ಐಫೋನಿಗೆ ಹೊಸ ಬ್ರೌಸರ್: ಆಕಾಶಕ್ಕೆ ಐಫೊನ್!

Posted By: Staff

ಐಫೋನಿಗೆ ಹೊಸ ಬ್ರೌಸರ್: ಆಕಾಶಕ್ಕೆ ಐಫೊನ್!
ಪ್ರಸಿದ್ಧ ಐಫೋನ್ ಕಂಪೆನಿಗೆ ಇದೀಗ ಹೊಸ ಬ್ರೌಸರ್ ಬಂದಿದೆ. ಅಂದರೆ ಹಳೆಯ ಬ್ರೌಸರ್ ಹೊಸ ರೂಪ ಪಡೆದಿದೆ ಎಂದರೆ ಸರಿಯಾದೀತು! ಅದು ಡಾಲ್ಫಿನ್ ಬ್ರೌಸರ್. ಡಾಲ್ಫಿನ್ ಬ್ರೌಸರ್ ಐಫೊನಿಗೆ ತುಂಬಾ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಮೋಬೋ ಟ್ಯಾಪ್, ಪ್ರಸಿದ್ಧ ಡಾಲ್ಫಿನ್ ಬ್ರೌಸರ್ ಈಗ ತನ್ನ ಹೊಸ ಆವೃತ್ತಿಯನ್ನು ಸಿದ್ಧಗೊಳಿಸಿ ಪ್ರಕಟಿಸಿದ್ದು ಈ ಅಪ್ಲಿಕೇಶನ್ ಐಪ್ಯಾಡ್ ಮತ್ತು ಐಫೊನಿನಲ್ಲಿ ಲಭ್ಯವಿದೆ.

ಆಂಡ್ರಾಯ್ಡ್ ನಿಂದ ತಯಾರಿಸಲಾಗಿರುವ ಈ ಡಾಲ್ಫಿನ್ ಬ್ರೌಸರ್ ಇಂಟರ್ನೆಟ್ ಸರ್ಫಿಂಗ್ ಅನ್ನು ಅತ್ಯಂತ ಸರಳೀಕರಿಸಿ ಸುಲಭವಾಗಿ ಬಳಸಲು ಅನುವು ಮಾಡಿಕೊಡಲಿರುವ ಇದು URL ಆಟೋಮ್ಯಾಟಿಕ್ ಲಭ್ಯತೆಗೂ ಸಹಾಯಕ.

ಇದರಲ್ಲರುವ ಇನ್ನೊಂದು ವಿಶೇಷತೆಯೆಂದರೆ ಇದರಲ್ಲಿ ಥಂಬ್ ನಿಲ್ ಮೂಲಕ ವೆಬ್ ಫೇಜ್ ಡಿಸ್ ಪ್ಲೇ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿರುವ ಡೆಸ್ಕ್ ಟಾಪ್ ಫೀಚರ್ ಆಕರ್ಷಕ ಎನಿಸುತ್ತದೆ. ಈಗಾಗಲೇ ನೀವು ಒಂದು ಸೈಟ್ ನಲ್ಲಿ ಬ್ಯುಸಿ ಆಗಿದ್ದರೂ ಇನ್ನೊಂದು ಸೈಟ್ ಅಗತ್ಯಬಂದರೆ ಅದನ್ನೂ ಕೂಡ ಅಲ್ಲೇ ಸೈಡಿನಲ್ಲಿ ತೆರೆದು ನೋಡಬಹುದು.

ಹೀಗೆ ಹೊಸ ಹೊಸ ಸಾಧ್ಯತೆಗಳನ್ನು ಐಫೊನ್ ಮೂಲಕ ತೆರೆದಿಡಲು ಮುಂದಾಗಿದೆ ಡಾಲ್ಫಿನ್. ಮೊದಲೇ ಹೇರಳ ಸಾಧ್ಯತೆಗಳ ಸಾಗರದಂತಿರುವ ಐಫೋನ್ ಇನ್ನು ಮುಂದೆ ಇನ್ನಷ್ಟು ಮಿಂಚುವುದರಲ್ಲಿ ಸಂದೇಹವೇ ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot