ಎಚ್ ಟಿ ಸಿ ಮೊಬೈಲ್ ಇನ್ನು ಬದಲಾಗಲಿದೆಯೇ?

Posted By: Staff

ಎಚ್ ಟಿ ಸಿ ಮೊಬೈಲ್ ಇನ್ನು ಬದಲಾಗಲಿದೆಯೇ?
ಮೊಬೈಲ್ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಎಚ್ ಟಿ ಸಿ ಮೊಬೈಲ್ ಸಾಕಷ್ಟು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಈ ಕಂಪೆನಿ ಹೊಸ OS ಖರೀದಿಯತ್ತ ಗಮನಹರಿಸಿದೆ ಎಂಬ ಹೊಸ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕಂಪೆನಿಯ ಮೊಬೈಲ್ ಗಳಿಗೆ ಇನ್ನು ಮುಂದೆ ಹೊಸ ಕಾರ್ಯ ವಿಧಾನವನ್ನು ಅಳವಡಿಸುವ ಕುರಿತು ಯೋಚಿಸೆದೆ. ಈ ಹೊಸ OS ಹೆಸರು ಎಚ್ ಪಿ ಯ ಪಾಮ್ ವೆಬ್ OS ಎಂದು ಹೇಳಲಾಗುತ್ತಿದೆ.

ಇದೀಗ ಎಚ್ ಟಿ ಸಿ ಕಂಪೆನಿ ಹೊಸ ಹೊಸ ಆಪರೇಟಿಂಗ್ ಸಿಸ್ಟಮ್ ಗಳ ಬಗ್ಗೆ ವಿಚಾರಿಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಯಾವುದನ್ನು ಈ ಕಂಪೆನಿ ಒಪ್ಪಿಕೊಳ್ಳುತ್ತದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಅಲಿಯನ್ OS ನ ಬೈದು OS ಬಗ್ಗೆ ಕೂಡ ಈ ಕಂಪೆನಿ ಆಸಕ್ತಿ ವಹಿಸುತ್ತಿರುವುದು ಕಂಡುಬರುತ್ತಿದೆ.

ಈ ಸುದ್ದಿಯನ್ನು ಕಂಪೆನಿ ಅಲ್ಲಗಳೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಹೊಸ OS ಕೊಳ್ಳಲಿರುವ ಕಂಪೆನಿಯ ವ್ಯವಹಾರ ಅದು ಹೇಗೋ ಸುದ್ದಿಯಾಗಿ ನಮ್ಮವರೆಗೂ ಬಂದಿದೆ.

ತೀರಾ ಇತ್ತೀಚಿನ ಸುದ್ದಿಯನ್ನು ನಂಬುವುದಾದರೆ ಎಚ್ ಟಿ ಸಿ ಕಂಪೆನಿ ಎಚ್ ಪಿ ಪಾಮ್ ವೆಬ್ OS ಕೊಳ್ಳಲಿದೆ. ಈ ಹೊಸ OS ಮೂಲಕ ಸ್ಮಾರ್ಟ್ ಫೊನ್ ಇನ್ನೂ ಸ್ಮಾರ್ಟ್ ಆಗುವುದರೊಂದಿಗೆ ಇದರ ಕಾರ್ಯ ದಕ್ಷತೆ ಇನ್ನೂ ಹೆಚ್ಚಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot