ಹೊಸ ಸ್ಯಾಮ್ ಸಂಗ್ ಗುರು ಚೆನ್ನಾಗಿದೆ ಗುರೂ!

Posted By: Staff

ಹೊಸ ಸ್ಯಾಮ್ ಸಂಗ್ ಗುರು ಚೆನ್ನಾಗಿದೆ ಗುರೂ!
ಸ್ಯಾಮ್ ಸಂಗ್ ಕಂಪೆನಿ ಸಾಕಷ್ಟು ಪರಿಚಿತ. ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಪ್ರಬಲ ಪ್ರತಿಸ್ಪರ್ಧಿಯೂ ಹೌದು. ಈಗಾಗಲೇ ಸಾಕಷ್ಟು ಮೊಬೈಲ್ ಹಾಗೂ ಗ್ಯಾಜೆಟ್ಸ್ ಗಳನ್ನು ಮಾರುಕಟ್ಟೆಗೆ ತಂದಿರುವ ಅದು ಇದೀಗ ಹೊಸ ಸ್ಯಾಮ್ ಸಂಗ್ ಗುರು 539 ಬಿಡುಗಡೆಗೆ ಸಜ್ಜಾಗಿದೆ.

ಈ ಹೊಸ ಸ್ಯಾಮ್ ಸಂಗ್ ಗುರು CDMA ಫೊನ್. ಇದು ಕಪ್ಪು ಬಣ್ಣ ಹಾಗೂ ಡಬಲ್ ಮೆಮೊರಿ ಹೊಂದಿದೆ. ಇದರಲ್ಲಿ 800MHz ಪ್ರೊಸೆಸರ್ ಇದೆ. 1.77 ಇಂಚುಗಳ ಲೆಡ್ ಸ್ಕ್ರೀನ್, 65K ಕಲರ್ಸ್, ಆಕರ್ಷಕ ವಿನ್ಯಾಸ ಹಾಗೂ ಟಾರ್ಚ್ ಹೊಂದಿರುವ ಇದು ಹೇರಳವಾಸ ಮನರಂಜನೆ ಸೌಲಭ್ಯ ಹೊಂದಿದೆ.

ಈಗಿನ ಆಧುನಿಕ ಮೊಬೈಲುಗಳಲ್ಲಿರುವ ಎಲ್ಲಾ ಸಾಮಾನ್ಯ ಫೀಚರ್ಸ್ ಜೊತೆಗೆ ಉತ್ತಮ ಸಾಮರ್ಥ್ಯದ ಆಡಿಯೋ ಪ್ಲೇಯರ್ ಹಾಗೂ ವಿಡಿಯೋ ಪ್ಲೇಯರ್ ಇದೆ. ಗೇಮ್ ಸೊಡಕು ಇರುವುದು ಗ್ರಾಹಕರಿಗೆ ಹಬ್ಬದೂಟದ ಸಂತೋಷವನ್ನು ನೀಡಲಿದೆ.

ವಿಶೇಷತೆಗಳಲ್ಲಿ ಅತೀ ವಿಶೇಷ ಎನ್ನಬಹುದಾದ ಡಬಲ್ ಸ್ಮರಣೆ ಸಾಮರ್ಥ್ಯ ಸೌಲಭ್ಯದಿಂದ ಇದರಲ್ಲಿ ಬಹಳಷ್ಟು ಡಾಟಾ ಫೈಲ್ಸ್ ಗಳನ್ನು ಶೇಖರಿಸಿ ಇಡಬಹುದಾಗಿದೆ. ಎರಡು ಕಡೆ 4 GB ಮೆಮೊರಿ ಕಾರ್ಡ್ ಗಳನ್ನು ಬಳಸಬಹುದಾಗಿದೆ. ಆಂತರಿಕ ಮೆಮೊರಿಯೂ ಕಡಿಮೆಯೇನಿಲ್ಲ.

ಇದರಲ್ಲಿರುವ ಬ್ಯಾಟರಿ ಸಾಮರ್ಥ್ಯ ಇನ್ನೊಂದು ವಿಶೇಷ ಎನ್ನಬಹುದು. 1000 mAh Li-ion ಬ್ಯಾಟರಿಯ ಜೊತೆಗೆ 6 ತಾಸುಗಳ ಟಾಕ್ ಟೈಮ್ ಹಾಗೂ 30 ದಿನಗಳ ಸ್ಟ್ಯಾಂಡ್ ಬೈ ಇದೆ. ಜೊತೆಗೆ ಹೆಡ್ ಫೊನ್ ಇರುವುದು ಗ್ರಾಹಕರಿಗೆ ಹೆಚ್ಚಿನ ಅನುಕೂಲ. ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿರುವ ಇದಕ್ಕೆ ಬೆಲೆ ರು. 2,300 ನಿಗದಿಯಾಗಿದೆ. ಇರುವ ವಿಶೇಷತೆಗೆ ಬೆಲೆ ಸಾಕಷ್ಟು ಕಡಿಮೆ ಎಂದೇ ಹೇಳಬೇಕು. ನಿಜವಾಗಿಯೂ ಇದು ಆಕರ್ಷಕ ಎಂದು ಹೇಳಲೇಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot