Subscribe to Gizbot

ಫ್ಲೈ ಮೊಬೈಲ್ ಯಶಸ್ಸು ಇನ್ನು ಆಕಾಶದೆತ್ತರಕ್ಕೆ!

Posted By: Staff

ಫ್ಲೈ ಮೊಬೈಲ್ ಯಶಸ್ಸು ಇನ್ನು ಆಕಾಶದೆತ್ತರಕ್ಕೆ!
ಮೊಬೈಲ್ ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ವಿಧದ, ನಾನಾ ವಿನ್ಯಾಸದ ಮೊಬೈಲುಗಳು ಹೇರಳವಾಗಿವೆ. ಇದೀಗ ಈ ಸಾಲಿಗೆ ಹೊಸದಾಗಿ ಸೇರಲಿದೆ, ಫ್ಲೈ ಕಂಪೆನಿಯ ಅತಿ ಕಡಿಮೆ ಬೆಲೆಯ ಆಡ್ರಾಯ್ಡ್ ಫೊನ್ ಫ್ಲೈ.

ಯುರೋಪಿಯನ್ ಪ್ರಸಿದ್ಧ ಕಂಪೆನಿ ಫ್ಲೈ, ಇದೀಗ ಭಾರತೀಯ ಮಾರುಕಟ್ಟೆಯತ್ತ ತನ್ನ ಗಮನ ಕೇಂದ್ರೀಕರಿಸಿದೆ. ಈ ಕಂಪೆನಿಯಿಂದ 2 ಹೊಸ ಫೊನುಗಳು ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದ್ದು ಇದು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ARM 8 and 9 ಆಧಾರಿತ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ಕೃಷ್ಟ ಫೋನಾಗಿದೆ.

ಇದು ಟಚ್ ಸ್ಕ್ರೀನ್ ಕೂಡ ಹೊಂದಿದ್ದು MTK ಮತ್ತು ರಾಕ್ ಚಿಪ್ ನಿಂದ ನಿರ್ಮಾಣವಾಗಲಿದೆ. ಈ ಕಂಪೆನಿಯಿಂದ ಈಗ ಆಂಡ್ರಾಯ್ಡ್ 2.2 ಆವೃತ್ತಿ ಆಧಾರಿತ 2 ಹ್ಯಾಂಡ್ ಸೆಟ್ ಗಳು ಬರಲಿವೆ. 2.8 ಇಂಚುಗಳ ಡಿಸ್ ಪ್ಲೇ ಸ್ಕ್ರೀನ್ ಈ ಹೊಸ ಮೊಬೈಲುಗಳಲ್ಲಿವೆ.

ಇನ್ನು ಕನೆಕ್ಟಿವಿಟಿಯ ಕಡೆ 1 GHz ಪ್ರೊಸೆಸರ್, 512 MB DDR3 RAM, GPS ಯುಟಿಲಿಟಿ, ವೈ-ಫೈ, 3G ಕಾಂಪಿಟೆಬಲ, ಬ್ಲೂಟೂಥ್ ಇದರಲ್ಲಿದೆ. ಇಷ್ಟೊಂದು ಆಧುನಿಕವಾದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದಾಗಿದ್ದರೂ ಬೆಲೆ ಕೇವಲ ರು. 4,500 ಆಗಿದೆ.

ಯಾರಿಗಾದರೂ ಈ ಹೊಸ ಮೊಬೈಲ್ ಬೇಕೇಬೇಕೆನಿಸಿದರೆ ಆಶ್ಚರ್ಯವೇನೂ ಇಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot