ಹೊಸ ಎಲ್ ಜಿ ಎನ್ ಲೈಟನ್ ತುಂಬಾ ಚೆನ್ನಾಗಿದೆ

By Super
|
ಹೊಸ ಎಲ್ ಜಿ ಎನ್ ಲೈಟನ್ ತುಂಬಾ ಚೆನ್ನಾಗಿದೆ
ಎಲ್ ಜಿ ಮೊಬೈಲ್ ಜಗತ್ತಿನೆಲ್ಲೆಡೆ ಎಲ್ಲರಿಗೂ ಅಚ್ಚು-ಮೆಚ್ಚು. ಈ ಕಂಪೆನಿಯ ಭರ್ಜರಿ ಮಾರಾಟದ ಅಂಕಿ-ಅಂಶಗಳೇ ಇದಕ್ಕೆ ಸಾಕ್ಷಿ. ಇದೀಗ ಹೊಸದೊಂದು ಮೊಬೈಲ್ ಎಲ್ ಜಿ ಕಂಪೆನಿಯಿಂದ ಹೊರಬರಲಿದೆ. ಅದು ಎಲ್ ಜಿ ಎನ್ ಲೈಟನ್.

ಈ ಹೊಸ ಮೊಬೈಲ್ ಅಂತಿಂಥದಲ್ಲ, ಸೂಪರ್ ಸ್ಮಾರ್ಟ್ ಫೋನ್. ಆಂಡ್ರಾಯ್ಡ್ ಆಧಾರಿತ ಈ ಹೊಸ ಫೋನಿನ ುಳಿದ ವಿಶೇಷತೆಗಳು ಹೀಗಿವೆ. ಸೈಡ್ ಸ್ಲೈಡರ್ ಮಾದರಿಯ ಫೋನಾಗಿರುವ ಇದರ ರೂಪ ಬಲು ಸುಂದರ. ಇದರಲ್ಲಿ 800/1900 CDMA ಮತ್ತು 1 x EV.DO CDMA ನೆಟ್ ವರ್ಕ್ ಗಳಿವೆ.

ಇದರಲ್ಲಿ 114 x 58 x 15 mm ಡೈಮೆನ್ಷನ್, 157 ಗ್ರಾಮ್ ತೂಕ, QWERTY ಕೀ ಪ್ಯಾಡ್, 3.2 ಇಂಚ್ ಕೆಪಾಕ್ಟಿವ್ ಟಚ್ ಸ್ಕ್ರೀನ್, 320 x 480 ಪಿಕ್ಸೆಲ್ ರೆಸೊಲ್ಯೂಷನ್, ಪ್ರಾಕ್ಸಿಮಿಟಿ ಸೆನ್ಸರ್, ಗೂಗಲ್ ಆಂಡ್ರಾಯ್ಡ್ 2.3.4 ಜಿಂಜರ್ ಬ್ರೆಡ್ OS, 3.2 MP ಕ್ಯಾಮೆರಾ, ಆಟೋ ಫೋಕಸ್, ಡಿಜಿಟಲ್ ಝೂಮ್, ಜಿಯೋ ಟ್ಯಾಗಿಂಗ್, ಐಎಸ್ ಒ ಕಂಟ್ರೋಲ್, ವೈಟ್ ಬ್ಯಾಲೆನ್ಸ್, VGA ವಿಡಿಯೋಸ್, 640 x 480 ರೆಸೊಲ್ಯೂಷನ್ ಇದರಲ್ಲಿದೆ.

ಮಲ್ಟಿಮೀಡಿಯಾದಲ್ಲಿ ಸಾಕಷ್ಟು ಆಧುನಿಕ ಫಾರ್ಮೆಟ್ ಗಳನ್ನು ಒಳಗೊಂಡಿರುವ ಇದು ಆಡಿಯೋ/ವಿಡಿಯೋದ ಸಾಕಷ್ಟು ಸೌಲಭ್ಯ ಹೊಂದಿದೆ. ಇಂಟರ್ನೆಟ್ ಬ್ರೌಸಿಂಗ್, ಸೋಷಿಯಲ್ ನೆಟ್ ವರ್ಕಿಂಗ್, S-GPS, ಆಂತರಿಕ 150 MB ಮೆಮೊರಿ, 32 GB ಹೊರ ಮೆಮೊರಿ, 3.0 ಆವೃತ್ತಿಯ ಬ್ಲೂಟೂಥ್, ವೈ-ಫೈ, ಮೈಕ್ರೋ USB ಪೋರ್ಟ್, USB ಚಾರ್ಜಿಂಗ್ ಹೀಗೆ ಸಕಲ ಸೌಲಭ್ಯವೂ ಇದೆ.

ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಇದರ ಬೆಲೆ ರು. 10,000. ಈ ಮೊಬೈಲ್ ನೀವು ಕೊಂಡರೆ ತುಂಬಾ ಉತ್ತಮ ಆಯ್ಕೆ, ಖಂಡಿತ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X