Subscribe to Gizbot

ವೊಡಾಫೋನ್ ಹೊಸ ಸ್ಮಾರ್ಟ್ ಫೊನ್ ಇಲ್ಲಿದೆ

Posted By: Staff

ವೊಡಾಫೋನ್ ಹೊಸ ಸ್ಮಾರ್ಟ್ ಫೊನ್ ಇಲ್ಲಿದೆ
ಮಾತಿನ ಮಧ್ಯೆ ಮೊಬೈಲ್ ವಿಷಯ ಬರಲೇಬೇಕು. ಮೊಬೈಲ್ ವಿಷಯ ಬಂದಾಗ ವೊಡಾಫೊನ್ ನೆನಪಾಗಲೇಬೇಕು. ಅದು ವೊಡಾಫೊನ್ ಕಂಪೆನಿಯ ಮಹತ್ವ. ಹಚ್ ಎಂಬ ಕಂಪೆನಿ ವೊಡಾಫೊನ್ ಆಗಿ ಬದಲಾದದ್ದು ಈಗ ಇತಿಹಾಸ. ಇಂಥ ಕಂಪೆನಿ ಇದೀಗ ಹೊಸ ಸಾಹಸಕ್ಕೆ ಮುಂದಾಗಿದೆ. ಎರಡನೆಯ ಆಂಡ್ರಾಯ್ಡ್ ಮೊಬೈಲ್ ಫೋನನ್ನು ಮುಂದಿನ ವಾರ ಮಾರುಕಟ್ಟೆಗೆ ಬಿಡುಗಡೆಮಾಡಲು ಅದು ಸಜ್ಜಾಗಿದೆ.

ಈ ಹೊಸ ಮೊಬೈಲ್ ವಿಶೇಷತೆಗಳೇನು? ಮಾಹಿತಿ ಇಲ್ಲಿದೆ ನೋಡಿ... ಇದರ ಹೆಸರು ವೊಡಾಫೊನ್ 858 ಸ್ಮಾರ್ಟ್ ಎಂದು ಹೇಳಲಾಗುತ್ತಿದೆ. ವೊಡಾಫೋನ್ ಕಂಪೆನಿಯ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ಫೊನ್ ಕೇವಲ ಹರ್ಯಾಣದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೂ ಇದು ಗ್ರಾಹಕರ ಮೆಚ್ಚುಗೆ ಗಳಿಸಿರುವುದು ಗಮನಾರ್ಹವಾದ ಅಂಶ.

ಈ ಮೊಬೈಲ್ 2.8 ಇಂಚುಗಳ TFT ಕೆಪಾಕ್ಟಿವ್ ಟಚ್ ಸ್ಕ್ರೀನ್ ಹಾಗೂ 256 ಕಲರ್ ಸಹಕಾರ ಹೊಂದಿದೆ. 240 X 320 ಪಿಕ್ಸೆಲ್ ರೆಸೊಲ್ಯೂಷನ್, 143 ppi ಡೆನ್ಸಿಟಿ, ಪ್ರಾಕ್ಸಿಮಿಟಿ ಸೆನ್ಸರ್ ಇದಕ್ಕಿದೆ.

2 ಮೆಗಾ ಪಿಕ್ಸೆಲ್ ಕ್ಯಾಮೆರಾ, 1600X 1200 ರೆಸೊಲ್ಯೂಷನ್, ಗಿಯೋ ಟ್ಯಾಗಿಂಗ್ ಇದಕ್ಕಿದೆ. ಆಂಡ್ರಾಯ್ಡ್ 2.2 ಫ್ರೋಯೋ ಆವೃತ್ತಿ ಹೊಂದಿರುವ ಇದು ಉತ್ತಮ ಕಾರ್ಯ ಸಾಮರ್ಥ್ಯ ಹೊಂದಿದೆ. 528 MHz ARM 11 ಪ್ರೊಸೆಸರ್, ಆಡ್ರಿನೋ 200 GPU ಮತ್ತು ಕ್ಯುಲ್ ಕಾಮ್ MSM 7225 ಚಿಪ್ ಸೆಟ್ ಇದರಲ್ಲಿದೆ.

ಮಲ್ಟಿಮೀಡಿಯಾ ಮತ್ತು ಕನೆಕ್ಟಿವಿಟಿಯಲ್ಲಿ ಇದು ಸಾಕಷ್ಟು ಮುಂದಿದೆ. ವೈ-ಫೈ, 802.11 b/g/n, ಬ್ಲೂಟೂಥ್ ಆವೃತ್ತಿ 2.1, GPRS, EDGE, USB ಪೋರ್ಟ್ 2.0 ಆವೃತ್ತಿ ಇದಕ್ಕಿದೆ. ಜೊತೆಗೆ ವಿಸ್ತರಿಸಬಹುದಾದ 32 GB ಮೆಮೊರಿ ಕೂಡ ಇದರಲ್ಲಿ ಲಭ್ಯ. ಈ ಹೊಸ ವೊಡಾಫೊನ್ 858 ಸ್ಮಾರ್ಟ್ ಬೆಲೆ ಸುಮಾರು ರು. 6,695 ಎಂದು ಅಂದಾಜಿಸಲಾಗಿದೆ. ಮುಂದಿನವಾರ ಮಾರುಕಟ್ಟೆಯಲ್ಲಿ ಸಿಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot