Subscribe to Gizbot

ಕಾರ್ಬನ್ ಹೊಸ ಮೊಬೈಲ್ ಬರಲಿದೆ ಶೀಘ್ರದಲ್ಲಿ

Posted By: Super
ಕಾರ್ಬನ್ ಹೊಸ ಮೊಬೈಲ್ ಬರಲಿದೆ ಶೀಘ್ರದಲ್ಲಿ
ಕಾರ್ಬನ್ ಮೊಬೈಲ್ ಕಂಪೆನಿ ಈಗ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹೊಸ, ಉತ್ತಮ ಗುಣಮಟ್ಟದ ಕಾರ್ಬನ್ ಮೊಬೈಲುಗಳು ಮಾರುಕಟ್ಟೆಯಲ್ಲಿವೆ. ಇದೀಗ ಹೊಸ ಕಾರ್ಬನ್ K409 ಬಿಡುಗಡೆಗೆ ಸಜ್ಜಾಗಿದೆ.

ಈ ಹೊಸ ಮೊಬೈಲ್ ಬಾರ್ ಆಕಾರ ಹೊಂದಿದ್ದು 115 X 46 X 16 mm ಡೈಮೆನ್ಷನ್ ಹೊಂದಿದೆ. ಇದರಲ್ಲಿ 1800 mAh Li ions ಬ್ಯಾಟರಿಯಿದ್ದು ಇದು ನಿರಂತರ 7.5 ತಾಸುಗಳ ಟಾಕ್ ಟೈಮ್ ಸಾಮರ್ಥ್ಯ ಹೊಂದಿದೆ. ಇದು GSM 900 / 1800 MHz GSM 900 / 1800 MHz ಫ್ರೀಕ್ವೆನ್ಸೀಸ್ ಹೊಂದಿದ್ದು ಉತ್ತಮ ಕಾರ್ಯದಕ್ಷತೆ ನೀಡಲಿದೆ.

ಕನೆಕ್ಟಿವಿಟಿ ಸೌಲಭ್ಯ ಚೆನ್ನಾಗಿದ್ದು ಇದರಲ್ಲಿ ವೈ-ಫೈ, ಬ್ಲೂಟೂಥ್, ಪಿಸಿ ಡಾಟಾ ಟ್ರಾನ್ಸ್ ಫರ್, USB ಪೊರ್ಟ್, GPRS ಯುಟಿಲಿಟಿ ಸೌಲಭ್ಯ ಇದಕ್ಕಿದೆ. ಇದರಲ್ಲಿ 2.4 ಇಂಚುಗಳ ಡಿಸ್ ಪ್ಲೇ, TFT ಸ್ಕ್ರೀನ್, 262 K ಬಣ್ಣಗಳು ಹಾಗೂ 176 X 220 ಪಿಕ್ಸೆಲ್ ರೆಸೊಲ್ಯೂಷನ್ ಇದೆ. ಆಂತರಿಕ ಹಾಗೂ ಹೊರ 8 GB ಮೆಮೊರಿ ಸಾಮರ್ಥ್ಯವಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಇದರಲ್ಲಿ ಡ್ಯುಯಲ್ ಸಿಮ್ GSM ಇದೆ. ಈ ಹೊಸ ಮೊಬೈಲ್ ದರ ಇನ್ನೂ ನಿಗದಿಯಾಗಿಲ್ಲ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ, ನೋಡಿ ಖರೀದಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot