ಸ್ಯಾಮ್ ಸಂಗ್ ವಿಂಡೋಸ್ ಫೊನ್ ಭಾರತೀಯ ಮಾರುಕಟ್ಟೆಗೆ

Posted By: Staff

ಸ್ಯಾಮ್ ಸಂಗ್ ವಿಂಡೋಸ್ ಫೊನ್ ಭಾರತೀಯ ಮಾರುಕಟ್ಟೆಗೆ
ಸ್ಯಾಮ್ ಸಂಗ್ ಹೆಸರು ಗ್ಯಾಜೆಟ್ಸ್ ಕ್ಷೇತ್ರದಲ್ಲಿ ಸುಪರಿಚಿತ. ಈಗಾಗಲೇ ಸಾಕಷ್ಟು ಹೊಸ ಮೊಬೈಲುಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಇದು ಇದೀಗ 2 ಹೊಸ ವಿಂಡೋಸ್ ಫೊನ್ ಬಿಡಲು ಸಜ್ಜಾಗಿದೆ. ಈ ಫೊನಿಗಳ ಹೆಸರು ಸ್ಯಾಮ್ ಸಂಗ್ ಫೊಕಸ್ S ಮತ್ತು ಸ್ಯಾಮ್ ಸಂಗ್ ಫೋಕಸ್ ಫ್ಲಾಶ್. ಈಗ ಇವೆರಡೂ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ.

ಇವೆರಡೂ ಹೈ ಎಂಡ್ ಸ್ಮಾರ್ಟ್ ಹ್ಯಾಂಡ್ ಸೆಟ್ ಗಳಾಗಿದ್ದು ಮೈಕ್ರೋಸಾಪ್ಟ್ ಆಧಾರಿತ ಕಾರ್ಯ ನಿರ್ವಹಣೆ ಹೊಂದಿವೆ. ಇದನ್ನು ವಿಂಡೋಸ್ 7 OS ಎಂದು ಕರೆಯಲಾಗುತ್ತಿದೆ.

ಫೋಕಸ್ S ನಲ್ಲಿ 1 GHz ಸ್ಕಾರ್ಪಿಯನ್ ಪ್ರೊಸೆಸರ್ ಇದ್ದು ಎಡ್ರಿನೋ 200 GPU ಸಹಕಾರದಿಂದ ಕಾರ್ಯ ನಿರವಹಿಸುತ್ತದೆ. ಕ್ಯುಲ್ ಕಾಮ್ QSD8250 ಸ್ನಾಪ್ ಡ್ರಗಾನ್ ಚಿಪ್ ಸೆಟ್ ಇದಾಗಿದೆ. 4 ಇಂಚ್ ಗಳ ಅಗಲದ ಡಿಸ್ ಪ್ಲೇ, AMOLED ಕೆಪಾಕ್ಟಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ, 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಟೋ ಫೊಕಸ್ ಮತ್ತು ಲೆಡ್ ಫ್ಲಾಶ್ ಹೊಂದಿದೆ. ಜೊತೆಗೆ 3.2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡ ಇದರಲ್ಲಿದೆ. ಇನ್ನು ಫೊಕಸ್ ಫ್ಲಾಶ್ ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. 7.5 ವಿಂಡೋಸ್ ಮ್ಯಾಂಗೋ OS ಜೊತೆಗೆ 1.4 GHz ಪ್ರೊಸೆಸರ್ ಹೊಂದಿದೆ.

ಈ ವಿಂಡೋಸ್ ಮ್ಯಾಂಗೋ ಫೊನಿನ ವಿಶೇಷತೆಯೆಂದರೆ ಇದು ರಿಮೂವೆಬಲ್ ಬ್ಯಾಟರಿ ಹೊಂದಿರುತ್ತದೆ. ಜೊತೆಗೆ ಕಡಿಮೆ ಉಪಯೋಗ ಸಾಮರ್ಥ್ಯ ಕೂಡ ಇದರಿಂದ ಲಭ್ಯ. ಫೇಸ್ ಬುಕ್ ಚಾಟ್ ಮತ್ತು ಮ್ಯೂಸಿಕ್ ಐಡೆಂಟಿಫಿಕೇಶನ್ ಇದೀಗ ಹೊಸದಾಗಿ ಸ್ಮಾರ್ಟ್ ಫೊನುಗಳಲ್ಲಿ ಲಭ್ಯವಾಗುತ್ತಿದೆ. ಬಾರ್ ಕೋಡ್ ಸ್ಕ್ಯಾನರ್, ಫೊಡ್ ಕಾಸ್ಟ್, ವೈ-ಫೈ, GPS ಕೂಡ ಇದರಲ್ಲಿದೆ.

ಮುಂದೆ ಅತ್ಯಾಧುನಿಕವಾದ ವಿಂಡೋಸ್ 8 ಹ್ಯಾಂಡ್ ಸೆಟ್ ಗಳನ್ನು ಮಾರುಕಟ್ಟೆಗೆ ತರಲು ಸ್ಯಾಮ್ ಸಂಗ್ ಯೋಜನೆ ಹಾಕಿಕೊಂಡಿದೆ. ಸ್ಯಾಮ್ ಸಂಗ್ ಫೊಕಸ್ S ಬೆಲೆ ru. 25,000 ಮತ್ತು ಫೋಕಸ್ ಫ್ಲಾಶ್ ಬೆಲೆ ರು. 20,000 ಎಂದು ಅಂದಾಜಿಸಲಾಗಿದೆ.


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot