ಈ ಹೊಸ ಎಲ್ ಜಿ ಮೊಬೈಲ್ ಬರಲಿದೆ ಬರುವ ವರ್ಷ

Posted By: Staff

ಈ ಹೊಸ ಎಲ್ ಜಿ ಮೊಬೈಲ್ ಬರಲಿದೆ ಬರುವ ವರ್ಷ
ಎಲ್ ಜಿ ಮೊಬೈಲ್ ಎಲ್ಲರಿಗೂ ಗೊತ್ತು. ಈಗಾಗಲೇ ಸಾಕಷ್ಟು ಜನಪ್ರಯವಾಗಿರುವ ಈ ಕಂಪೆನಿಯಿಂದ ಲೆಕ್ಕವಿಲ್ಲದಷ್ಟು ಮೊಬೈಲುಗಳು, ಟ್ಯಾಬ್ಲೆಟ್ ಗಳು, ಲ್ಯಾಪ್ ಟಾಪ್ ಗಳೂ ಎಲ್ಲವೂ ಬಿಡುಗಡೆಯ ಭಾಗ್ಯ ಕಂಡು ಎಲ್ ಜಿ ಕಂಪೆನಿಯನ್ನು ಸಾಕಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತಿವೆ.

ಇದೀಗ ಬಿಡುಗಡೆಯಾಗುತ್ತಿದೆ, ಎಲ್ ಜಿ ಹೊಸ ಆಪ್ಟಿಮಸ್ 3D ಸ್ಲೀಕ್. ಇದು ಸಾಕಷ್ಟು ಆಧುನಿಕವಾಗಿಯೂ ಬಹುಪಯೋಗಿಯೂ ಇರುವುದಂತೂ ಸತ್ಯ. ಇದರಲ್ಲಿ ಏನೇನಿದೆ ಎಂದು ತಿಳಿಯಲು ಈ ಕೆಳಗೆ ನೋಡಿ...

ಮೊದಲನೆಯದಾಗಿ ಇದು ಜಗತ್ತಿನ ಪ್ರಪ್ರಥಮ ಗ್ಲಾಸು ರಹಿತ 3D ಮೊಬೈಲ್ ಫೊನು. ಉಳಿದ ವಿಶೇಷತೆಗಳಲ್ಲಿ ಡೈಮೆನ್ಷನ್ 128.8 X 68 X 11.9 mm, 168 ಗ್ರಾಮ್ ತೂಕ, 3D LCD ಕೆಪಾಕ್ಟಿವ್ ಟಚ್ ಸ್ಕ್ರೀನ್, 16 M ಕಲರ್ಸ್, 480 X 800 ಪಿಕ್ಸೆಲ್, ಎಕ್ಸೆಲೆರೋಮೀಟರ್ ಗೈರೋ ಸೆನ್ಸರ್, 8 GB ಆಂತರಿಕ ಮೆಮೊರಿ, 512 MB RAM, ವಿಸ್ತರಿಸಬಹುದಾದ 32 GB ಮೆಮೊರಿ ಇದರಲ್ಲಿದೆ.

ಇಷ್ಟೇ ಅಲ್ಲದೇ GPRS, EDGE, ವೈ-ಫೈ, A2DP ಸಹಿತ ಬ್ಲೂಟೂಥ್ 2.0 ಆವೃತ್ತಿ, ಆಂಡ್ರಾಯ್ಡ್ 2.2 ಫ್ರೋಯೋ OS, ಲೆಡ್ ಫ್ಲಾಶ್, 30 fps 720p ಕಾಪ್ಚರಿಂಗ್ ಸಾಮರ್ಥ್ಯ ಎಲ್ಲವೂ ಇದರಲ್ಲಿದೆ. ಸದ್ಯಕ್ಕೆ ಬೆಲೆ ನಿಗದಿಯಾಗಿಲ್ಲ. ಮುಂದಿನ ವರ್ಷ ಮಾರುಕಟ್ಟೆಗೆ ಆಗಮಿಸಲಿರುವ ಇದು ಆ ವೇಳೆಗೆ ಗ್ರಾಹಕರನ್ನು ಮೋಡಿ ಮಾಡಿ ಸೆಳೆಯಲು ಸಮರ್ಥವಾಗಬಹುದೇ ಎಂಬುದು ಸದ್ಯದ ಪ್ರಶ್ನೆ! ಉತ್ತರ ನಿಮಗ ಸಿಗಲಿದೆ ಮುಂದಿನ ವರ್ಷ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot