ಸ್ಯಾಮ್ ಸಂಗ್ ಹೊಸ ಫೊನ್ ಎಲ್ ಟಿ ಇ ಸೂಪರ್ ಗುರು!

By Super
|
ಸ್ಯಾಮ್ ಸಂಗ್ ಹೊಸ ಫೊನ್ ಎಲ್ ಟಿ ಇ ಸೂಪರ್ ಗುರು!
"ಸ್ಯಾಮ್ ಸಂಗ್ ಎಲ್ ಟಿ ಇ" ಫೊನ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಇದು ಸ್ಯಾಮ್ ಸಂಗ್ ಗೆಲಾಕ್ಸ್ಇ S II ಎಂದು ಗುರುತಿಸಿದವರೂ ಇದ್ದಾರೆ. ಸೆಲಾಕ್ಸ್ ಎಂದು ದಕ್ಷಿಣ ಕೋರಿಯಾದಲ್ಲಿ ಕರೆಯಲ್ಪಡುವ ಇದು ಸ್ಯಾಮ್ ಸಂಗ್ ಗೆಲಾಕ್ಸಿಯೇ ಎಂಬುದು ಸಾಕಷ್ಟು ಜನರ ಅಭಿಪ್ರಾಯ.
ಅದೇನೇ ಇದ್ದರೂ, ಈ ಹೊಸ ಸ್ಯಾಮ್ ಸಂಗ್ LTE ಫೋನಿನಲ್ಲಿ ಏನೇನಿದೆ ನೋಡೋಣ ಬನ್ನಿ...

ಈ ಫೋನಿನಲ್ಲಿ ಗೂಗಲ್ ಆಂಡ್ರಾಯ್ಡ್ 2.3.4 ಕೋರಿಯನ್ ಇದೆ. CPU ಹೊಂದಿರುವ ಪ್ರೊಸೆಸರ್, ಇದ್ದು 1500 MHz ಸ್ಪೀಡ್ ಹೊಂದಿದೆ. ಸ್ನಾಪ್ ಡ್ರಗಾನ್ APQ87060, 1 GB RAM, 14.9 GB ROM, ಅಮೋಲೆಡ್ ಪ್ಲಸ್, 480 X 800 ಪಿಕ್ಸೆಲ್ ಇಮೇಜ್ ಸಪೋರ್ಟರ್ ಇದರಲ್ಲಿದೆ. 4.5 ಇಂಚುಗಳ ಡಿಸ್ ಪ್ಲೇ, 3.5 mm ಆಡಿಯೋ ಜಾಕ್ ಸೌಲಭ್ಯ ಲಭ್ಯ.

ಕನೆಕ್ಟಿವಿಟಿಯಲ್ಲಿ ಜಿಪಿಆರ್ ಎಸ್, ಎಡ್ಜ್, ವೈ-ಫೈ, 3.0 ಡಾಟಾ ಟ್ರಾನ್ಸ್ ಫರ್, ಬ್ಲೂಟೂಥ್, ಯುಎಸ್ ಬಿ ಪ್ರಾವಿಸನ್, ಆಂತರಿಕ ಜಿಪಿಎಸ್, 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಮೇಜ್ ಕ್ಯಾಪ್ಚರಿಂಗ್ ಸೌಲಭ್ಯ, 1 X ಝೂಮ್, ಲೆಡ್ ಮೊಬೈಲ್ ಲೈಟ್, 1.9 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇವೆಲ್ಲ ಇದೆ.

ಈ ಸಾಕಷ್ಟು ದೊಡ್ಡದಾದ ಫಿಚರ್ಸ್ ಪಟ್ಟಿಯ ಜೊತೆ ಸದ್ಯಕ್ಕೆ ಬೆಲೆ ಮಾಹಿತಿ ಇಲ್ಲ. ಸದ್ಯದಲ್ಲೇ ಇದು ಭಾರತಕ್ಕೆ ಬರಲಿದ್ದು, ಆ ವೇಳೆಗೆ ಬೆಲೆ ನಿಗದಿಯಾಗಲಿದೆ. ಸಾಕಷ್ಟು ಒಳ್ಳೆಯ ಫೊನಾಗಿರುವ ಇದರ ಬೆಲೆಯೂ ಆಕರ್ಷಕವಾಗಿದ್ದರೆ ಮಾರಾಟದಲ್ಲಿ ಹೊಸ ದಾಖಲೆ ಗ್ಯಾರಂಟಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X