Subscribe to Gizbot

ಮತ್ತೆ ಬರುತ್ತಿದೆ ಮಾರುಕಟ್ಟೆಗೆ ಪಿಲಿಪ್ಸ್ ಮೊಬೈಲ್ಸ್

Posted By: Super

ಮತ್ತೆ ಬರುತ್ತಿದೆ ಮಾರುಕಟ್ಟೆಗೆ ಪಿಲಿಪ್ಸ್ ಮೊಬೈಲ್ಸ್
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಉತ್ಪಾದನೆ ಹಾಗೂ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಮೊದಲು ದೊಡ್ಡ ಸೈಜಿನಲ್ಲಿ ಬರುತ್ತಿದ್ದ ಮೊಬೈಲುಗಳು ಈಗ ಸಾಕಷ್ಟು ಚಿಕ್ಕ ಸೈಜಿಗೆ ಇಳಿದಿವೆ. ಫಿಸಿಕಲ್ ಕೀ ಪ್ಯಾಡ್ ನಿಂದ ಈಗ ಟಚ್ ಸ್ಕ್ರೀನ್, ಮಲ್ಟಿ ಟಚ್ ಸ್ಕ್ರೀನ್ ವರೆಗೆ ಸುಧಾರಣೆ ಕಂಡಿವೆ.

ಒಂದಾನೊಂದು ಕಾಲದಲ್ಲಿ ಖ್ಯಾತ ಎಲೆಕ್ಟ್ರಾನಿಕ್ಸ್ ಕಂಪೆನಿ ಎನಿಸಿದ್ದ ಪಿಲಿಪ್ಸ್, ಮೊಬೈಲ್ ಬಿಡುಗಡೆಯಿಂದ ನಷ್ಟ ಅನುಭವಿಸಿ ಹಿಂದೆ ಸರಿದಿತ್ತು. ಈಗ ಮತ್ತೊಮ್ಮೆ ಯಶಸ್ಸಿನ ಬನ್ನೇರಿ ಬರಲು ನಿರ್ಧರಿಸಿ ಮತ್ತೆ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ.

ಸದ್ಯಕ್ಕೆ 6 ಟಚ್ ಫೊನುಗಳನ್ನು ಬಿಡುಗಡೆಮಾಡಲು ನಿರ್ಧರಿಸಿರುವ ಪಿಲಿಪ್ಸ್ ಕಂಪೆನಿ, ಇವುಗಳಲ್ಲಿ 2 ಫೋನಿಗೆ ಡ್ಯುಯಲ್ ಸಿಮ್ ಅಳವಡಿಸಲು ನಿರ್ಧರಿಸಿದೆ. ಮಿಕ್ಕವುಗಳು ಬಾರ್ ಆಕಾರದಲ್ಲಿ ಕಂಗೊಳಿಸಲಿವೆ. ಈ ಸೆಪ್ಟೆಂಬರ್ ತಿಂಗಳಿನಲ್ಲೇ ಬಿಡುಗಡೆಯಾಗಲಿರುವ ಹೊಸ ಫೊನುಗಳು ದೀರ್ಘ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದ್ದು ಗ್ರಾಹಕಸ್ನೇಹಿ ಎನಿಸಲಿವೆ.

ಈ ಹೊಸ ಫೊನುಗಳಲ್ಲಿ 2 ಡ್ಯುಯಲ್ ಫೋನುಗಳ ಹೆಸರು ಪಿಲಿಪ್ಸ್ X806 ಬ್ಲಾಕ್ ಮತ್ತು ಪಿಲಿಪ್ಸ್ X518 ಬ್ಲಾಕ್. X806 ನಲ್ಲಿ ಲೆಡ್ ಫ್ಲಾಶ್ ಇದ್ದು 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಟೋ ಫೊಕಸ್, 3 ಇಂಚುಗಳ ಟಚ್ ಸ್ಕ್ರೀನ್ ಇದೆ. 1530 mAh Li ion ಬ್ಯಾಟರಿ, 70 ಸುಧೀರ್ಘ ತಾಸುಗಳ ಸಂಗೀತ, ಒಂದು ತಿಂಗಳವರೆಗೆ ಸ್ಟ್ಯಾಂಡ್ ಬೈ ಮೋಡಿನಲ್ಲಿ ಇಡಬಹುದಾದ ಸಾಮರ್ಥ್ಯ ಕೂಡ ಇದಕ್ಕಿದೆ.

ಆದರೆ X 518 ಅದಕ್ಕಿಂತ ಚಿಕ್ಕ ಅಂದರೆ 2.8 ಇಂಚುಗಳ ಸ್ಕ್ರೀನ್ ಹೊಂದಿದೆ. ಕೇವಲ 2 ಮೆಗಾ ಪಿಕ್ಸೆಲೆ ಕ್ಯಾಮೆರಾ ಹೊಂದಿರುವ ಇದು ಆಟೋ ಫೊಕಸ್ ಫೀಚರ್ ಹೊಂದಿಲ್ಲ. ಎರಡರಲ್ಲೂ ಆಂತರಿಕ ಮೆಮೊರಿ ಸೌಲಭ್ಯವಿದೆ. ಎರಡರಲ್ಲಿರುವ ಬ್ಯಾಟರಿ ಬ್ಯಾಕಪ್ ಸಮಾನವಾಗಿದೆ.

ಇನ್ನುಳಿದ ಫೊನುಗಳ ಫೀಚರ್ಸ ಗಳು ಇನ್ನು ಮುಂದೆ ತಿಳಿಯಬೇಕಾಗಿದೆ. ಬೆಲೆ ಕೂಡ ಮಾರುಕಟ್ಟೆಗೆ ಬರುವ ಮೊದಲು ನಿರ್ಧಾರವಾಗಬೇಕಿದೆ. ತುಂಬಾ ವರ್ಷಗಳ ನಂತರ ತನ್ನ ಅದೃಷ್ಟ ಪರೀಕ್ಷೆಗೆ ನಿಂತಿರುವ ಪಿಲಿಪ್ಸ್ ಕಂಪೆನಿಗೆ ಗುಡ್ ಲಕ್ ಅನ್ನೋಣವೇ..!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot