Subscribe to Gizbot

ಏಸರ್ ಲಿಕ್ವಿಡ್ ಮಿನಿ ಮೊಬೈಲ್ ಚೆನ್ನಾಗಿದೆ ರೀ!

Posted By: Staff

ಏಸರ್ ಲಿಕ್ವಿಡ್ ಮಿನಿ ಮೊಬೈಲ್ ಚೆನ್ನಾಗಿದೆ ರೀ!
ಮೊಬೈಲ್ ಮಾರುಕಟ್ಟೆ ಸಾಕಷ್ಟು ಬೆಳೆದಿದೆ. ಈಗ ಹೊಸ ಹೊಸ ಮೊಬೈಲುಗಳು ಹೊಸ ಕಂಪೆನಿಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿ ನಿರತವಾಗಿವೆ. ಇದೀಗ ಹೊಸ ಮೊಬೈಲ್ ಮಾರುಕಟ್ಟೆ ಪ್ರವೇಶಿಸಲಿದೆ. ಅದು ಏಸರ್ ಲಿಕ್ವಿಡ್ ಕಂಪೆನಿಯ ಮಿನಿ ಫೆರಾರಿ.
ಈ ಹೊಸ ಮೊಬೈಲಿನಲ್ಲಿ ಇರುವ ವಿಶೇಷತೆಗಳು ಹೀಗಿವೆ...

ಮೊದಲನೆಯದಾಗಿ ಹೊಸ ಈ ಫೆರಾರಿ ಅತ್ಯಾಧುನಿಕ ಸ್ಮಾರ್ಟ್ ಫೋನ್. ಕೇವಲ 105 ಗ್ರಾಮ್ ತೂಕ ಹೊಂದಿರುವ ಇದು ಕೂಲಾಗಿ ಫೆರಾರಿ ಕಾರಿನಂತೆ ಆಕರ್ಷಕವಾಗಿದೆ. ಕ್ಯುಲ್ ಕಾಮ್ ಸ್ನಾಪ್ ಡ್ರಗಾನ್ MSM7227-1 ಜೊತೆಗೆ ARM 11 ಪ್ರೊಸೆಸರ್ 600 MHz ಕ್ಲಾಕ್ ಸ್ಪೀಡ್ ಹೊಂದಿದೆ.

ಅಡ್ರೆನೊ 200 ಗ್ರಾಫಿಕ್ಸ್ ಎಕ್ಸೆಲರೇಟರ್ ಕಾರ್ಡ್ ಗುಣಮಟ್ಟದ ದೃಶ್ಯವನ್ನು ಕೊಡಲು ಸಮರ್ಥವಾಗಿದೆ. RAM, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS, 5 ಮೆಗಾ ಪಿಕ್ಸಲ್ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್, 720p ರೆಸೊಲ್ಯೂಷನ್, HD ವಿಡಿಯೋಸ್, ಏಸರ್ UI 4.2. ಮೂಲ ಏಸರ್ ಲಿಕ್ವಿಡ್ ಮಿನಿಗಿಂತ ದೊಡ್ಡ ಸ್ಕ್ರೀನ್ ಹೊಂದಿದೆ. ಮೈಕ್ರೋ SD ಕಾರ್ಡ್ ಮಾತ್ರ ಬಳಸಬಹುದಾದ ಈ ಮಿನಿ ಫೆರಾರಿಯಲ್ಲಿ 8 GB ಮೆಮೊರಿ ಕಾರ್ಡ್ ಜೊತೆ ಬ್ಲೂಟೂಥ್ ಹ್ಯಾಂಡ್ ಸೆಟ್ ಇದೆ.

ಸದ್ಯಕ್ಕೆ ಇದರ ಬೆಲೆ ನಿಗದಿಯಾಗಿಲ್ಲ. ಆದರೆ ಇದರ ಬೆಲೆ ದುಬಾರಿಯಲ್ಲವೇ ಅಲ್ಲ ಎಂದು ಅಂದಾಜಿಸಲಾಗಿದೆ. ಸದ್ಯದಲ್ಲೇ ದರ ನಿಗದಿಯಾಗಿ ಮಾರುಕಟ್ಟೆಗೆ ಬರಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೇ!


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot