ಐಫೋನಿಗೆ ನೇರಸ್ಪರ್ಧಿ ಈಗ ಚೀನಾ ಮೊಬೈಲ್ ಫಿಲಿಪ್ಸ್

ದಶಕಗಳ ಹಿಂದೊಮ್ಮೆ ಮಹಾನ್ ಕಂಪೆನಿಯಾಗಿ ಮೆರೆದಿದ್ದ ಫಿಲಿಪ್ಸ್ ಮೊಬೈಲ್ ಕಂಪೆನಿಯನ್ನು ಶೆನ್ಜೆನ್ ಸಾಂಗ್ ಫೈ ಕನ್ಸೂಮರ್ ಕಂಪೆನಿ ಕೊಂಡಿದ್ದು ಇದೀಗ ಹೊಸ ಸ್ಮಾರ್ಟ್ ಫೊನ್ ಬಿಡುಗಡೆಗೆ ಮುಂದಾಗಿದೆ. ಇದರ ಹೆಸರು X9320 ಎಂದಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಸ್ಯಾಮ್ ಸಂಗ್ ಗೆಲಾಕ್ಸಿ S ಸಿರೀಸ್ ಮತ್ತು ಆಪಲ್ ಐಫೋನ್ 5 ಫೊನುಗಳಿಗೆ ಫಿಲಿಪ್ಸ್ ನ ಈ ಹೊಸ ಚೈನಾ ಮೊಬೈಲ್ ಪ್ರತಿಸ್ಪರ್ಧಿಯಾಗಿದೆ.
ಇದರಲ್ಲಿ 4.3 ಇಂಚ್ ಕೆಪಾಕ್ಟಿವ್ ಟಚ್ ಸ್ಕ್ರೀನ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆವೃತ್ತಿಯ OS, ಡ್ಯುಯಲ್ ಸಿಮ್ ಹ್ಯಾಂಡ್ ಸೆಟ್ ಆಗಿರುವ ಇದು 2 GSM ಸಿಮ್ಮನ್ನು ಒಂದೇ ವೇಳೆಯಲ್ಲಿ ಸಪೋರ್ಟ್ ಮಾಡುತ್ತದೆ.
ಇದರಲ್ಲಿರುವ ಬ್ಯಾಟರಿ ಬ್ಯಾಕಪ್ ಚೆನ್ನಾಗಿದ್ದು 15 ತಾಸುಗಳ ನಿರಂತರ ಟಾಕ್ ಟೈಮ್ ನೀಡಲಿದೆ. ಜೊತೆಗೆ 960 ತಾಸುಗಳ ಸ್ಟ್ಯಾಂಡ್ ಬೈ ಕೂಡ ಲಭ್ಯ. ಆದರೆ ಪ್ರಸಿದ್ಧ ಐಫೋನಿನಲ್ಲಿ ಕೇವಲ 7 ತಾಸುಗಳ ಟಾಕ್ ಟೈಮ್ ಮತ್ತು 300 ತಾಸುಗಳ ಬ್ಯಾಕಪ್ ಇದೆ.
ದೀಪಾವಳಿಗೆ ಈ ಹೊಸ ಫಿಲಿಪ್ಸ್ ಮೊಬೈಲ್ ಫೋನಿನ ಆಗಮನವನ್ನು ನಿರೀಕ್ಷಿಸಲಾಗಿದ್ದು ಬೆಲೆ ಕೂಡ ಸಾಕಷ್ಟು ಕಡಿಮೆ ಇದೆ. ಇದರ ಬೆಲೆ ರು. 8,500. ಇಷ್ಟು ಕಡಿಮೆ ಬೆಲೆಗೆ ಇಷ್ಟು ಅತ್ಯಾಧುನಿಕ ಫೊನ್ ಲಭ್ಯವಿರುವುದು ಗ್ರಾಹಕರಿಗೆ ಸ್ವರ್ಗ ಸಿಕ್ಕಾಂತಾಗುವುದು ಗ್ಯಾರಂಟಿ. ಉಳಿದ ಸ್ಮಾರ್ಟ್ ಫೊನ್ ಗಳು ತಲೆನೋವು ಬಂದು ನರಳಿದರೆ ಆಶ್ಚರ್ಯವೇನೂ ಇಲ್ಲ.


Click it and Unblock the Notifications