ಈ ಹೊಸ ಎಲ್ ಜಿ ಮೊಬೈಲ್ ಸೂಪರ್ ನೋಡಿ!

Posted By: Staff

ಈ ಹೊಸ ಎಲ್ ಜಿ ಮೊಬೈಲ್ ಸೂಪರ್ ನೋಡಿ!
ಮೊಬೈಲ್ ಮಾರುಕಟ್ಟೆಯೀಗ ಸಾಕಷ್ಟು ವಿಸ್ತಾರವಾಗಿದೆ. ಇದೀಗ ಹೊಸ ಮೊಬೈಲೊಂದು ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ ಅದು ಹೊಸ ಎಲ್ ಜಿ LS855 ಮರ್ಕ್ಯೂ. ಇದು ಅತ್ಯಾಧುನಿಕವಾದ ಸ್ಮಾರ್ಟ್ ಫೊನ್.

ಇದರಲ್ಲಿ ಸಾಕಷ್ಟು ವಿಶೇಷತೆಗಳಿವೆ. ಇದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೊನ್. ಇದರಲ್ಲಿ CDMA ನೆಟ್ ವರ್ಕ, 800/1900 MHz ಫ್ರೀಕ್ವೆನ್ಸೀಸ್, 1x EVDO ಡಾಟಾ, ಮಲ್ಟಿ ಟಚ್ ಸ್ಕ್ರೀನ್, RAM, 512 MB ಮತ್ತು 2GB ROM ಇದೆ. ಟೆಕ್ಸಾಸ್ ಸಾಧನ ಹೊಂದಿರುವ ಇದು ಸಿಂಗಲ್ ಕೋರ್ OMAP 3630, 1000 MHz ಪ್ರೊಸೆಸರ್ ಹೊಂದಿದೆ.

ಇದರಲ್ಲಿ 122 x 64 x 9 mm, 112 ಗ್ರಾಮ್ ಡೈಮೆನ್ಷನ್ ಇದೆ. 4 ಇಂಚು ಉದ್ದದ TFT ಮಲ್ಟಿ ಸೆನ್ಸರ್ ಟಚ್ ಸ್ಕ್ರೀನ್ ಇದೆ. ಸ್ಕ್ರೀನ್ ಸೈಜ್ 480 x 800 ಪಿಕ್ಸೆಲ್ಸ್ , 16 M ಬಣ್ಣಗಳು, 5.5 ತಾಸುಗಳ ಟಾಕ್ ಟೈಮ್, 8 ತಾಸುಗಳ ಬ್ಯಾಕಪ್, 1500 mAh Li ion ಬ್ಯಾಟರಿ, ಗೂಗಲ್ಸ್ v2.3.4 ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಇದೆ.

5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ, ಲೆಡ್ ಫ್ಲಾಶ್, ಆಟೋ ಫೋಕಸ್ ಫಿಚರ್ಸ್, ಮೈಕ್ರೋ SD, ಮೈಕ್ರೋ DHC ಮತ್ತು ಟ್ರಾನ್ಸ್ ಫ್ಲಾಶ್ ಕಾರ್ಡ್, ವಿಸ್ತರಿಸಬಲ್ಲ 32 GB ಮೆಮೊರಿ, USB ಪೋರ್ಟ್, ಬ್ಲೂಟೂಥ್, ವೈ-ಫೈ, ಇದರಲ್ಲಿವೆ. ಇಷ್ಟೇ ಅಲ್ಲದೇ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಮೈಸ್ಪೇಸ್ ಮತ್ತು ಪಿಕಾಸಾ, ಯೂಟ್ಯೂಬ್ ಅಪ್ಲಿಕೇಶನ್ ಗಳೂ ಇದರಲ್ಲಿ ಲಭ್ಯ.

ಈ ಹೊಸ ಮೊಬೈಲ್ ಬೆಲೆ ಸುಮಾರು ರು. 9,000, ಅಥವಾ ಅದಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot