ಸ್ಪೈಸ್ ಹೊಸ ಮೊಬೈಲ್ ಬೆಲೆ ತುಂಬಾ ಕಡಿಮೆ

Posted By: Staff

ಸ್ಪೈಸ್ ಹೊಸ ಮೊಬೈಲ್ ಬೆಲೆ ತುಂಬಾ ಕಡಿಮೆ
ಮೊಬೈಲ್ ಮಾರುಕಟ್ಟೆಯೀಗ ಸಾಕಷ್ಟು ಬೆಳೆದಿದೆ. ಹೊಸ ಹೊಸ ಮೊಬೈಲುಗಳೊಂದಿಗೆ ಸ್ಪರ್ಧೆ ಮಾಡಲೇಬೇಕಾದ ಅನಿವಾರ್ಯತೆ ಒದಗಿದೆ. ಅಂತರಾಷ್ಟ್ರೀಯ ಉತ್ಪನ್ನವೇ ಇರಲಿ ಅಥವಾ ಸ್ಪೈಸ್ ನಂತಹ ಸ್ವದೇಶಿ ಉತ್ಪನ್ನವೇ ಇರಲಿ, ಸ್ಪರ್ಧೆ ತಪ್ಪಿದ್ದಲ್ಲ.

ಇದನ್ನು ಚೆನ್ನಾಗಿ ಅರಿತಿರುವ ಸ್ಪೈಸ್ ಕಂಪೆನಿ ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಸ್ಪೈಸ್ M5370.

ಇದರಲ್ಲಿರುವ ವಿಶೇಷತೆಗಳು:
* 2.4 ಇಂಚ್ QVGA TFT ಕಲರ್ ಡಿಸ್ ಪ್ಲೇ/ 240 x 320 ಪಿಕ್ಸೆಲ್ ಚರೆಸೊಲ್ಯೂಷನ್
* VGA ಕ್ಯಾಮೆರಾ, 640 x 480 ಪಿಕ್ಸೆಲ್ ರೆಸೊಲ್ಯೂಷನ್, ಡಿಜಿಟಲ್ ಝೂಮ್, ನೈಟ್ ವಿಸನ್, ಮಲ್ಟಿ ಶಾಟ್
* FM ರೇಡಿಯೋ, ಈಮೇಲ್, ಪುಶ್ ಮೇಲ್, SMS/MMS ಸೌಲಭ್ಯ
* T-Flash, ವಿಸ್ತರಿಸಬಹುದಾದ 8 GB ಮೆಮೊರಿ
* Mp3, WMA, AMR ಫಾರ್ಮೆಟ್ಸ್
* Mp4 ವಿಡಿಯೋ ಫಾರ್ಮೆಟ್, 3GP
* v2.0 A2DP ಸ್ಟಿರಿಯೋ ಬ್ಲೂಟೂಥ್, USB ಪೋರ್ಟ್, WAP ಬ್ರೌಸರ್
* 16 ತಾಸುಗಳ ಟಾಕ್ ಟೈಮ್, 2200 mAh Li ion ಬ್ಯಾಟರಿ, 600 ತಾಸುಗಳ ಸ್ಟ್ಯಾಂಡ್ ಬೈ

ಹೀಗೆ ಸಾಕಷ್ಟು ಅತ್ಯಾಧುನಿಕ ಸೌಲಭ್ಯವುಳ್ಳ ಈ ಹೊಸ ಮೊಬೈಲ್ ಬೆಲೆ ಸುಮಾರು ರು. 1,800 ಎಂದು ಅಂದಾಜಿಸಲಾಗಿದೆ. ಇದು ಮಧ್ಯಮ ಹಾಗೂ ಕೆಳವರ್ಗದ ಜನರನ್ನು ಗಮನದಲ್ಲಿಟ್ಟು ತಯಾರಿಸಲಾಗಿರುವ ಫೊನ್ ಎಂಬುದು ನಿರ್ವಿವಾದ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot