ಈ ಹೊಸ ಸ್ಯಾಮ್ ಸಂಗ್ ಮೊಬೈಲ್ ದುಬಾರಿಯಲ್ಲವಂತೆ!

By Super
|
ಈ ಹೊಸ ಸ್ಯಾಮ್ ಸಂಗ್ ಮೊಬೈಲ್ ದುಬಾರಿಯಲ್ಲವಂತೆ!
ಸ್ಯಾಮ್ ಸಂಗ್ ಮೊಬೈಲ್ ಜಗತ್ತಿನೆಲ್ಲೆಡೆ ತುಂಬಾ ಪ್ರಸಿದ್ಧ. ಈಗಾಗಲೇ ಈ ಕಂಪೆನಿಯ ಗ್ಯಾಜೆಟ್ಸ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಸ್ಮಾರ್ಟ್ ಫೋನ್ ಗಳಿಗಂತೂ ಸ್ಯಾಮ್ ಸಂಗ್ ಅತ್ಯಂತ ಹೆಸರುವಾಸಿ. ಇದೀಗ ಹೊಸ ಸ್ಯಾಮ್ ಸಂಗ್ ಇಲ್ಯೂಸಿಯನ್ ಸ್ಮಾರ್ಟ್ ಫೊನ್ ಮಾರುಕಟ್ಟೆಗೆ ಬರಲಿದೆ.

ಈ ಹೊಸ ಮೊಬೈಲ್ 4G ಹಾಗೂ ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಹೊಂದಿವೆ. ಇದರಲ್ಲಿ 1 GHz ಪ್ರೊಸೆಸರ್, 10 Mbps ಸರಾಸರಿ ಅಪ್ ಲೋಡಿಂಗ್ ಹಾಗೂ ಡೌನ್ ಲೋಡಿಂಗ್ ಸ್ಪೀಡ್ ಹೊಂದಿವೆ. ಈ ಹೊಸ ಮೊಬೈಲಿನಲ್ಲಿ ಉತ್ತಮ ಗುಣಮಟ್ಟದ ದೃಶ್ಯ ಸಾಮರ್ಥ್ಯವಿದೆ. ಪ್ರಾಕ್ಸಿಮಿಟಿ ಸೆನ್ಸರ್ ಕೂಡ ಇದರಲ್ಲಿ ಲಭ್ಯ.

ಬ್ಲೂಟೂಥ್, ವೈ-ಫೈ, GPS ಹಾಗೂ ಎಲ್ಲಾ ಸಾಮಾನ್ಯ ಸೌಲಭ್ಯಗಳೂ ಇದರಲ್ಲಿವೆ. ಅಡಾಬ್ ಫ್ಲಾಶ್ ಅಪ್ಲಿಕೇಶನ್ ಕೂಡ ಲಭ್ಯವಿರುವುದು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಈ ಮೊಬೈಲ್ ಸಾಕಷ್ಟು ದುಬಾರಿಯಾಗಿರಬೇಕೆಂದು ನಿರೀಕ್ಷೆ ಮಾಡಬೇಕಿಲ್ಲ. ಸದ್ಯಕ್ಕೆ ಇದರ ಬೆಲೆ ನಿಗದಿಯಾಗಿಲ್ಲ. ಆದರೂ ಇದು ಸಾಕಷ್ಟು ಕಡಿಮೆ ಬೆಲೆಯಲ್ಲೇ ಲಭ್ಯವಾಗಲಿದೆಯೆಂದು ತಿಳಿದು ಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X