ಸೋನಿ ಎರಿಕ್ಸನ್ ಮೊಬೈಲ್ ಯುದ್ಧ ಜೋರಾಗಿದೆ!

ಲೈವ್ ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್, 2592x1944 ಪಿಕ್ಸೆಲ್ ರೆಸೊಲ್ಯೂಷನ್ ಇದ್ದರೆ ಮಿಕ್ಸ್ ನಲ್ಲಿ ಇದು ಕೇವಲ 3.2 ಮೆಗಾ ಪಿಕ್ಸೆಲ್, 2048 x 1536 ಪಿಕ್ಸೆಲ್ ರೆಸೊಲ್ಯೂಷನ್ ಮಾತ್ರ ಇದೆ. ಲೈವ್ ನಲ್ಲಿ ವಿಡಿಯೋ ಕಾನ್ಫರೆನ್ಸ್, VGA ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್ ಎಲ್ಲವೂ ಲಭ್ಯ.
ಆದರೆ ಮಿಕ್ಸ್ ನಲ್ಲಿ ಇವೆಲ್ಲ ಇಲ್ಲ. ಲೈವ್ ನಲ್ಲಿ ಆಂಡ್ರಾಯ್ಡ್ 2.3.4 ಆವೃತ್ತಿಯ ಜಿಂಜರ್ ಬ್ರೆಡ್ OS ಇದೆ. ಆದರೆ ಮಿಕ್ಸ್ ಆಂಡ್ರಾಯ್ಡ್ ಹೊಂದಿಲ್ಲ.
ಲೈವ್ ನಲ್ಲಿ 1 GHz ಪ್ರೊಸೆಸರ್ ಇದೆ ಹಾಗೂ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಇದು ಲಭ್ಯ. ಮಿಕ್ಸ್ ಕಪ್ಪು, ಗುಲಾಬಿ ಹಾಗೂ ಆಕಾಶ ನೀಲಿ ಬಣ್ಣಗಳಲ್ಲಿ
ದೊರೆಯಲಿದೆ.
GPS ಸಹಕಾರದೊಂದಿಗೆ ಲೈವ್ 1200 mAh Li ion ಬ್ಯಾಟರಿ, 14 ತಾಸುಗಳ ಟಾಕ್ ಟೈಮ್, 17 ತಾಸುಗಳ ಮ್ಯೂಸಿಕ್ ಪ್ಲೇ ಬ್ಯಾಕ್, 600/800 ಸ್ಟ್ಯಾಂಡ್ ಬೈ, 2G & 3G ಸಹಕಾರ ಹೊಂದಿದೆ. ಮಿಕ್ಸ್ 1000 mAh Li ಬ್ಯಾಟರಿ, 10 ತಾಸುಗಳ ಟಾಕ್ ಟೈಮ್, 465 ತಾಸುಗಳ ಸ್ಟ್ಯಾಂಡ್ ಬೈ ಟೈಮ್ ಹೊಂದಿದೆ.
ಇನ್ನು ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಲೈವ್ ಬೆಲೆ ರು. 22,000 ಹಾಗೂ ಮಿಕ್ಸ್ ಬೆಲೆ ರು. 10,000. ಈ ಎರಡೂ ಮೊಬೈಲುಗಳೂ ಚೆನ್ನಾಗಿದೆಯಾದರೂ ಆಯ್ಕೆ ಕಷ್ಟವೇ ಸರಿ. ಏಕೆಂದರೆ ವಿಶೇಷತೆಗಳಿಗೆ ಸರಿಯಾಗಿ ಬೆಲೆ ಇದೆ. ಹಾಗಾಗಿ ಆಯ್ಕೆ ನಿಮಗೇ ಸೇರಿದ್ದು!


Click it and Unblock the Notifications








