Subscribe to Gizbot

ಎಲ್ ಜಿ ಮೊಬೈಲ್ ಯುದ್ಧ: ಯಾರನ್ನು ಗೆಲ್ಲಿಸುತ್ತೀರಿ!

Posted By: Super

ಎಲ್ ಜಿ ಮೊಬೈಲ್ ಯುದ್ಧ: ಯಾರನ್ನು ಗೆಲ್ಲಿಸುತ್ತೀರಿ!
ಇಲ್ಲೆರಡು ಪ್ರಖ್ಯಾತ ಕಂಪೆನಿಗಳ ಮೊಬೈಲುಗಳಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಅವು ಎಲ್ ಜಿ ಆಪ್ಟಿಮಸ್ ಒನ್ P 500 ಮತ್ತು ಎಲ್ ಜಿ ಆಪ್ಟಿಮಸ್ ಹಬ್. ಈ ಎರಡು ಮೊಬೈಲುಗಳಲ್ಲಿರುವ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಕೆಳಗೆ ವಿವರಿಸಲಾಗಿದೆ, ಓದಿಕೊಳ್ಳಿ...

ಎರಡೂ ಕೂಡ ಒಂದೇ ಕಂಪೆನಿಯ ಸ್ಮಾರ್ಟ್ ಫೊನುಗಳು. ಎಲ್ ಜಿ ಫೋನುಗಳು ಗೂಗಲ್ಸ್ ಆಡ್ರಾಯ್ಡ್ ಮೂಲಕ ಕಾರ್ಯ ನಿರ್ವಹಿಸುತ್ತವೆ. ಆಪ್ಟಿಮಸ್ ಒನ್ ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿದೆ. ಇದೀಗ ಬರಲಿರುವ ಹೊಸ ಫೊನ್ ಎಲ್ ಜಿ ಹಬ್. ಎರಡರ ವಿನ್ಯಾಸ ಹಾಗೂ ತೂಕ ಹೆಚ್ಚುಕಡಿಮೆ ಒಂದೇ ಆಗಿದೆ. ಹಬ್ ತೂಕ 123 ಗ್ರಾಮ್ ಹಾಗೂ ಒನ್ ತೂಕ 129 ಗ್ರಾಮ್. ಹಬ್ ಫೊನನ್ನು ಯುನಿವಾ ಎಂದು ಕೂಡ ಕರೆಯಲಾಗುತ್ತಿದೆ.

ಹಬ್ ಕರ್ವ್ಡ್ ಎಡ್ಜ್ ರೆಕ್ಟ್ ಆಗ್ಯುಲರ್ ಮಾದರಿ ಹೊಂದಿದ್ದರೆ ಆಪ್ಟಿಮಸ್ ಒನ್ ಅದೇ ಮಾದರಿಯ ಸ್ಲೀಕ್ ವಿನ್ಯಾಸ ಹೊಂದಿದೆ. ಹಬ್, 113.4 X 60.8 X 11.9 mm ಡೈಮೆನ್ಷನ್ ಹೊಂದಿದ್ದರೆ ಒನ್, 113.5 X 59 X 13.3 mm ಹೊಂದಿದೆ. ಹಬ್ 3.5 ಇಂಚುಗಳ ಕೆಪಾಕ್ಟಿವ್ ಡಿಸ್ ಪ್ಲೇ ಹೊಂದಿದೆ. ಆದರೆ ಒನ್ 3.2 ಇಂಚುಗಳ TFT ಕೆಪಾಕ್ಟಿಬ್ ಟಚ್ ಸ್ಕ್ರೀನ್ ಹೊಂದಿದೆ. ಹಬ್ ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2592 x 1944 ರೆಸೊಲ್ಯೂಷನ್ ಇದ್ದರೆ ಒನ್ 3 ಮೆಗಾ ಪಿಕ್ಸೆಲ್ ಕ್ಯಾಮೆರಾ, 2048 x 1536 ರೆಸೊಲ್ಯೂಷನ್ ಹೊಂದಿದೆ.

VGA ಕ್ಯಾಮೆರಾ ಎರಡರಲ್ಲೂ ಇದೆಯಾದರೂ ಹಬ್ ನಲ್ಲಿ 24 fps ಹಾಗೂ ಒನ್ 18 fps ಸೆಕೆಂಡರಿ ಕ್ಯಾಮೆರಾ ಹೊಂದಿದೆ.
ಮಲ್ಟಿಮೀಡಿಯಾದಲ್ಲಿ ಎರಡರಲ್ಲೂ Mp3/WMA/WAV/ EAAC+ ಆಡಿಯೋ ಫಾರ್ಮೆಟ್ಸ್, 5 mm ಆಡಿಯೋ ಜ್ಯಾಕ್, MP4, DivX, Xvid, H.264, H.263 ವಿಡಿಯೋ ಫಾರ್ಮೆಟ್ಸ್ ಗಳೂ ಲಭ್ಯವಿದೆ. WMV, 3G, GPRS, EDGE ಮತ್ತು WiFi ಕನೆಕ್ಟಿವಿಟಿ ಎರಡೂ ಮೊಬೈಲುಗಳಲ್ಲಿ ಲಭ್ಯ. ಬ್ಲೂಟೂಥ್, v3.0 ಹಬ್ ನಲ್ಲಿ ಲಭ್ಯವಿದ್ದರೆ ಒನ್ ನಲ್ಲಿ ಇದು ಕೇವಲ 2.1 ಮಾತ್ರ. ಎರಡರಲ್ಲೂ ಆಂತರಿಕ 2 GB ಹಾಗೂ ವಿಸ್ತರಿಸಬಲ್ಲ 32 Gb ಮೆಮೊರಿ ಇದೆ.

ಎರಡರಲ್ಲೂ 1500 Li ion ಬ್ಯಾಟರಿ, 15 ತಾಸುಗಳ ಟಾಕ್ ಟೈಮ್, 700 ತಾಸುಗಳ ಸ್ಟ್ಯಾಂಡ್ ಬೈ ಸೌಲಭ್ಯವಿದೆ. 2.3 ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ೋ ಮೊಬೈಲುಗಳು ಕಾರ್ಯ ನಿರ್ವಹಿಸುತ್ತವೆ. ಆಪ್ಟಿಮಸ್ ಒನ್ ಬೆಲೆ ರು. 10,000 ಹಾಗೂ ಹಬ್ ಬೆಲೆ ಸುಮಾರು ರು. 13,000. ಎರಡೂ ವಿಶೆಷವಾದ ಸ್ಮಾರ್ಟ್ ಫೊನುಗಳೇ. ಆಯ್ಕೆ ನಿಮ್ಮದು...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot