Subscribe to Gizbot

ಮಾರುಕಟ್ಟೆಗೆ ಶೀಘ್ರದಲ್ಲಿ ಎಚ್ ಟಿ ಸಿ ಹೊಸ ಮೊಬೈಲ್

Posted By: Staff

ಮಾರುಕಟ್ಟೆಗೆ ಶೀಘ್ರದಲ್ಲಿ ಎಚ್ ಟಿ ಸಿ ಹೊಸ ಮೊಬೈಲ್
ಎಚ್ ಟಿ ಸಿ ಕಂಪೆನಿ ಮೊಬೈಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದೆ. ಈಗಾಗಲೇ ಸಾಕಷ್ಟು ಸ್ಮಾರ್ಟ್ ಫೊನುಗಳನ್ನು ಹೊರತಂದಿರುವ ಅದು ಇದೀಗ ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಇದರ ಹೆಸರು ಎಚ್ ಟಿ ಸಿ ರನ್ನಿಮೇಡ್.

ಎಚ್ ಟಿ ಸಿ ಕಂಪೆನಿಯ ಈ ಮೊಬೈಲ್ ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಇದು ಆಂಡ್ರಾಯ್ಡ್ 2.3.4 ಆವೃತ್ತಿ ಹೊಂದಿರುವ ಸ್ಮಾರ್ಟ್ ಫೊನ್. ಇದರಲ್ಲಿ 1.5 GHz ಕ್ಯುಲ್ ಕಾಮ್ ಸಿಂಗಲ್ ಕೋರ್ ಪ್ರೊಸೆಸರ್, 3.5 ಯೂಸರ್ ಇಂಟರ್ ಫೇಸ್, 4.7 ಕೆಪೆಕ್ಟಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ, 800 x 480 ಪಿಕ್ಸೆಲ್ಸ್ ರೆಸೊಲ್ಯೂಷನ್ ಇದೆ.

ಪ್ರೊಕ್ಸಿಮಿಟಿ & ಲೈಟ್ ಸೆನ್ಸರ್, 720p HD ವಿಡಿಯೋ ರೆಕಾರ್ಡಿಂಗ್, 8 ಮೆಗಾ ಪಿಕ್ಸೆಲ್ ಮತ್ತು ಲೆಡ್ ಫ್ಲಾಶ್ ಕ್ಯಾಮೆರಾ, 28mm ವೈಡ್ ಆಂಗಲ್ ಲೆನ್ಸ್, f/2/2 ಫೋಕಲ್ ರೇಶಿಯೋ, 60 ಫ್ರೇಮ್ಸ್/ಸೆಕೆಂಡ್ ಕ್ಯಾಪ್ಚರಿಂಗ್ ಸೌಲಭ್ಯ, VGA, ಉತ್ತಮ ಸೌಲಭ್ಯದ ಬ್ಲೂಟೂಥ್(A2DP), ಎಲ್ಲವೂ ಇದರಲ್ಲಿದೆ.

3.5 mm ಹೆಡ್ ಫೋನ್ ಆಡಿಯೋ ಜ್ಯಾಕ್, 2.0 ಆವೃತ್ತಿಯ ಮೈಕ್ರೋ USB ಪೋರ್ಟ್, ವೈ-ಫೈ, ವಿಸ್ತರಿಸಬಲ್ಲ 32 GB ಸಾಮರ್ಥ್ಯ, 1930 mAh ಬ್ಯಾಟರಿ, ಹೀಗೆ ಸಾಕಷ್ಟು ಆಧುನಿಕ ಸೌಲಭ್ಯ ಹೊಂದಿದೆ.

ಇದರ ಬೆಲೆ ಮಾಹಿತ ಸದ್ಯಕ್ಕಿಲ್ಲ. ಸದ್ಯದಲ್ಲೇ ಬೆಲೆ ಹಾಗೂ ಬಿಡುಗಡೆಯ ದಿನಾಂಕದ ಮಾಹಿತಿ ಲಭ್ಯವಾಗಲಿರುವ ನಿರೀಕ್ಷೆಯಿದೆ. ಈ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಇದೀಗ ಜನರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತಿರುವುದಂತೂ ಗ್ಯಾರಂಟಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot