ಮತ್ತೆ ಸ್ಪರ್ಧೆಗೆ ಬ್ಲಾಕ್ ಬೆರ್ರಿ; ಮೊಬೈಲ್ ಜಗತ್ತಿಗೆ ಪುಳಕ

ಇಂಥ ಕಂಪೆನಿ ಈಗ ಪುನಃ ತನ್ನ ಇಮೇಜ್ ಬದಲಾಯಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವುದಂತೂ ದಿಟ. ಅದರ ಅಂಗವಾಗಿ ಇದೀಗ ಹೊಸ ಮೊಬೈಲ್ ಬಿಡುಗಡೆಗೆ ಬ್ಲಾಕ್ ಬೆರ್ರಿ ಮುಂದಾಗಿದೆ. ಈ ಹೊಸ ಮೊಬೈಲ್ ಹೆಸರು ಬ್ಲಾಕ್ ಬೆರ್ರಿ ಮೊಬೈಲ್ ಬೋಲ್ಡ್ 9900. ಇದು ಸಾಕಷ್ಟು ಅತ್ಯಾಧುನಿಕವಾಗಿದ್ದು ಹೊಸ ದಾಖಲೆ ನಿರ್ಮಿಸಿದರೂ ಅಚ್ಚರಿಯಿಲ್ಲ. ಇದರಲ್ಲಿರುವ ವಿಶೇಷತೆಗಳ ಪಟ್ಟಿ ಹೀಗಿದೆ...
ಇದರಲ್ಲಿ QWERTY ಕೀ ಪ್ಯಾಡ್, 2G ನೆಟ್ ವರ್ಕ್, GSM 850 / 900 / 1800 / 1900 ಮತ್ತು 3G ನೆಟ್ ವರ್ಕ್, HSDPA 900 / 2100 & HSDPA 900 ಪ್ರೀಕ್ವೆನ್ಸಿಸ್, 1700 / 2100. 115 x 66 x 10.5 mm ಡೈಮೆನ್ಷನ್, 130 ತೂಕ ಇದು ಹೊಂದಿದೆ.
ಸ್ಕ್ರೀನ್ ಕ್ವಾಲಿಟಿ 286 ppi ಹೈ ಪಿಕ್ಸೆಲ್ ಡೆನ್ಸಿಟಿ, 2.8 ಇಂಚಸ್ 640 x 480ರೆಸೊಲ್ಯೂಷನ್ ಡಿಸ್ ಪ್ಲೇ, TFT ಕೆಪಾಕ್ಟಿವ್ ಟಚ್ ಸ್ಕ್ರೀನ್, 16 M ಕಲರ್ಸ್, ಸೆನ್ಸರ್ ಮತ್ತು ವೈಬ್ರೇಷನ್ & ರಿಂಗ್ ಟೋನ್ ಅಲರ್ಟ್ಸ್, ಫೊನ್ ಬುಕ್, ಫೊಟೋಕಾಲ್ ಎಲ್ಲವೂ ಇದರಲ್ಲಿದೆ.
ಇವುಗಳ ಜೊತೆ 768 MB RAM, SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB ಮೆಮೊರಿ, ಎಲ್ಲಾ ರೀತಿಯ ಇಂಟರ್ನೆಟ್ ಕನೆಕ್ಟಿವಿಟಿ, (HSDPA 14.4Mbps, HSUPA 5.76Mbps), ಹೈ-ಸ್ಪೀಡ್ ವೈ-ಫೈ, (802.11 b/g/n, dual-band), GPRS ಮತ್ತು EDGE, ಡಾಟಾ ಟ್ರಾನ್ಸ್ ಫರ್ಮಿಶನ್, A2DP 2.1 ಬ್ಲೂಟೂಥ್, V2.0 ಮೈಕ್ರೋ USB ಇದರಲ್ಲಿದೆ.
ಇಷ್ಟೇ ಅಲ್ಲದೇ 5 ಮೆಗಾ ಫಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, 2592 x 1944 ಪಿಕ್ಸೆಲ್ ಮ್ಯಾಕ್ಸ್ ರೆಸೊಲ್ಯೂಷನ್, ವಿಡಿಯೋ ರೆಕಾರ್ಡಿಂಗ್, 720p ರೆಸೊಲ್ಯೂಷನ್, ಆಡಿಯೋ ಮತ್ತು ವಿಡಿಯೋ ಪ್ಲೇಯರ್ಸ್, ಬ್ಲಾಕ್ ಬೆರ್ರಿ 7.0 ಆವೃತ್ತಿಯ OS, 1.2 GHz QC 8655 ಪ್ರೊಸೆಸರ್, HTML ಬ್ರೌಸರ್, GPS, ವಿಶೇಷತೆಗಳ ಪಟ್ಟಿ ಸಾಕಷ್ಟು ದೊಡ್ಡದಿದೆ.
ಈ ಹೊಸ ಮೊಬೈಲ್ ನ ಬ್ಯಾಟರಿ ಬ್ಯಾಕಪ್ 307 ತಾಸುಗಳು ಹಾಗೂ 6 ತಾಸುಗಳ ಟಾಕ್ ಟೈಮ್. ನಿರಂತರವಾಗಿ 50 ತಾಸುಗಳ ಸಂಗೀತಸುಧೆ ಹರಿಸುವ ಸಾಮರ್ಥ್ಯವೂ ಇದಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರು. 31,500.


Click it and Unblock the Notifications