ಮುಸ್ಲಿಮ್ ಜನಾಂಗಕ್ಕೆ ಸ್ಪೆಷಲ್ ಐಟೆಲ್ ಮೊಬೈಲ್

By Super
|
ಮುಸ್ಲಿಮ್ ಜನಾಂಗಕ್ಕೆ ಸ್ಪೆಷಲ್ ಐಟೆಲ್ ಮೊಬೈಲ್
ಐಟೆಲ್ ಮೊಬೈಲ್ ಕಂಪೆನಿ ಸಂಪೂರ್ಣ ಸ್ವದೇಶಿ. 2009 ರಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಕಂಪೆನಿ ಈಗಾಗಲೇ ಸಾಕಷ್ಟು ಮೊಬೈಲುಗಳನ್ನು ಬಿಡುಗಡೆ ಮಾಡಿದ್ದರೂ ಇನ್ನೂ ಸಾಕಷ್ಟು ಪ್ರಸಿದ್ಧವಾಗಿಲ್ಲ. ಇದೀಗ ಹೊಸ ಮೊಬೈಲ್ ಬಿಡುಗಡೆಗೆ ಮುಂದಾಗಿರುವ ಐಟೆಲ್ ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡತೊಡಗಿದೆ.

ಈ ಹೊಸ ಮೊಬೈಲಿನಲ್ಲಿ ಮುಸ್ಲಿಮ್ ಜನಾಂಗಕ್ಕೆ ಅನುಕೂಲಕರವಾಗುವಂತ ಸಾಪ್ಟ್ ವೇರ್ ಅಳವಡಿಸಲಾಗಿದೆ. ಅಝನ್ ಅಲಾರ್ಮ್, ಮುಸ್ಲಿಮ್ಸ್ ಕ್ಯಾಲೆಂಡರ್, ಝಕತ್ ಕ್ಯಾಲ್ಕ್ಯುಲೇಟರ್ ಇದರಲ್ಲಿದೆ. ಈ ಜನಾಂಗದ ವ್ಯಾಪಾರ-ಬಹಿವಾಟಿಗೆ ಅನುಕೂಲಕರವಾಗಿರುವಂತೆ ಈ ಹೊಸ ಮೊಬೈಲ್ ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಈ ಮೊಬೈಲ್ ಬಿಡುಗಡೆಯ ಮುಖ್ಯ ಉದ್ದೇಶ ಇವುಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇ. 2.5 ರಷ್ಟನ್ನು ಸಾಮಾಜಿಕ ಜವಾಬ್ಧಾರಿ ಘೋಷಣೆಯಡಿ ಬಡ ಮುಸ್ಲಿಮ್ ಮಕ್ಕಳಿಗೆ ಹಂಚುವುದು.

ಡ್ಯುಯಲ್ ಸಿಮ್ ಹೊಂದಿರುವ ಈ ಹೊಸ ಮೊಬೈಲ್ ಉಳಿದೆಲ್ಲ ಮೊಬೈಲಿನಲ್ಲಿರುವ ಸಾಮಾನ್ಯ ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ MP3 ಮತ್ತು MP4, ಬ್ಯೂಟೂಥ್, 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, 11 ಬಾಷೆಗಳ ಸಹಕಾರ ಇದರಲ್ಲಿದೆ. ಈ ಮೊಬೈಲ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ರು. 2,999.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X