ವ್ಯೂಸೋನಿಕ್ ಹೊಸ ಮೊಬೈಲ್ ಸ್ಮಾರ್ಟ್ ಫೊನ್

Posted By: Staff

ವ್ಯೂಸೋನಿಕ್ ಹೊಸ ಮೊಬೈಲ್ ಸ್ಮಾರ್ಟ್ ಫೊನ್
ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಆಂಡ್ರಾಯ್ಡ್ ಮೊಬೈಲ್ ಫೊನ್ ಗಳಿವೆ. ಅವು ಬಹಳಷ್ಟು ಜನಮನ್ನಣೆ ಕೂಡ ಗಳಿಸಿವೆ. ಎಲ್ ಜಿ, ನೋಕಿಯಾ, ಸ್ಯಾಮ್ ಸಂಗ್ ಹಾಗೂ ಬಹಳಷ್ಟು ಕಂಪೆನಿಗಳ ಸ್ಮಾರ್ಟ್ ಫೊನ್ ಗಳಿದ್ದರೂ ವ್ಯೂಸೋನಿಕ್ ಸ್ಮಾರ್ಟ್ ಫೊನುಗಳು ಇನ್ನೂ ಮಾರುಕಟ್ಟೆಗೆ ಬಂದಿರಲಿಲ್ಲ. ಆದರೆ ಇನ್ನು ಅದರ ಗ್ರಾಹಕ ಬಳಗಕ್ಕೆ ಚಿಂತೆಯಿಲ್ಲ. ಸದ್ಯದಲ್ಲೇ ಬರಲಿದೆ, ವ್ಯೂಸೋನಿಕ್ ಸ್ಮಾರ್ಟ್ ಫೊನ್ ವ್ಯೂಸೋನಿಕ್ V430.

ಈ ಹೊಸ ಫೊನ್ ಹೈ-ಎಂಡ್ ಡಿವೈಸ್ ಆಗಿದ್ದು ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಇದರಲ್ಲಿ ಕ್ಯುಲ್ಕಾಮ್ ಸಿಂಗಲ್ ಕೋರ್ ಪ್ರೊಸೆಸರ್ ಇದ್ದು ಕ್ಲಾಕ್ ಸ್ಪೀಡ್ 1 GHz ಇದೆ. 512 MB of RAM, ಆಂಡ್ರಾಯ್ಡ್ v2.2 ಫ್ರೋಯೋ OS, 4.3 ಇಂಚುಗಳ ಡಿಸ್ ಪ್ಲೇ, WVGA ಡಿಸ್ ಪ್ಲೇ ಮಲ್ಟಿ ಟಚ್ ಸ್ಕ್ರೀನ್, 800 x 480 ರೆಸೊಲ್ಯೂಷನ್, ವಿಡಿಯೋ-ಆಡಿಯೋ ಪ್ಲೇಯರ್ ಗಳಿವೆ.


ಈ ಹೊಸ ಫೊನಿನಲ್ಲಿ Mp4, Mp3, WMA, WAV ಸಾಮಾನ್ಯ ಫಾರ್ಮೆಟ್ಸ್ ಗಳು, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, VGA ಸೆಕೆಂಡರಿ ಕ್ಯಾಮೆರಾ, ವೈ-ಫೈ, GPS ಮತ್ತು v2.1 A2DP ಸ್ಪೀಡ್ ಬ್ಲೂಟೂಥ್, USB ಪೋರ್ಟ್ ಹೀಗೆ ಸಾಕಷ್ಟು ಅತ್ಯಾಧುನಿಕ ಫಿಚರ್ಸ್ ಹೊಂದಿದೆ. ಈ ಹೊಸ ಫೊನ್ ಬೆಲೆ ಇನ್ನೂ ನಗದಿಯಾಗಿಲ್ಲ. ಇದು ಈ ವರ್ಷದಲ್ಲೇ ಬರುವ ನಿರೀಕ್ಷೆ ಇದೆ.


Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot