ವಿಡಿಯೋಕಾನ್ ಹೊಸ ಮೊಬೈಲ್ ಏನ್ ಚೆಂದ!

By Super
|
ವಿಡಿಯೋಕಾನ್ ಹೊಸ ಮೊಬೈಲ್ ಏನ್ ಚೆಂದ!
ವಿಡಿಯೋಕಾನ್ ಕಂಪೆನಿ ಜಗತ್ತಿನಾದ್ಯಂತ ಸಾಕಷ್ಟು ಪ್ರಖ್ಯಾತಿ ಗಳಿಸಿದೆ. ಈ ಕಂಪೆನಿಯಿಂದ ಈಗಾಗಲೇ ಸಾಕಷ್ಟು ಗ್ಯಾಜೆಟ್ಸ್ ಗಳು ಮಾರುಕಟ್ಟೆಗೆ ಬಂದಿವೆ. ಇದೀಗ ಮಾರುಕಟ್ಟೆಗೆ ಬರುತ್ತಿದೆ ಹೊಸ ವಿಡಿಯೋಕಾನ್ ಕಂಪೆನಿಯ ಮೊಬೈಲ್. ಹೆಸರು ವಿಡಿಯೋಕಾನ್ VG1515. ಈ ಹೊಸ ಮೊಬೈಲಿನಲ್ಲಿ ಸಾಕಷ್ಟು ವೀಶೇಷತೆಗಳಿವೆ. ಮೊದಲನೆಯದಾಗಿ ಇದು ಅತ್ಯಾಧುನಿಕ ಹಾಗೂ ಅತೀ ಹಗುರವಾದ ಹ್ಯಾಂಡ್ ಸೆಟ್. ಕಡಿಮೆ ಬೆಲೆ ಕೂಡ.

ಈ ಮೊಬೈಲ್ ಕಡಿಮೆ ಬೆಲೆಗೆ ಅತೀ ಹೆಚ್ಚು ವಿಶೇಷತೆಗಳುಳ್ಳ ಮೊಬೈಲ್ ಎಂದೇ ಹೇಳಬಹುದು. ಡ್ಯುಯಲ್ ಸಿಮ್ ಹೊಂದಿರುವ ಇದು TFT ಡಿಸ್ ಪ್ಲೇ, 240 x 320 ಸ್ಕ್ರೀನ್ ಸೈಜ್ ಹೊಂದಿದೆ. 1.3 MP ಕ್ಯಾಮೆರಾ, 1280 x 1024 ಪಿಕ್ಸಲ್ ರೆಸೊಲ್ಯೂಷನ್, ಡಿಜಿಟಲ್ ಝೂಮ್ ಇದರಲ್ಲಿದೆ.

ಇಂಟರ್ನೆಟ್ ನಲ್ಲಿ GPRS, SD ಕಾರ್ಡ್ಸ್, T-ಫ್ಲಾಶ್ ಕಾರ್ಡ್, 16 GB ಮೆಮೊರಿ ಸಾಮರ್ಥ್ಯ ಇದರಲ್ಲಿದೆ. ಸಾಕಷ್ಟು ಉತ್ಕೃಷ್ಟ ಬ್ಯಾಟರಿ ಬ್ಯಾಕಪ್ ಕೂಡ ಇದರಲ್ಲಿದೆ. ಎಷ್ಟೆಲ್ಲ ಇರುವ ಇದರ ಬೆಲೆ ರು. 4,850. ನಿಮಗೆ ಮಾಹಿತಿ ತಿಳಿದ ಮೇಲೆ ನೀವು ಈಗ ಖಂಡಿತ ಈ ಹೊಸ ಮೊಬೈಲ್ ಕೊಳ್ಳದೇ ಇರಲಾರಿರಿ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X