ಹಲೋ ಕೇಳಿಸ್ಕೊಳ್ಳಿ... ಫಿಲಿಪ್ಸ್ ಮೊಬೈಲ್ ಬರ್ತಿದೆ!

Posted By: Staff

ಹಲೋ ಕೇಳಿಸ್ಕೊಳ್ಳಿ... ಫಿಲಿಪ್ಸ್ ಮೊಬೈಲ್ ಬರ್ತಿದೆ!
ದಶಕಗಳಾಚೆ ಯಶಸ್ವಿ ಕಂಪೆನಿಯಾಗಿದ್ದ ಫಿಲಿಪ್ಸ್ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಇದೀಗ ಮೊಬೈಲ್ ಹಾಗೂ ಮ್ಯೂಸಿಕ್ ಸೌಂಡ್ ಸಿಸ್ಟಮ್ ಅನ್ನು ಒಂದರ ಹಿಂದೊಂದರಂತೆ ಬಿಡುಗಡೆ ಮಾಡಲು ಮುಂದಾಗಿದೆ. ಜನ ಸದ್ಯಕ್ಕೆ ಫಿಲಿಪ್ಸ್ ಕಂಪೆನಿಯನ್ನು ಮರೆತಿಲ್ಲವಾದ್ದರಿಂದ ಮತ್ತೆ ಅದು ತನ್ನ ಹಳೆಯ ಸ್ಥಾನವನ್ನು ದಕ್ಕಿಸಿಕೊಳ್ಳಲೂಬಹುದು

ಇದೀಗ ಫಿಲಿಪ್ಸ್ ಕಂಪೆನಿ ಬಿಡುಗಡೆ ಮಾಡಲಿರುವ ಮೊಬೈಲ್ ಹೆಸರು ಫಿಲಿಪ್ಸ್ ಝೆನಿಯಮ್ X086. ಇದರಲ್ಲಿರುವ ವಿಶೇಷತೆಗಳು ಹೀಗಿವೆ...

ಮೊದಲನೆಯದಾಗಿ ಇದು ಡ್ಯುಯಲದ ಸಿಮ್ ಫೊನಾಗಿದೆ. ಈಗಾಗಲೇ ಯುರೋಪ್ ಮತ್ತು ರಷ್ಯಾಗಳಲ್ಲಿ ಸಾಕಷ್ಟು ಮಾರಾಟವಾಗಿ ಪ್ರಸಿದ್ಧವಾಗಿದೆ. ಇದರ ಈ ಪರಿಯ ಯಶಸ್ಸಿನ ಗುಟ್ಟು ಇದರಲ್ಲಿರುವ ದೀರ್ಘ ಬಾಳಿಕೆ ಬರುವ ಬ್ಯಾಟರಿ. ಜೊತೆಗೆ ಸುಂದರ ಹಾಗೂ ಆಕರ್ಷಕ ವಿನ್ಯಾಸದ ಹ್ಯಾಂಡ್ ಸೆಟ್.

3.0 ಇಂಚುಗಳ ಡಿಸ್ ಪ್ಲೇ, 240 X 400-ಸುಮಾರು 155 ppi ಪಿಕ್ಸೆಲ್ ಡೆನ್ಸಿಟಿ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2560 X 1920 ಪಿಕ್ಸೆಲ್, ಆಟೋ ಫೊಕಸ್ ಮತ್ತು ಲೆಡ್ ಫ್ಲಾಶ್ ಎಲ್ಲವೂ ಇದೆ.

ಕನೆಕ್ಟಿವಿಟಿಯಲ್ಲಿ 10 ಜಿಪಿಎಸ್, ಎಡ್ಜ್, ಬ್ಲೂಟೂಥ್ 2.0, A2DP ಟೆಕ್ನಾಲಜಿ, ಮಿನಿ USB v2.0, MP3, WAV, WMA, MP4 ಎಲ್ಲವೂ ಇದೆ. SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 8 GB ಮೆಮೊರಿ ಇದೆ.

ಇದರ ವಿಶೇಷತೆಗಳಲ್ಲೇ ವಿಶೆಷ ಎನಿಸುವ ಬ್ಯಾಟರಿ ಬ್ಯಾಕಪ್ 720 ತಾಸುಗಳ ಸ್ಟ್ಯಾಂಡ್ ಬೈ ಹಾಗೂ 8 ತಾಸುಗಳ ನಿರಂತರ ಟಾಕ್ ಟೈಮ್ ಇದೆ. ಇದರ ಬೆಲೆ ಕಡಿಮೆ ಎನ್ನಬಹುದಾದ ಬೆಲೆ ರು. 10,000. ಆಕರ್ಷಕ ಬೆಲೆ ಹೊಂದಿ ಸಾಕಷ್ಟು ಫಿಚರ್ಸ್ ಗಳನ್ನೂ ಹೊಂದಿರುವ ಇದು ಕ್ಲಿಕ್ ಆಗೋದು ಗ್ಯಾರಂಟಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot