Subscribe to Gizbot

ಸ್ಪೈಸ್-ಕಾರ್ಬನ್ ಕಾದಾಟದಲ್ಲಿ ಜಯ ಯಾರಿಗೆ!

Posted By: Staff

ಸ್ಪೈಸ್-ಕಾರ್ಬನ್ ಕಾದಾಟದಲ್ಲಿ ಜಯ ಯಾರಿಗೆ!
ಇದೀಗ ಮೊಬೈಲುಗಳಲ್ಲಿ ಸ್ಮಾರ್ಟ್ ಫೊನ್, ಆಂಡ್ರಾಯ್ಡ್ ಫೊನ್, ವಿಂಡೋಸ್ ಫೊನ್ ಹೀಗೆ ಸಾಕಷ್ಟು ವಿಧಗಳು ಮಾರುಕಟ್ಟೆಯಲ್ಲಿವೆ. ಆದರೆ ಸದ್ಯದಲ್ಲಿ ಬೇಡಿಕೆ ಹೆಚ್ಚಿರುವುದು ಡ್ಯುಯಲ್ ಸಿಮ್ ಫೋನುಗಳಿಗೆ. ಹಾಗಾಗಿ ಖ್ಯಾತ ಮೊಬೈಲ್ ಕಂಪನಿಗಳಾದ ಕಾರ್ಬನ್ ಮತ್ತು ಸ್ಪೈಸ್, ಹೊಸ ಡ್ಯುಯಲ್ ಸಿಮ್ ಫೋನನ್ನು ಮಾರುಕಟ್ಟೆಗೆ ಬಿಡಲು ನಿರ್ಧರಿಸಿವೆ. ಈ ಹೊಸ ಫೊನ್ ಗಳು ಸ್ಪೈಸ್ M6900 ಮತ್ತು ಕಾರ್ಬನ್ ಟೊರ್ನಾಡೊ

ಎರಡೂ ಕೂಡ ಡ್ಯುಯಲ್ ಸಿಮ್ ಫೊನುಗಳಾಗಿರುವುದು ಮೊದಲ ವಿಶೇಷ. ಕಾರ್ಬನ್ ಫೊನ್ ಅತ್ಯಂತ ಸುಂದರ ವಿನ್ಯಾಸ ಹೊಂದಿ ಯಾರನ್ನಾದರೂ ತಕ್ಷಣ ಮರುಳು ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಎರಡರಲ್ಲು 3.5 ಇಂಚುಗಳ ಟಚ್ ಟಿಎಫ್ ಟಿ ಟಚ್ ಸ್ಕ್ರೀನ್, ಕೆಪಾಕ್ಟಿವ್ 320 x 480 ಡಿಸ್ ಪ್ಲೇ ಇದೆ.

ಕಾರ್ಬನ್ ಫೊನ್ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, ಮಲ್ಟಿ ಶಾಟ್, ಫೊಟೋ CLI ಮುಂತಾದವುಗಳನ್ನು ಹೊಂದಿದೆ. ಆದರೆ ಸ್ಪೈಸ್ ಫೊನಿನಲ್ಲಿ ಇದಿಲ್ಲ. ಎರಡರಲ್ಲೂ ವಿಸ್ತರಿಸಬಹುದಾದ 8 GB ಮೆಮೊರಿ ಇದೆ. ಇವೆರಡರಲ್ಲೂ ಡೈಮೆನ್ಷನ್ಸ್ 116 x 61 x 12 mm ಮತ್ತು 62.5 x 116 x 11.6 mm ಇದೆ. ಎಫ್ ಎಂ ರೇಡಿಯೋ, ರೆಕಾರ್ಡಿಂಗ್ ಸೌಲಭ್ಯಗಳೆಲ್ಲ ಇವೆ.

ಇವುಗಳಲ್ಲಿ ಕಾರ್ಬನ್ ಫೊನ್ ಸಾಮಾನ್ಯ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದರೆ ಸ್ಪೈಸ್, 15 ಫ್ರೇಮ್/ಸೆಕೆಂಡ್ ಉನ್ನತ ವೇಗದ ಸೌಲಭ್ಯವಿದೆ.
ಸ್ಪೈಸ್ ನಲ್ಲಿರುವ ವೈ-ಫೈ ಸೌಲಭ್ಯ ಕಾರ್ಬನ್ ಫೋನಿನಲಿಲ್ಲ. ಆದರೆ ಎರಡೂ ಫೊನುಗಳಲ್ಲಿ GPRS ಮತ್ತು EDGE ಗಳು ಇವೆ. 3D ಯೂಸರ್ ಇಂಟರ್ ಫೇಸ್, ಮೀಡಿಯಾ ಪ್ಲೇಯರ್ ಎರಡರಲ್ಲೂ ಇದೆ. ಇನ್ನು ಬ್ಯಾಟರಿ ಬ್ಯಾಕಪ್ ವಿಷಯದಲ್ಲಿ ಸ್ಪೈಸ್ ಮುಂದಿದೆ.

ಬಹುಮುಖ್ಯವಾದ ಸ್ಪೈಸ್ ಮೊಬೈಲ್ ಬೆಲೆ ರು. 5,100 ಇದ್ದರೆ ಕಾರ್ಬನ್ ಬೆಲೆ 4,400 ಇದೆ. ಎರಡರಲ್ಲೂ ಸಾಕಷ್ಟು ಸಾಮ್ಯತೆ ಹಾಗೂ ಭಿನ್ನತೆಗಳಿವೆ. ಆದರೂ ಎರಡನ್ನೂ ಗ್ರಾಹಕ ಸ್ನೇಹಿ ಎನ್ನಬಹುದು. ಗ್ರಾಹಕರೇ, ನಿಮಗೆ ಯಾವುದಿಷ್ಟ ಅಂತ ಎರಡನ್ನೂ ನೋಡಿ ನಿರ್ಧರಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot