ್ಲೆಡೆ ಹೊಸ ಅಲೆಯನ್ನೇ ಸೃಸ್ಟಿಸಿದ ಮೊಬೈಲ್ ಫೋನ್. ಈ ಫೋನ್ ಬಳಕೆದಾರರು ಬೇರೇ ಫೋನನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಇದರಲ್ಲಿ ಏನಿಲ್ಲ ಅಂತ ಪಟ್ಟಿಮಾಡಿದರೆ ಬರುವುದು ತೀರಾ ಕಡಿಮೆ ಐಟಮ್ಸ್. ಹೀಗಿರುವ ಈ ಐಫೋನ್ ಆಪ್ ನಲ್ಲಿ ಇದೀಗ ಭಾರತದ 9 ಭಾಷೆಗಳಲ್ಲಿ ಚಂದಮಾಮನ ಕಥೆಗಳು ಮೂಡಿ ಬರಲಿವೆ.

ಭಾರತದ ಹಳೆಯ ಹಾಗೂ ಅತ್ಯಂತ ಜನಪ್ರಿಯ ಮಕ್ಕಳ ಮ್ಯಾಗಝೀನ್ ಚಂದಮಾಮನ ಕಥೆಗಳು. ಈ ಕಥೆಗಳು ಆಪಲ್ ಪೋರ್ಟೆಬಲ್ ಡಿವೈಸ್ ಮೂಲಕ 9 ಸ್ಥಳೀಯ ಭಾಷೆಗಳಾದ ಹಿಂದಿ, ಮರಾಠಿ, ತಮಿಳ್, ತೆಲುಗು, ಕನ್ನಡ, ಮಲೆಯಾಳಮ್, ಬೆಂಗಾಲಿ, ಗುಜರಾತಿ, ಮತ್ತು ಸಂಸ್ಕೃತ್ ನಲ್ಲಿ ಮೂಡಿ ಬರಲಿವೆ. ಇವು ಐಪೋಡ್ ಟಚ್, ಐಪ್ಯಾಡ್ ಮತ್ತು ಐಫೋನುಗಳಲ್ಲಿ ಲಭ್ಯವಾಗಲಿದೆ.

ಭಾರತದ ಪುರಾತನ ನಂಬಿಕೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ವಿಕ್ರಮ-ಬೇತಾಳನ ಕಥೆಗಳು ವೈಜ್ಞಾನಿಕ ಹಾಗೂ ಪರಿಸರ ವಸ್ತು, ವಿಷಯನ್ನೊಳಗೊಂಡ ಫೀಚರ್ಸ್ ರೂಪದಲ್ಲಿ ಕಂಗೊಳಿಸಲಿವೆ. ಇವು ಮೂಲ ಮ್ಯಾಗಝೀನ್ ರೂಪದಲ್ಲೇ ಲಭ್ಯವಾಗಲಿರುವುದು ಅತ್ಯಂತ ವಿಶೇಷವಾಗಿದೆ. ಇವುಗಳನ್ನು ಫ್ರೀಯಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾದರೂ ಮ್ಯಾಗಝಿನ್ ದರ ಸುಮಾರು ರು. 46 ಆಗಲಿದೆ. ಜೊತೆಗೆ iOS 4.0 ಅಥವಾ ನವೀನ ಮಾದರಿ ಕಾರ್ಯಕ್ಷಮತೆಯ ಅಗತ್ಯ ಇದಕ್ಕಿದೆ.

ಈ ವರ್ಷದ ಜುಲೈ ತಿಂಗಳ ಕೊನೆಯೊಳಗೆ 3000 ಕ್ಕಿಂತ ಹೆಚ್ಚು ಡೌಲ್ ಲೋಡ್ ಗಳು ಕೇವಲ 3 ವಾರಗಳಲ್ಲಿ ಆಪ್ ಸ್ಟೋರ್ ನಲ್ಲಿ ದಾಖಲಾಗಿದೆ. ಇದೀಗ ಅದು ಬೇರೆಬೇರೆ ಫಾರ್ಮೆಟ್ ಗಳ ಮೂಲಕ ಬರಲಿದೆ. ಸದ್ಯದಲ್ಲೇ ಈ ಮಕ್ಕಳ ಮ್ಯಾಗಝೀನ್ ಆಂಡ್ರಾಯ್ಡ್ ಮಾರ್ಕೆಟನ್ನು ಮೀರಿ ಜನಪ್ರಿಯವಾದರೂ ಆಶ್ಚರ್ಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot