Subscribe to Gizbot

ಈ ಹೊಸ ಫ್ಲೈ ಮೊಬೈಲ್ ಸಖತ್ತಾಗಿದೆಯಂತೆ

Posted By: Super

ಈ ಹೊಸ ಫ್ಲೈ ಮೊಬೈಲ್ ಸಖತ್ತಾಗಿದೆಯಂತೆ
ಈಗ ದಿನಕ್ಕೊಂದಿಷ್ಟು ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸುವ ಕಾಲ ಬಂದಿದೆ. ಹೊಸ ಹೊಸ ಕಂಪೆನಿಗಳ ಮೊಬೈಲುಗಳ ಜೊತೆಗೆ ಅದೇ ಕಂಪೆನಿಯದರ ಜೊತೆಗೂ ಸ್ಪರ್ಧಿಸಬೇಕಾದ ಅನಿವಾರ್ಯತೆ ಎಲ್ಲಾ ಮೊಬೈಲುಗಳಿಗೆ ಎದುರಾಗಿದೆ. ಈಗ ಈ ಸಾಲಿನಲ್ಲಿ ನಿಲ್ಲಲಿದೆ, ಫ್ಲೈ ಕಂಪೆನಿಯ ಹೊಸ ಫ್ಲೈ MV248.

ಈ ಯುರೋಪಿಯನ್ ಕಂಪೆನಿಯ ಫ್ಲೈ ಮೊಬೈಲ್ ಭಾರತೀಯ ಮಾರುಕಟ್ಟೆಯನ್ನು ಸದ್ಯದಲ್ಲಿಯೇ ಪ್ರವೇಶಿಸಲಿದೆ. ಈ ಹೊಸ ಮೊಬೈಲಿನಲ್ಲಿ ಡ್ಯುಯಲ್ ಸಿಮ್, QWERTY ಕೀಪ್ಯಾಡ್, ಕಪ್ಪು ಬಣ್ಣ ಹಾಗೂ ರಾಯಲ್ ಟಚ್ ಫಿನಿಶಿಂಗ್ ಇದೆ.

ಇದರಲ್ಲಿ ಅತ್ಯಾಧುನಿಕವಾದ ಮ್ಯೂಸಿಕ್ ಪ್ಲೇಯರ್, ಮಲ್ಟಿ ಫೈಲ್ಸ್ ಸಹಕಾರ, ಬೂಮ್ ಸ್ಪೀಕರ್, FM ರೇಡಿಯೋ, ವಿಡಿಯೋ ಪ್ಲೇಯರ್, ಗೇಮ್ಸ್ ಎಲ್ಲವೂ ಇದೆ.
2 ಮೆಗಾ ಪಿಕ್ಸೆಲ್ ಕ್ಯಾಮೆರಾ, 6.1 ಸೆಂ.ಮೀ QVGA 262 K ಬಣ್ಣದ ಡಿಸ್ ಪ್ಲೇ ಇದೆ. ವಿಸ್ತರಿಸಬಹುದಾದ 32 GB ಮೆಮೊರಿ ಇದೆ.

ಆಧುನಿಕವಾದ 2000 mAH Li-ion ಬ್ಯಾಟರಿ, 19 ತಾಸುಗಳ ಟಾಕ್ ಟೈಮ್, 288 ತಾಸುಗಳ ಸ್ಟ್ಯಾಂಡ್ ಬೈ ಬ್ಯಾಟರಿ ಬ್ಯಾಕಪ್, ಬ್ಲೂಟೂಥ್, ವೈ-ಫೈ ಜೊತೆಗೂ ಬಹಳ ಮೃದುವಾದ ಕೀಪ್ಯಾಡ್ ಕೂಡ ಇದರಲ್ಲಿ ಲಭ್ಯ.

ಇಷ್ಟೆಲ್ಲ ಇರುವ ಇದರ ಬೆಲೆ ರು. 4,000. ಇಷ್ಟು ಕಡಿಮೆ ಬೆಲೆಗೆ ಇಷ್ಟು ಒಳ್ಳೆಯ ಮೊಬೈಲ್ ದೊರಕುವುದು ನಿಜವಾದ ಆಶ್ಚರ್ಯವೇ ಸರಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot