ಈ ಮೊಬೈಲುಗಳ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ!

Posted By: Staff

ಈ ಮೊಬೈಲುಗಳ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ!
ಇಲ್ಲೆರಡು ಮೊಬೈಲ್ ಗಳ ಸ್ಪರ್ಧೆ ಇದೆ. ಸ್ಪರ್ಧಿಗಳು ಮ್ಯಾಕ್ಸ್ MS727 ಸೋಲ್ ಮತ್ತು ಮೈಕ್ರೋಮ್ಯಾಕ್ಸ್ X222. ಅವುಗಳಲ್ಲಿರುವ ಸಾಮ್ಯತೆ ಮ್ಮತ ಭಿನ್ನತೆಗಳ ಬಗ್ಗೆ ತಿಳಿಯೋಣ...

ಈ ಎರಡೂ ಮೊಬೈಲುಗಳೂ ಮಧ್ಯಮ ವರ್ಗವನ್ನು ಪ್ರತಿನಿಧಿಸುವಂತೆ ರೂಪುಗೊಂಡಿವೆ. ಎರಡೂ ಕೂಡ ಟಚ್ ಸ್ಕ್ರೀನ್ ಮೊಬೈಲುಗಳು. ಎರಡು ಸಿಮ್ ಹಾಗೂ ಸುಂದರ ವಿನ್ಯಾಸ ಎರಡರಲ್ಲೂ ಇದೆ. ಮ್ಯಾಕ್ಸ್ ಮೊಬೈಲ್ ಸ್ಲೀಕ್ ಆಗಿ ಆಕರ್ಷಕವಾಗಿದೆ. ಮೈಕ್ರೋಮ್ಯಾಕ್ಸ್ ಸಣ್ಣ ಹಾಗೂ ಕ್ಯೂಟ್ ಮೊಬೈಲ್.

ಎರಡರಲ್ಲೂ GSM ಸಿಮ್, 900 / 1800 MHz ಡಿಸ್ ಪ್ಲೇ, 2.4 ಇಂಚುಗಳ ಸ್ಕ್ರೀನ್, 240 x 320 ರೆಸೊಲ್ಯೂಷನ್ ಎರಡರಲ್ಲೂ ಇದೆ. ಮೈಕ್ರೋಮ್ಯಾಕ್ಸ್ ನಲ್ಲಿ QVGA ಟಚ್ ಸ್ಕ್ರೀನ್ ಡಿಸ್ ಪ್ಲೇ ಜೊತೆಗೆ 0.3 MP ಕ್ಯಾಮೆರಾ, VGA ಕ್ಯಾಮೆರಾ ಇದೆ. ಮ್ಯಾಕ್ಸ್ ನಲ್ಲಿ 1.3 MP ಕ್ಯಾಮೆರಾ, ಡಿಜಿಟಲ್ ಝೂಮ್ ಮತ್ತು 1280 x 1024 ಪಿಕ್ಸೆಲ್ ರೆಸೊಲ್ಯೂಷನ್ ಲಭ್ಯ.

ಮ್ಯಾಕ್ಸ್ ನಲ್ಲಿ ಒಳ್ಳೆಯ ಗುಣಮಟ್ಟದ ಮೀಡಿಯಾ ಪ್ಲೇಯರ್ಸ್ ಇದೆ. ಇದರಲ್ಲಿರುವ ವಿಡಿಯೋ ಪ್ಲೇಯರ್ Mp4 ಪ್ರತಿನಿಧಿಸುತ್ತದೆ. ಎರಡೂ ಮೊಬೈಲುಗಳೂ Mp3/WAV/AMR ಫಾರ್ಮೆಟ್ಸ್ ಗಳನ್ನು ಹೊಂದಿವೆ. ಮ್ಯಾಕ್ಸ್ ನಲ್ಲಿ WAP ಬ್ರೌಸರ್ ಮತ್ತು ಆಲ್ಟರ್ನೇಟಿವ್ ಬ್ರೌಸರ್, ಒಪೆರಾ ಮಿನಿ ಲಭ್ಯ. ಎರಡರಲ್ಲೂ SMS/MMS ಸೌಲಭ್ಯವಿದ್ದರೂ ಮ್ಯಾಕ್ಸ್ ನಲ್ಲಿ ಇದು ಉತ್ತಮವಾಗಿದೆ.

ಮ್ಯಾಕ್ಸ್ ನಲ್ಲಿ 2 GB ಹಾಗೂ ಮೈಕ್ರೋ SD ಕಾರ್ಡ್ ಲಭ್ಯ. ಆದರೆ ಮೈಕ್ರೋಮ್ಯಾಕ್ಸ್ ನಲ್ಲಿ 8 GB ಇದೆ. ಲೌಡ್ ಸ್ಪೀಕರ್ ಔಟ್ ಪುಟ್ ಎರಡರಲ್ಲೂ ಚೆನ್ನಾಗಿದೆ.
ಇನ್ನು ಅತೀ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ ಮ್ಯಾಕ್ಸ್ ಮೊಬೈಲ್ ಬೆಲೆ ರು. 3,350 ಹಾಗೂ ಮೈಕ್ರೋಮ್ಯಾಕ್ಸ್ ಬೆಲೆ ರು. 2500. ಎರಡರ ವಿಶೇಷತೆಗಳು ಹಾಗೂ ಬೆಲೆಗಳೂ ಕೂಡ ಆಕರ್ಷಕವಾಗಿವೆ. ಇನ್ನು ಆಯ್ಕೆ ನಿಮ್ಮದು...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot