ಈಗ ಹ್ಯುವೈ ಮೊಬೈಲ್ ಜೊತೆ ಟ್ರೇಡಸ್ ಗಿಪ್ಟ್ ವೋಚರ್

Posted By: Staff

ಈಗ ಹ್ಯುವೈ ಮೊಬೈಲ್ ಜೊತೆ ಟ್ರೇಡಸ್ ಗಿಪ್ಟ್ ವೋಚರ್
ಹ್ಯುವೈ ಹ್ಯಾಂಡ್ ಸೆಟ್ ಇದೀಗ ಸಾಕಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಕಾರಣ ಟ್ರೇಡಸ್ ಗಿಪ್ಟ್ ವೋಚರ್ ಇದರೊಂದಿಗೆ ಸಿಗಲಿದೆ. ಆನ್ ಲೈನ್ ಟ್ರೇಡಿಂಗ್ ಬಿಸಿನೆಸ್ ಮಾಡುವ ಟ್ರೇಡಸ್ ಕಂಪೆನಿ ಐಬಿಬೋ.ಕಾಮ್ ಜೊತೆ ಪಾರ್ಟ್ ನರ್ ಶಿಪ್ ಪ್ರಾರಂಭಿಸಿದೆ.

ಹೀಗೆ ಸಾಕಷ್ಟು ಯೋಚನೆ-ಯೋಜನೆಯೊಂದಿಗೆ ಕಾರ್ಯರೂಪಕ್ಕೆ ಇಳಿದಿರುವ ಈ ಟ್ರೇಡಸ್ ಕಂಪೆನಿ ಇದೀಗ ಹ್ಯುವೈ ಸ್ಮಾರ್ಟ್ ಫೊನ್ ಹ್ಯಾಂಡ್ ಸೆಟ್ ಜೊತೆ ರು. 1,757 ರಿಯಾಯಿತಿ ನೀಡಲಿದೆ.

ಟ್ರೇಡಸ್ ಕಂಪೆನಿಯ ಮಾರ್ಕೆಟಿಂಗ್ ಡೈರೆಕ್ಟರ್ ಆನಂದ್ ನಾರಂಗ್ ಹೇಳುತ್ತಾರೆ-"ಆನ್ ಲೈನ್ ರಿಟೇಲಿಂಗ್ ನಲ್ಲಿ ಹೇರಳವಾದ ಬೇಡಿಕೆಯಿದೆ. ಹ್ಯುವೈ ಕಂಪೆನಿಯು ಸದ್ಯಕ್ಕೆ ದೊರೆಯುತ್ತಿರುವ ಮಾರ್ಕೆಟ್ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿದೆ. ಟ್ರೇಡಸ್ ಕಂಪೆನಿಯು ಹ್ಯುವೈ ಕಂಪೆನಿಯೊಂದಿಗೆ ಸಮಾನ ಆಸಕ್ತಿ, ವ್ಯಾವಹಾರಿಕ ಕುಶಲತೆ ಹೊಂದಿದೆ. ಹಾಗಾಗಿ ಹ್ಯುವೈ ಕಂಪೆನಿಯ ಜೊತೆ ನಮ್ಮ ವ್ಯಾಪಾರ ಚೆನ್ನಾಗಿ ನಡೆಯುವ ಭರವಸೆ ಇದೆ".

ಇದೀಗ ಹ್ಯುವೈ ಮತ್ತು ಟ್ರೇಡಸ್ ಕಂಪೆನಿ ಜೊತೆಯಾಗಿ ಆಕರ್ಷಕ ಸ್ಮಾರ್ಟ್ ಫೋನ್ ಸಿರೀಸ್ ನ್ನು ಬಿಡುಗಡೆ ಮಾಡಿವೆ. ಅವು ಹ್ಯುವೈ ಐಡಿಯೋಸ್ X5 U8800-ರು. 14,307, ಹ್ಯುವೈ ಐಡಿಯೋಸ್ X2 U8500- ರು. 7,676 ಮತ್ತು ಹ್ಯುವೈ ಐಡಿಯೋಸ್ ಚಾಟ್ U8300 ಬೆಲೆ ರು. 7,130. ಒಟ್ಟಿನಲ್ಲಿ ಸಾಕಷ್ಟು ರಿಯಾಯತಿ ದರದಲ್ಲಿ ಹ್ಯುವೈ ಮೊಬೈಲ್ ಹೊಂದುವ ಅವಕಾಶವಿದೆ, ಮಿಸ್ ಮಾಡಿಕೊಳ್ಳಬೇಡಿ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot