ಮೈಕ್ರೋಮ್ಯಾಕ್ಸ್ ಮೊಬೈಲ್ ನ ಹೊಸ ಕೊಡುಗೆ

Posted By: Staff

ಮೈಕ್ರೋಮ್ಯಾಕ್ಸ್ ಮೊಬೈಲ್ ನ ಹೊಸ ಕೊಡುಗೆ
ಸ್ವದೇಶಿ ಕಂಪೆನಿ ಮೈಕ್ರೋಮ್ಯಾಕ್ಸ್, ಕಸ್ಟಮರ್ ಸರ್ವೀಸ್ ಗೆ ಹೊಸ ರೂಪ ಕೊಡಲು ನಿರ್ಧರಿಸಿದೆ. ಮೈಕ್ರೋಮ್ಯಾಕ್ಸ್ ಕಂಪೆನಿಯ ಕಸ್ಟಮರ್ ಸರ್ವೀಸ್ ದುರ್ಬಲವಾಗಿದೆ ಎಂಬ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಮಾತು ಕಂಪೆನಿಯ ಕಿವಿಗೆ ತಲುಪಿದೆ. ಅದಕ್ಕೆ ತಕ್ಷಣವೇ ಎಚ್ಚೆತ್ತಿರುವ ಕಂಪೆನಿ ಹೊಸ ಯೋಜನೆಯೊಂದಿಗೆ ಟೀಕೆಯ ವಿರುದ್ಧ ಕಾರ್ಯರೂಪಕ್ಕಿಳಿದಿದೆ.

ಕಂಪೆನಿಯ ಹ್ಯಾಂಡ್ ಸೆಟ್ ಮೇಲೆ ಇರುವ ಕಿಟ್ ನಲ್ಲಿ ನಮೂದಿಸಿದಂತೆ 1 ಅಥವಾ 1.5 ವರ್ಷಗಳ ವಾರಂಟಿ ಇದ್ದರೂ ಕೂಡ ಈಗ ಕಂಪೆನಿ ಹೊಸದಾಗಿ ಹೊಸ ಆಫರ್ ನೀಡಲಿದೆ. ಅದು ಖರೀದಿಯಾದ ಒಂದು ವಾರದೊಳಗೆ ಡಿಫೆಕ್ಟ್ ಇರುವ ಹ್ಯಾಂಡ್ ಸೆಟ್ ಮರಳಿಸಿ ಹೊಸದನ್ನು ಪಡೆಯಬಹುದಾದ ಆಫರ್!

ಈಗ ಕಸ್ಟಮರ್ ಕೇರ್ ಗೆ ತುಂಬಾ ಮಹತ್ವ ನೀಡಲು ನಿರ್ಧರಿಸಿರುವ ಕಂಪೆನಿ ಗ್ರಾಹಕರ ದೂರುಗಳನ್ನು ಕ್ಯಾಂಪ್ ಗಳ ಮೂಲಕ ಪರಿಹರಿಸಲು ನಿರ್ಧರಿಸಿದೆ. ಅದಕ್ಕಾಗಿ ಕಸ್ಟಮರ್ ಕೇರ್ ಟೋಲ್ ಫ್ರೀ ನಂ. 1860 500 8286 ಅನ್ನು ಗ್ರಾಹಕರಿಗೆ ನೀಡಿದೆ. ಗೊತ್ತಿಲ್ಲದವರು ಇಲ್ಲಿ ನೋಡಿ ತಿಳಿದುಕೊಳ್ಳಬಹುದು. ತಾಂತ್ರಿಕ ಸಮಸ್ಯೆಯೇನಾದರೂ ಇದ್ದರೆ 011 44770000 ಈ ನಂಬರಿಗೆ ಡಯಲ್ ಮಾಡಬಹುದು.

ಈ ಮೂಲಕ ತನ್ನ ಮೇಲೆ ಬಂದಿರುವ ಆರೋಪಕ್ಕೆ ಪ್ರತ್ಯುತ್ತರ ನೀಡಲು ಹೊರಟಿರುವ ಮೈಕ್ರೋಮ್ಯಾಕ್ಸ್ ಇದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುವುದೆಂದು ಕಾದು ನೋಡಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot