Subscribe to Gizbot

ಈ ಎರಡು ಮೊಬೈಲುಗಳಲ್ಲಿ ಯಾವುದು ನಿಮಗಿಷ್ಟ!

Posted By: Super
ಈ ಎರಡು ಮೊಬೈಲುಗಳಲ್ಲಿ ಯಾವುದು ನಿಮಗಿಷ್ಟ!
ಆಪಲ್ ಐಫೊನ್ ಹಾಗೂ ಮೋಟೋರೊಲಾ ಎರಡೂ ಕೂಡ ಮೊಬೈಲ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರುಗಳೇ. ಆಪಲ್ ಐಫೋನಿನಲ್ಲಂತೂ ಅತ್ಯಾಧುನಿಕ ಸೌಲಭ್ಯಗಳು ಹೇರಳವಾಗಿರುವುದರ ಜೊತೆಗೆ ಅದನ್ನು ಆಗಾಗ ನವೀಕರಿಸುವ ಸೌಲಭ್ಯ ಕೂಡ ಇರುತ್ತದೆ. ಹಾಗಾಗಿ ಈ ಎರಡೂ ಕಂಪೆನಿಗಳ ಮೊಬೈಲುಗಳಲ್ಲಿ ಸ್ಪರ್ಧೆ ಸಹಜ.

ಇತ್ತೀಚಿಗೆ ಬಿಡುಗಡೆಯಾಗಿರುವ ಮೋಟೋರೊಲಾ ಡ್ರೈಡ್ ಬಯೋನಿಕ್ ಹಾಗೂ ಬರುವ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಐಫೋನ್ 5 ನಡುವೆ ತೀವ್ರ ಸ್ಪರ್ಧೆ ಏರ್ಪಡುವ ಲಕ್ಷಣ ಕಾಣಿಸುತ್ತಿದೆ. ಹಾಗಾದರೆ ಇವುಗಳಲ್ಲಿರುವ ಸಾಮ್ಯತೆ ಹಾಗೂ ಭಿನ್ನತೆಯನ್ನು ನಾವಿಲ್ಲಿ ನೋಡೋಣ.

ಮೋಟೋರೊಲಾ ಡ್ರೈಡ್ ಬಯೋನಿಕ್ ಈಗಾಗಲೇ ಬಿಡುಗಡೆಯಾಗಿರುವ ಮೋಟೋರೊಲಾ ಮೊಬೈಲ್. ಇದರಲ್ಲಿ ಆಂಡ್ರಾಯ್ಡ್ 2.3.4 ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಇದೆ. 4.3 ಇಂಚುಗಳ HD ಸ್ಕ್ರೀನ್, ಗೋರಿಲ್ಲಾ ಗ್ಲಾಸ್, 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಹಾಗೂ ರೇರ್ ಕ್ಯಾಮೆರಾ, ಆಡಾಬ್ ಫ್ಲಾಶ್, 32 GB ಮೆಮೊರಿ ಇದರಲ್ಲಿದೆ.

ಇನ್ನು ಹೊಸ ಆಪಲ್ ಐಫೋನಿನಲ್ಲಿ ಆಧುನಿಕ iOS 5 OS ಇದೆ. ಅತೀ ಹೆಚ್ಚಿನ ಮೆಗಾ ಪಿಕ್ಸೆಲ್ (ಬಹುಶಃ 8 MP)ಕ್ಯಾಮೆರಾ ಇರುವ ನಿರೀಕ್ಷೆಯಿದೆ. ಮೊದಲಿನ ಎಲ್ಲಾ ಮೊಬೈಲುಗಳಿಗಿಂತ ಸಾಕಷ್ಟು ತೆಳುವಾಗಿ ಹಗುರವಾಗಿ ಈ ಮೊಬೈಲ್ ಇರಬಹುದೆಂದು ತಿಳಿಯಲಾಗಿದೆ. 1080p ವಿಡಿಯೋ ರೆಕಾರ್ಡಿಂಗ್ ಹಾಗೂ ಲೆಡ್ ಪ್ಲಾಶ್ ಇದರಲ್ಲಿದೆ.

ಈ ಐಫೋನ್ 5 4G ಕಾಂಪಿಟೆಬಲ್ ಆಗಿರುವ ಸಾಧ್ಯತೆಯಿದೆ. ಈ ಎರಡೂ ಮೊಬೈಲುಗಳು ಸಾಕಷ್ಟು ಸಾಮ್ಯತೆ ಹೊಂದಿವೆ. ನಿಜವಾಗಿಯೂ ಒಂದಕ್ಕೊಂದು ಬಲವಾದ ಸ್ಪರ್ಧಿಗಳೇ. ಆದರೆ ಬೆಲೆ ವಿಷಯ ಇನ್ನೂ ನಿಗೂಢವಾಗಿರುವುದರಿಂದ ಎರಡರಲ್ಲಿ ಗೆಲುವು ಯಾವುದಕ್ಕೆ ದೊರೆಯಬಹುದೆಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಮೋಟೋರೊಲಾ ಮಾತ್ರ ಮಾರುಕಟ್ಟೆಯಲ್ಲಿದೆ.

ಆದರೆ ಈ ಎರಡೂ ಮೊಬೈಲುಗಳು ಭಾರತದ ಮಾರುಕಟ್ಟೆ ಪ್ರವೇಶಿಸುವುದು ಯಾವಾಗ ಎಂಬುದು ಇನ್ನೂ ತಿಳಿಯಬೇಕಾಗಿದೆ. ಸದ್ಯಕ್ಕೆ ಇಷ್ಟೇ ಮಾಹಿತಿಯಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ, ನಿರೀಕ್ಷಿಸಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot