ತ್ರಿವಳಿ 3 G ಮೊಬೈಲ್ -ಸ್ಯಾಮ್ ಸಂಗ್ ಕೊಡುಗೆ

Posted By: Staff

ತ್ರಿವಳಿ 3 G ಮೊಬೈಲ್ -ಸ್ಯಾಮ್ ಸಂಗ್ ಕೊಡುಗೆ
ಒಳ್ಳೆಯ ಮೊಬೈಲ್ ಕೈಯಲ್ಲಿ ಇರಬೇಕು ಅದರಲ್ಲೂ 3ಜಿ ಮೊಬೈಲ್ ಆಗಿರಬೇಕು ಎಂದು ಬಯಸುವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಲೇಟಸ್ಟ್ ಮೊಬೈಲ್ ಬೇಕು ಎಂದು ಬಯಸಿ ಕೊಳ್ಳಲು ಬರುವರು ಈ 3ಜಿ ಮೋಹಕ ರಾಣಿಯ ಬೆಡಗು ಬಿನ್ನಾಣಕ್ಕೆ ಕ್ಲೀನ್ ಬೋಲ್ಡ್. ಹೇಗೆ ಮತ್ತು ಏಕೆ ಎಂದು ತಿಳಿಯ ಬೇಕೆ ಇದನ್ನು ಓದಿ.


3ಜಿ ಮೊಬೈಲಲ್ಲಿ ಇರುವ ವೀಡಿಯೋ ಕಾಲ್ ಸೌಲಭ್ಯದಿಂದಾಗಿ ಜನರು ಇದರತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಇದರಲ್ಲಿ ಸ್ಯಾಮ್ ಸಂಗ್ 3ಜಿ ಮೊಬೈಲ್ ತಯಾರಿಕೆಯಲ್ಲಿ ಉತ್ತಮ ಗುಣ ಮಟ್ಟದು ಆಗಿದ್ದು ಸಾಮಾನ್ಯ ಜನರಿಗೆ ಎಟುಕುವ ದರದಲ್ಲಿ ಇರುವುದರಿಂದ ಹೆಚ್ಚು ಗ್ರಾಹಕರನ್ನು ತನ್ನದಾಗಿಸಿ ಕೊಳ್ಳುತ್ತಿದೆ.

ಸ್ಯಾಮ್ ಸಂಗ್ ಇದೀಗ ವಿಶಿಷ್ಟ ಗುಣಮಟ್ಟದ ಸ್ಯಾಮ್ ಸಂಗ್ ಚಾಂಪ್ 3.5ಜಿ, ಸ್ಯಾಮ್ ಸಂಗ್ ಚಾಟ್ 527 ಮತ್ತು ಸ್ಯಾಮ್ ಸಂಗ್ ಪ್ರಿಮೊ ಹೆಸರಿನ ಮೊಬೈಲನ್ನು ಮಾರುಕಟ್ಟೆಗೆ ಬಿಟ್ಟಿದೆ.

ಸ್ಯಾಮ್ ಸಂಗ್ ಚಾಂಪ್ 3.5 G ಮೊಬೈಲ್ 7.1 ಟಚ್ ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ. ಇದರಲ್ಲಿ 2 MP ಕ್ಯಾಮಾರವಿದ್ದು, ಮೆಮೋರಿ ಸ್ಟೋರೇಜ್ ಮೊದಲು 30 MBರಷ್ಟಿದ್ದು ನಂತರ ಅದು 16 GB ಆಗುತ್ತದೆ.

ಸ್ಯಾಮ್ ಸಂಗ್ ಚಾಟ್ 527 ಆಪ್ಟಿಕಲ್ ಟ್ರಾಪ್ ಪ್ಯಾಡ್ ಹಾಗೂ 6.1 cm ಡಿಸ್ ಪ್ಲೇ ಹೊಂದಿದೆ. ಇದರಲ್ಲಿ QWERTY ಕೀ ಪ್ಯಾಡ್ ಬಳಸಲಾಗಿದೆ.

ಸ್ಯಾಮ್ ಸಂಗ್ ಪ್ರಿಮೊ ಮೊಬೈಲ್ 6.1 cm ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದು 5 MP ಕ್ಯಾಮರ ಸೌಲಭ್ಯವಿದೆ. ಆದರೆ ಇದರ ಮತ್ತೊಂದು ವಿಶೇಷವೆಂದರೆ ಬಳಕೆದಾರರು ಇದರಲ್ಲಿರುವ ಸೆಕಂಡರಿ ಕ್ಯಾಮಾರದಿಂದಲೂ ವೀಡಿಯೋ ಕಾಲಿಂಗ್ ಮಾಡ ಬಹುದಾಗಿದೆ.

ಇಷ್ಟೆಲ್ಲಾ ಸೌಲಭ್ಯವಿರುವ ಈ ಮೊಬೈಲ್ ಬೆಲೆಗಳು ಜನಸಾಮಾನ್ಯರಿಗೂ ಎಟುಕುವಂತಿದೆ. ಈ 3 G ಗಳಲ್ಲಿ ಸ್ಯಾಮ್ ಸಂಗ್ ಚಾಂಪ್ 3.5 G ರೂ.5,590, ಸ್ಯಾಮ್ ಸಂಗ್ ಚಾಟ್ 527 ರೂ 5,930, ಸ್ಯಾಮ್ ಸಂಗ್ ಪ್ರಿಮೊ 6,590 ರೂಪಾಯಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot