ಸೋನಿ ಎರಿಕ್ಸನ್ ಹೊಸ ಮೊಬೈಲ್ ಶೀಘ್ರ ಮಾರುಕಟ್ಟೆಗೆ

By Super
|
ಸೋನಿ ಎರಿಕ್ಸನ್ ಹೊಸ ಮೊಬೈಲ್ ಶೀಘ್ರ ಮಾರುಕಟ್ಟೆಗೆ
ಡ್ಯುಯಲ್ ಕೋರ್ ಹ್ಯಾಂಡ್ ಸೆಟ್ ಗಳು ಭಾರತದಲ್ಲಿ ಈಗ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಂಡ್ ಸೆಟ್ ಗಳು. ಈಗ ಸೋನಿ ಎರಿಕ್ಸನ್ ಕೂಡ ಈ ಡ್ಯುಯಲ್ ಕೋರ್ ಹ್ಯಾಂಡ್ ಸೆಟ್ ಗೆ ಶರಣಾಗಿದೆ. ಏಕೆಂದರೆ ಈಗ ಸೋನಿ ಎರಕ್ಸನ್ ಕೂಡ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಗೆಲ್ಲಲೇಬೇಕಾಗಿದೆ. ಇದೀಗ ಬರುತ್ತಿರುವ ಸೋನಿ ಎರೊಕ್ಸನ್ ಹೊಸ ಮೊಬೈಲ್ ನೋಝೋಮಿ.

ಇದು ಐಫೋನ್ 4 ಮತ್ತು ಸ್ಯಾಮ್ ಸಂಗ್ ಗೆಲಾಕ್ಸಿ 2 ಇದಕ್ಕೆ ಸ್ಪರ್ಧಿ ಎಂಬುದು ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಮಾತು. ಈ ಹೊಸ ನೋಝೋಮಿಯಲ್ಲಿ ಏನೇನಿದೆ ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಇದು ಬರುವ ವರ್ಷ ಬರಲಿರುವ ಫೊನ್. ಬರುವಾಗ ಇದು ಬಣ್ಣ ಬಣ್ಣದ ವಿನ್ಯಾಸ ಹೊಂದಿ ಆಕರ್ಷಕವಾಗಿ ಬರಲಿದೆ.


ಇದು ಕ್ಯಾಂಡಿಬಾರ್ ಆಕಾರ ಹೊಂದಿದ್ದು 1280 x 720 ಪಿಕ್ಸೆಲ್ ರೆಸೊಲ್ಯೂಷನ್, 16M ಕಲರ್, 342 ppi ಪಿಕ್ಸೆಲ್ ಡೆನ್ಸಿಟಿ, 1.5 GHz ಡ್ಯುಯಲ್ ಕೋರ್ ಪ್ರೊಸೆಸರ್, 1GB RAM, 2G ಮತ್ತು 3G ನೆಟ್ ವರ್ಕ್, GSM, 850, 900, 1800, 1900 MHz ಮತ್ತು UMTS/HSPA 800, 850, 900, 1900, 2100 MHz ಫ್ರೀಕ್ವೆನ್ಸೀಸ್, ಪ್ರೊಕ್ಸಿಮಿಟಿ ಸೆನ್ಸರ್, ಕಾಂಪಾಟಿಬಿಲಿಟಿ, ಫ್ಲಾಶ್ ಸಹಕಾರ, ಆಂಡ್ರಾಯ್ಡ್ OS (ಬಹುಶಃ, ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಥವಾ ಜಿಂಜರ್ ಬ್ರೆಡ್) ಹೊಂದಿದೆ.

ಫ್ರಂಟ್ ಮತ್ತು ರೇರ್ ಕ್ಯಾಮೆರಾ, HD ವಿಡಿಯೋ ರೆಕಾರ್ಡಿಂಗ್, GPRS, EDGE, 802.11 ವೈ-ಫೈ, A2DP 2.1 ಆವೃತ್ತಿಯ ಬ್ಲೂಟೂಥ್, ನಿಯೋರೀಡರ್ ಬಾರ್ ಕೋಡ್ ಸ್ಕ್ಯಾನರ್, ವೈಸ್ ಪೈಲಟ್ ನೇವಿಗೇಶನ್, ಟ್ರಾಕ್ ಐಡಿ ಮ್ಯೂಸಿಕ್ ರಿಕಗ್ನಿಷನ್, HDMI ಪೋರ್ಟ್, TV ಔಟ್, A-GPS ಮತ್ತು ಆಂಡ್ರಾಯ್ಡ್ ಗೆ ಎಕ್ಸೆಸ್ ಎಲ್ಲವೂ ಇದೆ. A 1750 mAh Li-Po ion ಬ್ಯಾಟರಿ, ವಿಸ್ತರಿಸಬಲ್ಲ 32 GB ಮೆಮೊರಿ ಇದರಲ್ಲಿದೆ. ಭಾರತದಲ್ಲಿ ಬೆಲೆ ಸುಮಾರು 29,000 ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X