ನೋಡಿ, ಈ ಹೊಸ ಝೆನ್ ಮೊಬೈಲ್ ಚೀಪ್ & ಬೆಸ್ಟ್

Posted By: Staff

ನೋಡಿ, ಈ ಹೊಸ ಝೆನ್ ಮೊಬೈಲ್ ಚೀಪ್ & ಬೆಸ್ಟ್
ಝೆನ್ ಮೊಬೈಲ್ ಕಂಪೆನಿ ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಮೊಬೈಲ್ ಹೆಸರು ಝೆನ್ M72. ಈ ಮೊಭಿಲ ನ್ಲ್ಇರುವ ವಿಶೇಷತೆಗಳು ಹೀಗಿವೆ ನೋಡಿ...

ಇದು ಭಾರತೀಯ ಮೂಲದ ಮೊಬೈಲ್ ಕಂಪೆನಿಯಾಗಿದ್ದು ಜಗತ್ತಿನೆಲ್ಲೆಡೆ ಪ್ರಖ್ಯಾತವಾಗಿದೆ. ಈ ಹೊಸ ಮೊಬೈಲ್ ಭಾರತದಲ್ಲಿ ಮತ್ತು ಹೊರ ದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು ಇದೀಗ ಆಫ್ರಿಕನ್ ದೇಶಗಳಾದ ನೈಜೀರಿಯಾ ಮತ್ತು ಕೀನ್ಯಾದಲ್ಲಿ ಬಿಡುಗಡೆಯಾಗಲಿದೆ.

ಇದು ಡ್ಯುಯಲ್ ಸಿಮ್ ಹೊಂದಿದ್ದು 2 ನೆಟ್ ವರ್ಕ್ ಸೇವೆ ಹೊಂದಿದೆ. ಬಹಳಷ್ಟು ಸ್ಟೈಲಿಷ್ ಆಗಿರುವ ಈ ಹೊಸ ಮೊಬೈಲ್ ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತದೆ. ಇದರಲ್ಲಿ 1.3 ಮೆಗಾ ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ ಕ್ಯಾಮೆರಾ ಇದ್ದು ಡಿಜಿಟಲ್ ಝೂಮ್ ಕೂಡ ಲಭ್ಯ. ವಿಡಿಯೋ ರೆಕಾರ್ಡಿಂಗ್ ನೆಟ್ ವರ್ಕ್ ಸೇವೆ MP3 ಮತ್ತು MP4 ಪ್ರತಿನಿಧಿಸುತ್ತದೆ.

ಇದರಲ್ಲಿ GPRS, USB ಪೋರ್ಟ್, ಅಧಿಕ ಸಾಮರ್ಥ್ಯದ ಬ್ಯಾಟರಿ, ಬ್ಲೂಟೂಥ್, ವೈ-ಫೈ, 600 ನಿಮಿಷಗಳ ಟಾಕ್ ಟೈಮ್ ಮತ್ತು 40 ದಿಗಳ ಸ್ಟ್ಯಾಂಡ್ ಬೈ ಇದೆ.

16 GB ಮೆಮೊರಿ ಹೊಂದಿರುವ ಇದು SMS & MMS ಸೌಲಭ್ಯ, MP3 ಪ್ಲೇಯರ್, 3.5 mm ಆಡಿಯೋ ಜ್ಯಾಕ್ ಹೊಂದಿದೆ. ಇದರ ಬೆಲೆ ಅತೀ ಕಡಿಮೆ ಎನ್ನಬಹುದಾದ ರು. 1999. ಈಗ ಹೇಳಿ, ನೀವು ಸಮೀಪದ ಮೊಬೈಲ್ ಅಂಗಡಿಗೆ ಓಡದೇ ಇರುವಿರಾ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot