ಹೊಸ ಸೆನ್ಸೇಷನ್ ಮೊಬೈಲ್ ಮಾರಾಟ ದಾಖಲೆ ಗ್ಯಾರಂಟಿ

ಮೊದಲನೆಯದಾಗಿ ಇದು ಆಂಡ್ರಾಯ್ಡ್ OS ಹೊಂದಿರುವ ಸ್ಮಾರ್ಟ್ ಫೊನ್. ಇದು 126.1 x 65.4 x 11.3 mm ಅಳತೆ ಹಾಗೂ 151 ಗ್ರಾಮ್ಸ್ ತೂಕ ಹೊಂದಿದೆ. ಇದರಲ್ಲಿ 4.3 ಇಂಚ್ cHD, 540 x 960 ಕೆಪಾಕ್ಟಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಇದೆ. ಇದು ಎಕ್ಸೆಲೆರೋಮೀಟರ್, ಗೈರೋ ಸೆನ್ಸರ್, ಯೂಸರ್ ಇಂಟರ್ ಫೇಸ್, ಟಚ್ ಸೆನ್ಸೆಟಿವ ಸ್ಕ್ರೀನ್ ಎಲ್ಲವನ್ನೂ ಹೊಂದಿ ಆಧುನಿಕವಾಗಿದೆ.
ಇದರಲ್ಲಿ 3.5 mm ಆಡಿಯೋ ಜ್ಯಾಕ್, ಹೊರ ಸ್ಪೀಕರ್ ಮತ್ತು ಆಮ್ ಫ್ಲೀಪಾಯರ್, 1.5 GHz ಡ್ಯುಯಲ್ ಕೋರ್ ಪ್ರೊಸೆಸರ್, ಆಡ್ರಾಯ್ಡ್ V2.3 ಜಿಂಜರ್ ಬ್ರೆಡ್ OS, 4 GB ಮೆಮೊರಿ, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಎಲ್ಲವೂ ಇದರಲ್ಲಿದೆ.
ಇಂಟರ್ನೆಟ್ ಕನೆಕ್ಟಿವಿಟಿಯಲ್ಲಿ GPRS (80 Kbps), EDGE (236.8 Kbps) ಮತ್ತು 3G ಕನೆಕ್ಟಿವಿಟಿ, HSDPA 14.4 Mbps ಸ್ಪೀಡ್, HSUPA 5.76 Mbps ಸ್ಪೀಡ್ ಇದು ಹೊಂದಿದೆ.
ಹೈ ಸ್ಪೀಡ್ 802.11 b/g/n ವೈ-ಫೈ, 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, VGA ಫ್ರಂಟ್ ಕ್ಯಾಮೆರಾ, 3.0 ಆವೃತ್ತಿ, A2DP ಯ ಬ್ಲೂಟೂಥ್, 1730 mAh Li ಬ್ಯಾಟರಿ, 9 ತಾಸುಗಳ ಟಾಕ್ ಟೈಮ್, 2G & 7 ತಾಸುಗಳ ಬ್ಯಾಟರಿ ಬ್ಯಾಕಪ್ ಜೊತೆ 3G ನೆಟ್ ವರ್ಕ್ ಕೂಡ ಇದೆ. ಇದರ ಬೆಲೆ ಸುಮಾರು 28,000 ಎಂದು ಅಂದಾಜಿಸಲಾಗಿದೆ.


Click it and Unblock the Notifications